- Home
- Karnataka Districts
- Bengaluru Urban
- Bengaluru Traffic: ಬೆಂಗಳೂರಿನ ಈ ರಸ್ತೆಯಲ್ಲಿ ಶೇ.10 ಟ್ರಾಫಿಕ್ ಇಳಿಕೆ; ನೆಮ್ಮದಿಯಾಗಿ ಆಫಿಸ್‌ಗೆ ಹೋಗಿ ಬನ್ನಿ
Bengaluru Traffic: ಬೆಂಗಳೂರಿನ ಈ ರಸ್ತೆಯಲ್ಲಿ ಶೇ.10 ಟ್ರಾಫಿಕ್ ಇಳಿಕೆ; ನೆಮ್ಮದಿಯಾಗಿ ಆಫಿಸ್‌ಗೆ ಹೋಗಿ ಬನ್ನಿ
ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಹಳದಿ ಮೆಟ್ರೋ ಆರಂಭದ ನಂತರ ಟ್ರಾಫಿಕ್ ಗಮನಾರ್ಹವಾಗಿ ಕಡಿಮೆಯಾಗಿದೆ. ಪೀಕ್ ಅವರ್‌ಗಳಲ್ಲಿ ಶೇ.10 ರಷ್ಟು ಸಂಚಾರ ದಟ್ಟಣೆ ಇಳಿಕೆಯಾಗಿದ್ದು, ಜನರು ಮೆಟ್ರೋಗೆ ಮೊರೆ ಹೋಗುತ್ತಿದ್ದಾರೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿನ ಟ್ರಾಫಿಕ್ ಗಮನಾರ್ಹವಾಗಿ ಇಳಿಕೆಯಾಗಿದೆ. ಪೀಕ್ ಅವರ್‌ನಲ್ಲಿ ಶೇಕಡಾ 10 ರಷ್ಟು ಟ್ರಾಫಿಕ್ ಕಡಿಮೆಯಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಹಳದಿ ಮೆಟ್ರೋ ರೈಲು ಸಂಚಾರದಿಂದಾಗಿ ನಗರದ ಅತ್ಯಧಿಕ ಟ್ರಾಫಿಕ್ ಜಾಮ್ ಉಂಟಾಗುವ ಸಿಲ್ಕ್ ಬೋರ್ಡ್ ಜಂಕ್ಷನ್ ಭಾಗದಲ್ಲಿಯೂ ಸಂಚಾರ ದಟ್ಟಣೆ ಇಳಿಕೆಯಾಗಿದೆ.
ಈ ಭಾಗದಲ್ಲಿ ಆಗಸ್ಟ್ 10 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಚರಣೆ ಆರಂಭವಾಗಿದೆ. ಈ ಹಿನ್ನೆಲೆ ಹೊಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಇಳಿಕೆಯಾಗಿದೆ. ಆಗಸ್ಟ್ 9ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳದಿ ಮಾರ್ಗದ ಮೆಟ್ರೋ ರೈಲಿಗೆ ಚಾಲನೆ ನೀಡಿದ್ದರು. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಭಾಗಕ್ಕೆ ತೆರಳುವ ಹೆಚ್ಚಿನ ಜನರು ಮೆಟ್ರೋ ರೈಲುಗಳನ್ನು ಬಳಸುತ್ತಿದ್ದಾರೆ.
ಎಷ್ಟು ಟ್ರಾಫಿಕ್ ಇಳಿಕೆಯಾಗಿದೆ?
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸೋಮವಾರ 11.5 ಕಿ.ಮೀ.ನಷ್ಟು ಟ್ರಾಫಿಕ್ ಇಳಿಕೆಯಾಗಿದೆ. ಅದರಲ್ಲಿಯೀ ಪೀಕ್ ಅವರ ಸಂಜೆ 4 ರಿಂದ ರಾತ್ರಿ 9 ರವರೆಗೆ ಸಮಯದಲ್ಲಿಯೇ ಸಂಚಾರ ದಟ್ಟಣೆ ಕಡಿಮೆಯಾಗಿತ್ತು. Traffic Density ಶೇ.31 (21 ಕಿ.ಮೀ) ಕಡಿಮೆಯಾಗಿದೆ. ಮರುದಿನ ಅಂದ್ರ ಆಗಸ್ಟ್ 12ರ ಬೆಳಗ್ಗೆ 7 ರಿಂದ 11ರ ನಡುವೆ Traffic Density 22% (7 ಕಿ.ಮೀ) ಕಡಿಮೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಅತ್ಯಧಿಕ ಐಟಿ ಕಂಪನಿಗಳಿವೆ. ಈ ಭಾಗಕ್ಕೆ ತೆರಳುವ ಜನರು ವಾಹನಗಳ ಬದಲಾಗಿ ಮೆಟ್ರೋ ಬಳಕೆಗೆ ಮುಂದಾಗಿದ್ದಾರೆ. ಇದರಿಂದ ಫ್ಲೈ ಓವರ್ ಕೆಳಗಿನ ರಸ್ತೆಯಲ್ಲಿ ವಾಹನ ಸಂಚಾರ ಇಳಿಕೆಯಾಗುತ್ತಿದೆ. ಈ ಹಿಂದೆ ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆಯಾದ ಸಂದರ್ಭದಲ್ಲಿಯೂ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಕ್ಕಿತ್ತು.
ಸದ್ಯ ಹಳದಿ ಮೆಟ್ರೋ ಭಾಗದಲ್ಲಿ 25 ನಿಮಿಷಕ್ಕೊಂದು ರೈಲು ಚಲಿಸುತ್ತಿವೆ. ಈ ಕಾರಣದಿಂದಾಗಿ ಆರ್‌ವಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಮತ್ತು ಇನ್ಫೋಸಿಸ್ ಕೊನ್ನಪ್ಪನ ಅಗ್ರಹಾರದಂತಹ ಪ್ರಮುಖ ನಿಲ್ದಾಣಗಳಲ್ಲಿ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.