ಸೆ.22ರಿಂದ ಹೊಸ ಜಿಎಸ್‌ಟಿ ದರ, ವಸ್ತು ಖರೀದಿಸುವಾಗ MRP ಡಬಲ್ ಚೆಕ್ ಮಾಡಬೇಕು ಯಾಕೆ?
ಸೆ.22ರಿಂದ ಹೊಸ ಜಿಎಸ್‌ಟಿ ದರ, ವಸ್ತು ಖರೀದಿಸುವಾಗ ಎಂಆರ್‌ಪಿ ಡಬಲ್ ಚೆಕ್ ಮಾಡಿ, ಇಲ್ಲದಿದ್ದರೆ ಹಳೇ ದರ ನೀಡಬೇಕಾಗಬಹುದು. ಹೀಗಾಗಿ ವಸ್ತು ಖರೀದಿಸುವಾಗ ಎಂಆರ್‌ಪಿ ಡಬಲ್ ಚೆಕ್ ಮಾಡಿ.

ಎಂಆರ್‌ಪಿ ಡಬಲ್ ಚೆಕ್ ಮಾಡಿ
ಎಂಆರ್‌ಪಿ ಡಬಲ್ ಚೆಕ್ ಮಾಡಿ
ಭಾರತದಲ್ಲಿ ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಕಡಿತಗೊಳ್ಳುತ್ತಿದೆ. ಶೇಕಡಾ 28ರಷ್ಟಿದ್ದ ಜಿಎಸ್‌ಟಿ ತೆರಿಗೆ ಶೇಕಡಾ 18 ಹಾಗೂ ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಹೀಗಾಗಿ ಅಗತ್ಯ ವಸ್ತುಗಳು, ವಾಹನಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಭಾರಿ ಇಳಿಕೆಯಾಗುತ್ತಿದೆ. ಸೆಪ್ಟೆಂಬರ್ 22ರಿಂದ ನೀವು ವಸ್ತುಗಳ ಖರೀದಿಸುವಾಗ ಬೆಲೆ ಪರಿಶೀಲನೆ ಮಾಡಬೇಕು. ಎಂಆರ್‌ಪಿ ಬೆಲೆ ಡಬಲ್ ಚೆಕ್ ಮಾಡಿ ಖರೀದಿ ಮಾಡಬೇಕು, ಇಲ್ಲದಿದ್ದರೆ ಮೊದಲಿನ ದರ ಪಾವತಿಸಬೇಕಾಗುತ್ತದೆ.
ಸೆ.22ರಿಂದ ಪರಿಷ್ಕೃತ ಜಿಎಸ್‌ಟಿ ದರ ಅನ್ವಯ
ಸೆ.22ರಿಂದ ಪರಿಷ್ಕೃತ ಜಿಎಸ್‌ಟಿ ದರ ಅನ್ವಯ
ಸೆಪ್ಟೆಂಬರ್ 22 ರಿಂದ ಪರಿಷ್ಕೃತ ಜಿಎಸ್‌ಟಿ ಅನ್ವಯವಾಗುತ್ತದೆ. ಆದರೆ ಮಾರುಕಟ್ಟೆ,ಸೂಪರ್ ಮಾರ್ಕೆಟ್, ಮಾಲ್‌ಗಳಲ್ಲಿ ಸೆಪ್ಟೆಂಬರ್ 22 ರಿಂದ ಹೊಸ ಪ್ಯಾಕ್, ಹೊಸ ಜಿಎಸ್‌ಟಿ ದರ ಅನ್ವಯದ ವಸ್ತುಗಳು ಇರಬೇಕು ಎಂದಿಲ್ಲ. ಆದರೆ ಸೆಪ್ಟೆಂಬರ್ 22 ರಿಂದ ಎಲ್ಲಾ ವಸ್ತುಗಳನ್ನು ಹೊಸ ಜಿಎಸ್‌ಟಿ ದರದಲ್ಲೇ ಮಾರಾಟ ಮಾಡಬೇಕು. ಹೀಗಾಗಿ ಗ್ರಾಹಕರು ಹಳೇ ಬೆಲೆ ನೀಡಿ ಮೋಸ ಹೋಗುವ ಸಾಧ್ಯತೆ ಇದೆ.
ವಸ್ತುವಿನ ಬೆಲೆ ಪರಿಶೀಲನೆ ಅಗತ್ಯ
ವಸ್ತುವಿನ ಬೆಲೆ ಪರಿಶೀಲನೆ ಅಗತ್ಯ
ಸೆಪ್ಟೆಂಬರ್ 22ರಿಂದ ಹಳೇ ವಸ್ತುಗಳು ಅಥವಾ ಪ್ಯಾಕ್ ಮೇಲೆ ಹಳೇ ಬೆಲೆ ಇದ್ದರೂ, ಹೊಸ ಜಿಎಸ್‌ಟಿ ದರದ ಮೂಲಕ ವಸ್ತು ಮಾರಾಟ ಮಾಡಬೇಕು. ಇದಕ್ಕಾಗಿ ವ್ಯಾಪಾರಸ್ಥರು ಹೊಸ ದರದ ಸ್ಟಿಕ್ಕರ್ ಅಂಟಿಸಬೇಕು, ಇಲ್ಲದಿದ್ದರೆ ಹೊಸ ದರ ಲೇಸರ್ ಪ್ರಿಂಟ್ ಮಾಡಿಸಬೇಕು. ಇದೇ ಕಾರಣಕ್ಕೆ ಗ್ರಾಹಕರು ಎಂಆರ್‌ಪಿ ಡಬಲ್ ಚೆಕ್ ಮಾಡಬೇಕು
ನೀವು ಮೋಸ ಹೋಗಬೇಡಿ
ವಸ್ತು ಖರೀದಿಸುವಾಗ ಬೆಲೆ ಪರಿಶೀಲನೆ ಮಾಡಿ. ಹಳೇ ಬೆಲೆಗೂ ಈಗಿನ ಬೆಲೆಯೂ ಯಾವುದೇ ವ್ಯತ್ಯಸವಿಲ್ಲದಿದ್ದರೆ ಪ್ರಶ್ನಿಸಿ. ಉದಾಹರಣೆಗೆ ಒಂದು ವಸ್ತುವಿನ ಹಳೇ ಬೆಲೆ 50 ರೂಪಾಯಿ ಎಂದಿದ್ದರೆ, ಹೊಸ ಜಿಎಸ್‌ಟಿ ಅನ್ವಯ 45 ರೂಪಾಯಿ ಆಗಿದ್ದರೆ, ನೀವು ಹಳೆ ಬೆಲೆ ನೀಡುವಂತಿಲ್ಲ. ಆದರೆ ಅಂಗಡಿ ಮಾಲೀಕರು ಹಳೇ ಬೆಲೆ ಕೇಳಿದರೆ, ಅಥವಾ ನಮೂದಿಸದಿದ್ದರೆ, ನೀವು ಮೋಸ ಹೋಗಬೇಡಿ.
ಹಳೇ ಪ್ಯಾಕ್ ಮಾರ್ಚ್ 31, 2026ರ ಮಾರಾಟಕ್ಕೆ ಅವಕಾಶ
ಹಳೇ ಪ್ಯಾಕ್ ಮಾರ್ಚ್ 31, 2026ರ ಮಾರಾಟಕ್ಕೆ ಅವಕಾಶ
ಈಗಾಗಲೇ ಪ್ಯಾಕ್ ಮಾಡಿರುವ ವಸ್ತುಗಳು, ಹಳೇ ಜಿಎಸ್‌ಟಿ ಅನ್ವಯ ಬೆಲೆ ಮುದ್ರಿಸಿರುವ ಪ್ಯಾಕ್‌ಗಳು, ವಸ್ತುಗಳ ಮಾರಾಟಕ್ಕೆ ಮಾರ್ಚ್ 31,2026ರವರೆಗೆ ಅವಕಾಶ ನೀಡಲಾಗಿದೆ. ಇದಕ್ಕೂ ಮೊದಲೇ ಹಳೇ ಸ್ಟಾಕ್ ಮುಗಿದರೂ ಸಮಸ್ಯೆಯಿಲ್ಲ. ಆದರೆ ಮಾರ್ಚ್ 026ಕ್ಕಿಂತ ನಂತರ ಈ ಪ್ಯಾಕ್ ಮಾರಾಟ ಮಾಡುವಂತಿಲ್ಲ.
ಹೊಸ ದರ ಪಟ್ಟಿ ಪ್ರಕಟಿಸಲು ಕೇಂದ್ರದ ಸೂಚನೆ
ಹೊಸ ದರ ಪಟ್ಟಿ ಪ್ರಕಟಿಸಲು ಕೇಂದ್ರದ ಸೂಚನೆ
ಎಲ್ಲಾ ಅಂಗಡಿ, ಮಾರುಕಟ್ಟೆಯಲ್ಲಿ ಹೊಸ ದರ ಪಟ್ಟಿಯನ್ನು ಪ್ರಕಟಿಸಲು ಸೂಚಿಸಿದೆ. ಇದರಿಂದ ಪ್ಯಾಕ್ ಮೇಲೆ ಹಳೇ ದರ ಇದ್ದರೂ ಹೊಸ ದರ ಪಟ್ಟಿ ಅನ್ವಯ ಗ್ರಾಹಕರು ಯಾವುದೇ ಗೊಂದಲವಿಲ್ಲದೆ ವಸ್ತುಗಳ ಖರೀದಿಗೆ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.