ಹಬ್ಬದ ಸೀಸನ್ ಧಮಾಕ, ಹೀರೋ ಬೈಕ್ -ಸ್ಕೂಟರ್‌ಗೆ ಭರ್ಜರಿ ಡಿಮ್ಯಾಂಡ್
ಹಬ್ಬದ ಸೀಸನ್ ಧಮಾಕ, ಹೀರೋ ಬೈಕ್ -ಸ್ಕೂಟರ್‌ಗೆ ಭರ್ಡರಿ ಡಿಮ್ಯಾಂಡ್ ಬರುತ್ತಿದೆ. ಜಿಎಸ್‌ಟಿ ಕಡಿತ, ಹಬ್ಬದ ಆಫರ್ ಸೇರಿದಂತೆ ಹಲವು ಕಾರಣಗಳಿಂದ ಹೀರೋ ಮೋಟೋಕಾರ್ಪ್ ಮಾರಾಟದಲ್ಲಿ ಭರ್ಜರಿ ದಾಖಲೆ ಕಂಡಿದೆ.

ಹಬ್ಬದ ಆಫರ್, ಹೀರೋ ದ್ವಿಚಕ್ರವಾಹನಕ್ಕೆ ಬೇಡಿಕೆ
ಹಬ್ಬದ ಆಫರ್, ಹೀರೋ ದ್ವಿಚಕ್ರವಾಹನಕ್ಕೆ ಬೇಡಿಕೆ
ನವರಾತ್ರಿ ಹಬ್ಬದ ಆರಂಭದೊಂದಿಗೆ ಹಬ್ಬದ ಸೀಸನ್ ಕೂಡ ಶುರುವಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಆಟೋ ಮಾರುಕಟ್ಟೆಯು ಕೂಡ ಹುಮ್ಮಸ್ಸಿನ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಏಕೆಂದರೆ ಈ ವರ್ಷ ದ್ವಿಚಕ್ರ ವಾಹನಗಳ ಮೇಲಿನ ಜಿ ಎಸ್ ಟಿ ಇಳಿಕೆ ಆಗಿರುವುದರಿಂದ ವಿಶೇಷವಾಗಿ 100 ಸಿಸಿ ಮತ್ತು 125 ಸಿಸಿ ವಿಭಾಗಗಳಲ್ಲಿ ವೆಚ್ಚದ ಭಾರ ಕಡಿಮೆ ಆಗಿದೆ. ಹಾಗಾಗಿ ಮೊದಲ ಬಾರಿಗೆ ದ್ವಿಚಕ್ರ ಖರೀದಿ ಮಾಡುವವರು ಈ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಭಾರತದ ಅತ್ಯಂತ ಪ್ರತಿಷ್ಠಿತ ಹೀರೋ ಮೋಟೋಕಾರ್ಪ್ ಕಂಪನಿಯು ಭಾರತದಾದ್ಯಂತ ಗ್ರಾಹಕರಿಂದ ಭಾರಿ ಬೇಡಿಕೆಯನ್ನು ಎದುರಿಸುತ್ತಿದೆ.
ಜಿಎಸ್‌ಟಿ ಕಡಿತದ ಬಳಿಕ ಭಾರಿ ಡಿಮ್ಯಾಂಡ್
ಜಿಎಸ್‌ಟಿ ಕಡಿತದ ಬಳಿಕ ಭಾರಿ ಡಿಮ್ಯಾಂಡ್
ಕಂಪನಿಯು ದೇಶಾದ್ಯಂತ ತನ್ನ ಡೀಲರ್ ಶಿಪ್ ಗಳಲ್ಲಿನ ಚಟುವಟಿಕೆಗಲು ಗಮಾನರ್ಹ ಏರಿಕೆಯಾಗಿರುವುದು ಗಮನಿಸಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೀರೋ ಮೋಟೋಕಾರ್ಪ್ ಉತ್ಪನ್ನಗಳ ಮೇಲಿನ ಗ್ರಾಹಕರ ಆಸಕ್ತಿಯು ಗಣನೀಯವಾಗಿ ಏರಿದೆ. ಅದಕೆ ಜಿ ಎಸ್ ಟಿ ಇಳಿಕೆಯಿಂದ ಉಂಟಾಗಿರುವ ಬೆಲೆ ರಿಯಾಯಿತಿಯು ಕಾರಣವಾಗಿದೆ. ಅದಕ್ಕೆ ಪೂರಕವಾಗಿ, ಕಳೆದ ವರ್ಷಕ್ಕೆ ಹೋಲಿಸಿದರೆ ಶೋರೂಂಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಶೇ.50ರಷ್ಟು ಜಾಸ್ತಿಯಾಗಿದೆ.
ಭಾರಿ ಬೇಡಿಕೆಯತ್ತ ಹೀರೋ
ಭಾರಿ ಬೇಡಿಕೆಯತ್ತ ಹೀರೋ
ಈ ಹಬ್ಬದ ಋತುವಿನ ವಿಶೇಷವೆಂದರೆ ಆಟೋಮೊಬೈಲ್ ಖರೀದಿಗಳಲ್ಲಿ ತೀವ್ರ ಏರಿಕೆ ಆಗಿರುವುದು. ನವರಾತ್ರಿಯ ಮೊದಲ ದಿನದಂದೇ ನಮ್ಮ ಶೋರೂಂಗೆ ಬಂದು ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನವನ್ನು ಖರೀದಿಸಿದ ಗ್ರಾಹಕರ ಸಂಖ್ಯೆ ಕಳೆದ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಹೀರೋ ಮೋಟೋಕಾರ್ಪ್ ಬಿಸಿನೆಸ್ ಆಫೀಸರ್ ಅಶುತೋಷ್ ವರ್ಮಾ ಹೇಳಿದ್ದರೆ.
ಜಿ ಎಸ್ ಟಿ 2.0 ಜೊತೆಗೆ ಹೊಸ ಬೆಲೆಯನ್ನು ಎದುರು ನೋಡುತ್ತಾ ಕೊಂಚ ಸ್ಥಿರವಾಗಿದ್ದ ಮಾರಾಟವು ಇದೀಗ ಭಾರಿ ಚೇತರಿಕೆ ಕಂಡಿದೆ ಮತ್ತು ಗ್ರಾಹಕರು ತಕ್ಷಣ ಹೊಸ ವಾಹನವನ್ನು ಖರೀದಿಸಲು ಮುಂದಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಹೊಸದಾಗಿ ಬಿಡುಗಡೆಯಾದ 12 ವಿಭಾಗ ಪ್ರಮುಖ ಮಾಡೆಲ್ ಗಳ ಹಬ್ಬದ ಶ್ರೇಣಿಯು ಸ್ಕೂಟರ್ ಮತ್ತು ಮೋಟಾರ್ ಸೈಕಲ್ ವಿಭಾದಲ್ಲಿನ ಬೇಡಿಕೆಯನ್ನು ಏರಿಸಿದೆ. ಡಿಜಿಟಲ್ ನಲ್ಲಿ ವಿಚಾರಣೆ ಮತ್ತು ಶೋರೋಮೂ ವಿಚಾರಣೆಗಳು ಕೂಡ ಹೆಚ್ಚಾಗಿದ್ದು, ನಮ್ಮ ಉತ್ಪನ್ನಗಳಿಗಾಗಿ ನಡೆದ ಆನ್ ಲೈನ್ ಹುಡುಕಾಟಗಳು ಸಾರ್ವಕಾಲಿಕ ಗರಿಷ್ಠ ಸಂಖ್ಯೆ ದಾಟಿದ್ದು, 3 ಪಟ್ಟು ಜಿಗಿತ ಕಂಡಿವೆ” ಎಂದು ಹೇಳಿದರು.
ಕ್ಯಾಶ್‌ಬ್ಯಾಕ್ ಸೇರಿ ಹಲವು ಆಫರ್
ಕ್ಯಾಶ್‌ಬ್ಯಾಕ್ ಸೇರಿ ಹಲವು ಆಫರ್
ಶೇ.100 ಜಿ ಎಸ್ ಟಿ ಪ್ರಯೋಜನಗಳ ಜೊತೆಗೆ ಹೀರೋ ಮೋಟೋಕಾರ್ಪ್ ಸಂಸ್ಥೆಯು ಮೊದಲ ಬಾರಿಗೆ ಖರೀದಿ ಮಾಡುತ್ತಿರುವವರಿಗೆ ದೊಡ್ಡ ಲಾಭವನ್ನು ಒದಗಿಸುವುದಾಗಿ ಘೋಷಿಸಿದ್ದು, ಅವರಿಗೆ ಹೀರೋ ಗುಡ್‌ಲೈಫ್ ಫೆಸ್ಟಿವ್ ಕ್ಯಾಂಪೇನ್ ಎಂಬ ಹಬ್ಬದ ಅಭಿಯಾನದ ಮೂಲಕ ಉತ್ತಮ ಲಾಯಲ್ಟಿ ಮತ್ತು ರಿವಾರ್ಡ್ಸ್ ಒದಗಿಸಿ ಹಬ್ಬವನ್ನು ಇನ್ನಷ್ಟು ಸಂತೋಷದಾಯಕವಾಗಿಸಲಿದೆ. “ಆಯಾ ತ್ಯೋಹಾರ್, ಹೀರೋ ಪೇ ಸವಾರ್” ಎಂಬ ಹಬ್ಬದ ಅಭಿಯಾನದ ಟ್ಯಾಗ್ ಲೈನ್ ಗೆ ತಕ್ಕಂತೆ ಈ ರಾಷ್ಟ್ರವ್ಯಾಪಿ ಕ್ಯಾಂಪೇನ್ ಪ್ರತಿಯೊಬ್ಬ ಹೊಸ ಗ್ರಾಹಕನಿಗೆ 100% ಕ್ಯಾಶ್ ಬ್ಯಾಕ್, ಚಿನ್ನದ ನಾಣ್ಯಗಳು ಮತ್ತು ಇನ್ನೂ ಹಲವಾರು ವಿಶೇಷ ಪ್ರಯೋಜನಗಳನ್ನು ಒದಗಿಸಲಿದೆ.
ಜನಪ್ರಿಯ ಮಾಡೆಲ್ ಮಾರಾಟ ದುಪ್ಪಟ್ಟು
ಜನಪ್ರಿಯ ಮಾಡೆಲ್ ಮಾರಾಟ ದುಪ್ಪಟ್ಟು
ಡೆಸ್ಟಿನಿ 110, ಝೂಮ್ 160, ಗ್ಲಾಮರ್ ಎಕ್ಸ್ 125, ಎಚ್‌ಎಫ್ ಡಿಲಕ್ಸ್ ಪ್ರೋನಂತಹ ಹೊಸ ಉತ್ಪನ್ನಗಳ ಮೂಲಕ ಹೀರೋ ಮೋಟೋಕಾರ್ಪ್ ದೈನಂದಿನ ವಿಭಿನ್ನ ಸಾರಿಗೆ ಅಗತ್ಯಗಳನ್ನು ಪೂರೈಸಲು ವಿನೂತನ ಮತ್ತು ಸ್ಟೈಲಿಶ್ ಆಯ್ಕೆಗಳನ್ನು ಒದಗಿಸುತ್ತಿದೆ. ಈ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಸ್ಟಾಕ್ ಖಾಲಿಯಾಗುವುದನ್ನು ತಪ್ಪಿಸಲು ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಜನಪ್ರಿಯ ಮಾಡೆಲ್ ಗಳು ಮತ್ತು ಬಣ್ಣದ ಆಯ್ಕೆಗಳ ಪೂರೈಕೆ ಜಾಸ್ತಿಯಾಗುವಂತೆ ನೋಡಿಕೊಂಡಿದೆ.