ಇನ್ನು ಐದು ತಿಂಗಳಲ್ಲಿ ಶೇಕಡಾ 5ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆ, ಬೆಂಗಳೂರಿಗರಿಗೆ ಶಾಕ್. ನಮ್ಮ ಮೆಟ್ರೋ ಬೆಂಗಳೂರಿನಲ್ಲಿ ವಿಸ್ತರಣೆಯಾಗುತ್ತಿದ್ದಂತೆ ಹಿರಿ ಹಿರಿ ಹಿಗ್ಗಿದ ಬೆಂಗಳೂರು ಜನತೆಗೆ ಇದೀಗ ಶಾಕ್ ಎದುರಾಗಿದೆ.
ಬೆಂಗಳೂರು (ಸೆ.14) ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಪರ್ಕ ಜನರ ಪ್ರಮುಖ ಸಾರಿಗೆ ಸಂಪರ್ಕವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಟ್ರಾಫಿಕ್‌ನಿಂದ ಮೆಟ್ರೋ ಪ್ರಯಾಣ ಸುಗಮ ಹಾಗೂ ತಕ್ಕ ಸಮಯಕ್ಕೆ ತಲುಪಲು ಸಾಧ್ಯವಿದೆ. ಇತ್ತೀಚೆಗಷ್ಟೇ ಹಳದಿ ಮೆಟ್ರೋ ಕೂಡ ಸೇರ್ಪಡೆಯಾಗಿದ್ದು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಒಂದಷ್ಟು ಪರಿಹಾರ ನೀಡಿದೆ. ಆದರೆ ಬೆಂಗಳೂರು ಮೆಟ್ರೋ ಪ್ರಯಾಣ ಕೈಗೆಟುಕುತ್ತಿಲ್ಲ. ಇತ್ತೀಚೆಗೆ ಮೆಟ್ರೋ ಪ್ರಯಾಣ ದರು ಏರಿಕೆ ಮಾಡಲಾಗಿದೆ. ಬರೋಬ್ಬರಿ ಶೇಕಡಾ 71ರಷ್ಟು ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಈ ದರ ಏರಿಕೆಯಿಂದ ಪ್ರಯಾಣಿಕ ಇನ್ನು ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮೆಟ್ರೋ ಮತ್ತೊಂದು ದರ ಏರಿಕೆ ನಿರ್ಧಾರ ಮಾಡಿದೆ. ಇನ್ನು ಮುಂದೆ ಮೆಟ್ರೋ ಪ್ರಯಾಣ ದರ ಪ್ರತಿ ವರ್ಷ ಏರಿಕೆಯಾಗಲಿದೆ.
ಪ್ರತಿ ವರ್ಷ ಮೆಟ್ರೋ ಪ್ರಯಾಣ ದರ ಏರಿಕೆ
ಇನ್ನು ಮುಂದೆ ಮೆಟ್ರೋ ಪ್ರಯಾಣ ದರ ಪ್ರತಿ ವರ್ಷ ಏರಿಕೆಯಾಗಲಿದೆ. ದರ ಏರಿಕೆ ಸಮಿತಿ ಶಿಫಾರಸ್ಸಿನಂತೆ ಪ್ರತಿ ವರ್ಷವೂ ಮೆಟ್ರೋ ಪ್ರಯಾಣ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಇದೀಗ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ನಮ್ಮ ಮೆಟ್ರೋ ಮುಂದಾಗಿದೆ. ಇದು ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಿದೆ. ಮೆಟ್ರೋ ನಿಗಮದ ನಿರ್ಧಾರಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಮೊದಲ ಬಾರಿಗೆ ನಮ್ಮ ಮೆಟ್ರೋ ಮೂಲಕ ಜೀವಂತ ಹೃದಯ ಸಾಗಣೆ!
ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ದರ ಹೆಚ್ಚಳ
ಮೆಟ್ರೋ ಕಾರ್ಯಾಚರಣೆ ವೆಚ್ಚ ಹೆಚ್ಚಾದ ಕಾರಣ ಪ್ರತಿ ವರ್ಷ ದರ ಪರಿಷ್ಕರಣೆ ಮೆಟ್ರೋ ನಿಗಮ ಮುಂದಾಗಿದೆ. ಇತ್ತೀಚೆಗೆ ಅಂದರೆ ಫೆಬ್ರವರಿ ತಿಂಗಳಲ್ಲಿ ಮೆಟ್ರೋ ದರ ದುಪ್ಪಟ್ಟಾಗಿತ್ತು. ಫೆಬ್ರವರಿಯಲ್ಲಿ ದರ ಏರಿಕೆಯಿಂದ ಹಲವರು ಮೆಟ್ರೋ ಪ್ರಯಾಣದಿಂದ ದೂರ ಉಳಿದಿದ್ದರು. ಇದೀಗ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ಮುಂದಾಗಿದೆ.
ಪ್ರತಿ ವರ್ಷದ ಮಾರ್ಚ್ & ಏಪ್ರಿಲ್ ತಿಂಗಳಲ್ಲಿ ಕೆಇಆರ್‌ಸಿಯಿಂದ ವಿದ್ಯುತ್ ದರ ಏರಿಕೆ ಮಾಡಲಾಗುತ್ತದೆ. ಇದೇ ಮಾದರಿಯಲ್ಲಿ ಇದೀಗ ಮೆಟ್ರೋ ನಿಗಮ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ದರ ಏರಿಕೆಗೆ ಮುಂದಾಗಿದೆ. ಈಗಾಗಲೇ ಬೆಂಗಳೂರು ಮೆಟ್ರೋದಲ್ಲಿ ಪ್ರಯಾಣ ದುಬಾರಿ ಅನ್ನೋ ಆರೋಪ ಕೇಳಿಬರುತ್ತಲೇ ಇದೆ. ಇದರ ಬೆನ್ನಲ್ಲೇ ಪ್ರತಿ ವರ್ಷ ಮೆಟ್ರೋ ದರ ಏರಿಕೆ ನಿರ್ಧಾರ ಪ್ರಯಾಣಿಕರಿಗೆ ಸಂಕಷ್ಟ ತರಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಶಿವಾಜಿನಗರ ಮೆಟ್ರೋ ಹೆಸರು ಬದಲಾವಣೆ ವಿವಾದ, ಬೆಳಗಾವಿ ಕೆದಕೋ ಫಡ್ನವೀಸ್ ಬೆಂಗಳೂರು ವಿಚಾರದಲ್ಲೂ ಅಡ್ಡಗಾಲು ಯಾಕೆ?
ಹಳದಿ ಮಾರ್ಗದಲ್ಲಿ ಇದೀಗ ಮೂರು ರೈಲು
ಎರಡು ರೈಲುಗಳಿಂದ ಆರಂಭಗೊಂಡ ಹಳದಿ ಮಾರ್ಗದಲ್ಲಿ ಇದೀಗ ಮತ್ತೊಂದು ರೈಲು ಸೇರ್ಪಡೆಯಾಗಿದೆ. 25 ನಿಮಿಷಕ್ಕೆ ಒಂದು ರೈಲು ಸಂಚಾರ ಹಳದಿ ಮಾರ್ಗದಲ್ಲಿ ಇತ್ತು. ಆದರೆ ಮೂರನೇ ರೈಲು ಸೇರ್ಪಡೆಯಿಂದ ಇದೀಗ 19 ನಿಮಿಷಕ್ಕೊಂದು ರೈಲು ಸೇವೆ ಇರಲಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6 ಗಂಟೆಗೆ ಹಳದಿ ಮಾರ್ಗದ ರೈಲು ಸೇವೆ ಆರಂಭಗೊಳ್ಳಲಿದೆ. ಭಾನುವಾರ ಎಂದಿಂತೆ 7 ಗಂಟೆಗೆ ಆರಂಭಗೊಳ್ಳಲಿದೆ. ಆರ್‌ವಿ ರಸ್ತೆಯಿಂದ ರಾತ್ರಿ 11.55ಕೊನೆಯ ಕೊನೆ ರೈಲು ಸಂಚಾರ ನಡೆಸಲಿದೆ. ಇನ್ನು ಬೊಮ್ಮಸಂದ್ರದಿಂದ ರಾತ್ರಿ 10.42ಕ್ಕೆ ಕೊನೆಯ ರೈಲು ಸಂಚಾರ ನಡೆಸಲಿದೆ.
