ಬೇರಾವ ಮಾರ್ಗದಲ್ಲಿರದ ವಿಶೇಷ ಸೌಲಭ್ಯ ನೀಡಲಿದೆ ನೀಲಿ ಮೆಟ್ರೋ ರೈಲು
Blue Line Namma Metro BMRCL: ನೀಲಿ ಮೆಟ್ರೋ ರೈಲು: ಬೆಂಗಳೂರಿನ ನೀಲಿ ಮಾರ್ಗದ ಮೆಟ್ರೋ ರೈಲುಗಳು ಪ್ರಯಾಣಿಕರಿಗೆ ವಿಶೇಷ ಸೌಲಭ್ಯವನ್ನು ಒದಗಿಸಲಿವೆ. ಈ ಸೌಲಭ್ಯಕ್ಕೆ ನಿಗಧಿತ ಶುಲ್ಕವನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ.

ನೀಲಿ ಮಾರ್ಗ ಮೆಟ್ರೋ
ನೀಲಿ ಮಾರ್ಗ ಮೆಟ್ರೋ ಆರಂಭಕ್ಕೂ ಮುನ್ನ ಪ್ರಯಾಣಿಕರ ನಿರೀಕ್ಷೆ ಹೆಚ್ಚಾಗಿದೆ. ನೇರಳೆ, ಹಳದಿ ಮತ್ತು ಹಸಿರು ಮಾರ್ಗದಲ್ಲಿ ಇರದ ಹೊಸ ಸೌಲಭ್ಯವನ್ನು ನೀಲಿ ಮಾರ್ಗದ ಮೆಟ್ರೋ ರೈಲುಗಳು ಹೊಂದಿರಲಿದೆ. ನೀಲಿ ಮಾರ್ಗದ ಮೆಟ್ರೋ ರೈಲು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಿದೆ.
ಲಗೇಜ್ ರ‍್ಯಾಕ್
ಹೌದು, ನೀಲಿ ಮಾರ್ಗದ ಮೈಟ್ರೋ ರೈಲುಗಳು ಲಗೇಜ್ ರ‍್ಯಾಕ್ ಹೊಂದಿರಲಿವೆ. ಸದ್ಯ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ಮೆಟ್ರೋ ರೈಲುಗಳಲ್ಲಿ ಲಗೇಜ್ ಇರಿಸಲು ಯಾವುದೇ ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿಲ್ಲ. ನೀಲಿ ಮಾರ್ಗದ ಮೆಟ್ರೋ ರೈಲುಗಳು ಪ್ರತ್ಯೇಕವಾದ ಲಗೇಜ್ ವ್ಯವಸ್ಥೆಯನ್ನು ಹೊಂದಿದೆ. ಪ್ರತಿ ಬೋಗಿಯ ಎರಡು ತುದಿಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ ಸೀಟ್‌ಗಳಿಗೆ. ಈ ಸೀಟ್‌ಗಳಿರೋ ಜಾಗದಲ್ಲಿ ಲಗೇಜ್ ಇರಿಸುವ ರ‍್ಯಾಕ್ ಬರಲಿದೆ.
15 ಕೆಜಿ ತೂಕದ ವಸ್ತು
ಈ ಭಾಗದಲ್ಲಿ 60 ಸೆಂಟಿ ಮೀಟರ್ ಉದ್ದ, 45 ಸೆಂಟಿ ಮೀಟರ್ ಅಗಲ ಮತ್ತು 25 ಸೆಂಟಿ ಮೀಟರ್ ಎತ್ತರ ಬ್ಯಾಗ್‌ಗಳಲ್ಲಿ ಗರಿಷ್ಠ 15 ಕೆಜಿ ತೂಕದ ವಸ್ತುಗಳನ್ನು ಪ್ರಯಾಣಿಕರು ಉಚಿತವಾಗಿ ಕೊಂಡ್ಯುಯ್ಯಬಹುದು. ಈ ಮಿತಿಗಿಂತ ಹೆಚ್ಚಿನ ತೂಕದ ಬ್ಯಾಗ್‌ಗಳಿದ್ರೆ 30 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿಸದೇ ಬ್ಯಾಗ್ ತೆಗೆದುಕೊಂಡು ಹೋದ್ರೆ 250 ರೂ.ವರೆಗೆ ದಂಡ ವಿಧಿಸಲಾಗುತ್ತದೆ.
ವಿಮಾನ ನಿಲ್ದಾಣದಿಂದ ಹೆಬ್ಬಾಳ
ಒಟ್ಟು 38 ಕಿ.ಮೀ. ಇರುವ ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ. ಹೀಗಾಗಿ ಮೊದಲು ಈ ಹಂತವನ್ನು ಪೂರ್ಣಗೊಳಿಸಿ 2026ರ ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ತೆರೆಯುವ ಹಾಗೂ ಬಳಿಕ ಹೆಬ್ಬಾಳದಿಂದ ಕೆ.ಆರ್.ಪುರದವರೆಗಿನ ಹಂತವನ್ನು 2026ರ ಅಂತ್ಯ ಅಥವಾ 2027ರಲ್ಲಿ ತೆರೆಯಲು ಯೋಜಿಸಲಾಗಿದೆ. ಒಟ್ಟಾರೆ ಮಾರ್ಗದ ಕಾಮಗಾರಿ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ: ಮೆಟ್ರೋಗೆ ಸೇಂಟ್ ಮೇರಿ ಹೆಸರು; ಮೆಟ್ರೋಗೋಸ್ಕರ ಸ್ವಂತ ದುಡ್ಡು ಖರ್ಚು ಮಾಡಿದ್ದ Shankar Nag ನೆನಪಾಗಲಿಲ್ವಾ?
ಬಿಎಂಆರ್‌ಸಿಎಲ್
ಪ್ರಸ್ತುತ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮಾರ್ಗಗಳು ಕೂಡ ಎರಡು, ಮೂರು ಹಂತಗಳಲ್ಲಿ ಲೋಕಾರ್ಪಣೆ ಆಗಿವೆ. ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಹಾಗೂ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವನ್ನು ಕೂಡ ಎರಡು ಹಂತದಲ್ಲಿ ಜನಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್ ಯೋಜಿಸಿದೆ. ಈಗ ನೀಲಿ ಮಾರ್ಗವನ್ನು ಕೂಡ ಇದೇ ಮಾದರಿಯಲ್ಲಿ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಇನ್ನು ಐದು ತಿಂಗಳಲ್ಲಿ ಶೇಕಡಾ 5ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆ, ಬೆಂಗಳೂರಿಗರಿಗೆ ಶಾಕ್