ಶೀಘ್ರದಲ್ಲಿ ಕಡಿಮೆಯಾಗಲಿದೆ ಚಿನ್ನದ ಬೆಲೆ? ಎಷ್ಟು ಇಳಿಕೆ? ಮಾರುಕಟ್ಟೆ ತಜ್ಞರ ಭವಿಷ್ಯವಾಣಿ ಏನು?
Gold Price Prediction News: ಕಳೆದ ಕೆಲವು ತಿಂಗಳುಗಳಿಂದ ಏರುತ್ತಿರುವ ಚಿನ್ನದ ಬೆಲೆ ಶೀಘ್ರದಲ್ಲೇ ಕುಸಿಯುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆಗಳಿಂದಾಗಿ ಬೆಲೆಯಲ್ಲಿ ಶೇ.44ರಷ್ಟು ಕುಸಿತವಾಗಬಹುದೆಂದು ಅಂದಾಜಿಸಲಾಗಿದೆ.

ಚಿನ್ನ ಖರೀದಿ
Gold Price Prediction: ಕಳೆದ ಎರಡ್ಮೂರು ತಿಂಗಳಿನಿಂದ ಚಿನ್ನದ ಬೆಲೆ ಏರಿಕೆಯತ್ತ ಸಾಗುತ್ತಿದೆ. ಖ್ಯಾತ ಮಾರುಕಟ್ಟೆ ತಜ್ಞರೊಬ್ಬರು ಚಿನ್ನದ ಬೆಲೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ. ಚಿನ್ನ ಖರೀದಿ ಮತ್ತು ಹೂಡಿಕೆಗೆ ಇದು ಸೂಕ್ತ ಸಮಯವಲ್ಲ ಎಂದು ಸಲಹೆ ನೀಡಿದ್ದಾರೆ.
ಇಂದಿನ ಚಿನ್ನದ ಬೆಲೆ ಎಷ್ಟು?
ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,09,450 ರೂಪಾಯಿ ಆಗಿದೆ. ಇಂದು ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಶನಿವಾರ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ.ಗಳವರೆಗೆ ಏರಿಕೆಯಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಚಿನ್ನದ ದರ ಇಳಿಕೆಯಾಗುವ ಶುಭ ಸುದ್ದಿಯನ್ನು ಮಾರುಕಟ್ಟೆ ತಜ್ಞರು ನೀಡಿದ್ದಾರೆ.
ಹೂಡಿಕೆ ಪ್ರಮಾಣದಲ್ಲಿ ಕುಸಿತ
ಸದ್ಯ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯನ್ನು ತಲುಪಿದೆ. ಈ ಹಿನ್ನೆಲೆ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆ ಪ್ರಮಾಣ ಕಡಿಮೆ ಮಾಡುತ್ತಿದ್ದಾರೆ. ಬೆಲೆ ಏರಿಕೆ ಸಂದರ್ಭದಲ್ಲಿ ಸಹಜವಾಗಿ ಹೂಡಿಕೆ ಕಡಿಮೆಯಾಗಿ ಬೇಡಿಕೆ ಕುಸಿಯುತ್ತದೆ.
ಶೇ.44ರಷ್ಟು ಕುಸಿತ ಸಾಧ್ಯತೆ
ಮಾರುಕಟ್ಟೆ ತಜ್ಞರಾಗಿರುವ ಸ್ಮಿಥ್ ಥಕ್ಕರ್, ಬಡ್ಡಿದರದಲ್ಲಿ ಹೆಚ್ಚಳ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ವಿತತೆಯ ಕಾರಣಗಳಿಂದ ಚಿನ್ನದ ಬೆಲೆ ಕುಸಿಯಬಹುದು ಎಂದು ಅಂದಾಜಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸಣ್ಣ ಬದಲಾಣೆಗಳು ಚಿನ್ನದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುತ್ತಾರೆ. ಸ್ಮಿಥ್ ಥಕ್ಕರ್ ಅವರ ಪ್ರಕಾರ, ಶೇ.44ರಷ್ಟು ಚಿನ್ನದ ಕುಸಿಯಬಹುದು ಎಂದು ಭವಿಷ್ಯವಾಣಿ ನುಡಿದಿದ್ದಾರೆ.
ಚಿನ್ನಕ್ಕೆ ಮೊದಲ ಆದ್ಯತೆ
ಭಾರತದಲ್ಲಿ ಪ್ರತಿಯೊಂದು ಶುಭ ಸಮಾರಂಭದಲ್ಲಿ ಹಳದಿ ಲೋಹಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಕನಿಷ್ಠ 1 ಗ್ರಾಂ ಚಿನ್ನವನ್ನಾದ್ರೂ ಖರೀದಿ ಮಾಡಬೇಕು ಅನ್ನೋದು ಭಾರತೀಯರ ಕನಸು ಆಗಿರುತ್ತದೆ. ಸ್ಮಿಥ್ ಥಕ್ಕರ್ ಪ್ರಕಾರ, ದೀಪಾವಳಿಗೂ ಮುಂಚೆಯೇ ಬೆಲೆ ಕಡಿಮೆಯಾಗಬಹುದು ಅಂತಿದ್ದಾರೆ. ಆದ್ರೆ ಇದೆಲ್ಲವೂ ಮಾರುಕಟ್ಟೆಯ ಬದಲಾವಣೆಗಳನ್ನು ಅವಲಂಭಿಸಿರುತ್ತದೆ.
ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ ಬ್ಯಾಂಕ್ಗಿಂತಲೂ ಅಧಿಕ ಬಡ್ಡಿ: PM Mahila Samman ಯೋಜನೆ ಡಿಟೇಲ್ಸ್ ಇಲ್ಲಿದೆ
ಹೂಡಿಕೆಗೆ ಸೂಕ್ತ ಸಮಯವಲ್ಲ
ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುತ್ತಾರೆ. ಆದ್ರೆ ಇದು ಚಿನ್ನದ ಹೂಡಿಕೆಗೆ ಸೂಕ್ತ ಸಮಯವಲ್ಲ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಿದ್ದಾರೆ. ಇದೇ ರೀತಿ ಬೆಳ್ಳಿ ಬೆಲೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಭಾರತದ ಟಾಪ್ 5 ಬಿಲಿಯನೇರ್‌ಗಳು ಮತ್ತು ಅವರ ಯಶಸ್ಸಿನ ಕಥೆ, ಅಪಾರ ಸಂಪತ್ತು ಗಳಿಸಿದ್ದು ಹೇಗೆ?