ತಿಂಗಳ ಆರಂಭ, ದಸರಾ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಆಘಾತ: LPG ದರ ಏರಿಕೆ
LPG Price Today: ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ದರವನ್ನು ಪರಿಷ್ಕರಿಸಿದ್ದು, ಗೃಹ ಬಳಕೆ ಸಿಲಿಂಡರ್ ಬೆಲೆ ಸ್ಥಿರವಾಗಿದ್ದರೆ, ವಾಣಿಜ್ಯ ಬಳಕೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ.

ಎಲ್‌ಪಿಜಿ ಬೆಲೆ
ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕೃತ ಮಾಡುತ್ತವೆ. ಚಿನ್ನದ ಬೆಲೆ ಏರಿಕೆಯಿಂದ ಸುಸ್ತಾಗಿರುವ ಜನರಿಗೆ ಎಲ್‌ಪಿಜಿ ಬೆಲೆ ಏನಾಗುತ್ತೆ ಅಂತ ಕಾಯುತ್ತಿದ್ದರು. ಇಂದಿನ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ ಎಂದು ನೋಡೋಣ ಬನ್ನಿ.
ಗೃಹ ಬಳಕೆ ಸಿಲಿಂಡರ್ ದರ
ಗೃಹ ಬಳಕೆಯ 14 ಕೆಜಿಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಗೃಹ ಬಳಕೆ ಸಿಲಿಂಡರ್ ದರ ಸ್ಥಿರವಾಗಿವೆ. 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ದರಗಳು ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ದರ 51.50 ರೂ.ಗಳಷ್ಟು ಕಡಿಮೆಯಾಗಿತ್ತು. ಇಂದು 19 ಕೆಜಿ ಸಿಲಿಂಡರ್ ಬೆಲೆ ಈ ಕೆಳಗಿನಂತಿದೆ.
19 ಕೆಜಿ ಸಿಲಿಂಡರ್ ಬೆಲೆ
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 15 ರೂ.ಗಳವರೆಗೆ ಹೆಚ್ಚಳವಾಗಿದೆ. ದೆಹಲಿಯಲ್ಲಿ 1595.50 ರೂಪಾಯಿ, ಕೋಲ್ಕತ್ತಾದಲ್ಲಿ 1700 ರೂಪಾಯಿ, ಮುಂಬೈನಲ್ಲಿ 1547 ರೂಪಾಯಿ, ಚೆನ್ನೈನಲ್ಲಿ 1754 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ ದರ?
14 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆ 855.50 ರೂಪಾಯಿ ಆಗಿದೆ. 19 ಕೆಜಿ ಸಿಲಿಂಡರ್ ಬೆಲೆ 1,699 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿಯೂ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 51 ರೂಪಾಯಿ ಏರಿಕೆಯಾಗಿದೆ.
ಬೆಲೆ ನಿರ್ಧಾರ ಹೇಗೆ ಆಗುತ್ತೆ?
ಜಾಗತೀಕ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಳಿತ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಏರಿಳಿತಗಳು ದರ ವ್ಯತ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಈ ಮಾರುಕಟ್ಟೆ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ತೈಲ ಕಂಪನಿಗಳು ಪ್ರತಿ ತಿಂಗಳು ಬೆಲೆಗಳನ್ನು ಪರಿಷ್ಕರಿಸುತ್ತವೆ.
ಇದನ್ನೂ ಓದಿ: ಇಂದಿನ ಚಿನ್ನದ ಬೆಲೆ ಕೇಳಿದ್ರೆ ನಿದ್ದೆ ಮಾಡ್ತಿದ್ರೂ ಬೆಚ್ಚಿ ಬೀಳ್ತೀರಿ; ಏರಿಕೆಯಾದ ಬೆಲೆ ಹಲವು ಜನರ ತಿಂಗಳ ಸಂಬಳ
ಮೊಬೈಲ್ ಕಂಪನಿ ರೀತಿ ಇನ್ನು ಎಲ್‌ಪಿಜಿ ಕಂಪನಿ ಬದಲಾವಣೆ
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಕರ ಸೇವೆಯಿಂದ ಬೇಸತ್ತಿದ್ದಲ್ಲಿ, ಗ್ರಾಹಕರು ಇನ್ನು ತಮ್ಮಿಷ್ಟದ ಕಂಪನಿಗಳಿಂದ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೊಳ್ಳುಗರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿದೆ.
ಇದನ್ನೂ ಓದಿ: ಇತಿಹಾಸದಲ್ಲೇ ಪ್ರಥಮ ಬಾರಿಗೆ 1 ಟ್ರಿಲಿಯನ್ ಡಾಲರ್ ತಲುಪಿದ ಅಮೆರಿಕದ ಚಿನ್ನ, ಭಾರತದಲ್ಲಿನ್ನು ಚಿನ್ನ ಖರೀದಿ ಕನಸಷ್ಟೇ!