Deepavali Wishes in Kannada: ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು
happy diwali 2025 best wishes and quotes ಬೆಳಕಿನ ಹಬ್ಬ ದೀಪಾವಳಿ ಎಲ್ಲರ ನೆಚ್ಚಿನ ಹಬ್ಬ. ಮನೆಮನೆಗೂ ಬೆಳಕನ್ನು ತರುವ ಹಬ್ಬ. ಮನಗಳನ್ನು ಬೆಳಗುವ ಹಬ್ಬ. ಸಂದೇಶಗಳ ಮೂಲಕ ಶುಭ ಕೋರಲು, ಇಲ್ಲಿವೆ ಶುಭಾಶಯಗಳು.

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ|ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇ|| ದೀಪಾವಳಿಯ ಶುಭಾಶಯಗಳು
ದೀಪದಿಂದ ದೀಪ ಹಚ್ಚುವ, ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಧನದ ಸಂಕೇತವಾದ ದೀಪಾವಳಿಯ ಶುಭಾಶಯಗಳು.
ಈ ದೀಪಾವಳಿಯು ನಮ್ಮ ಜೀವನದಲ್ಲಿ ಭವಿಷ್ಯದ ಹೊಸ ಭರವಸೆಗಳನ್ನು ಮತ್ತು ನಾಳೆಯ ಹೊಸ ಕನಸುಗಳನ್ನು ತುಂಬಲಿ. ದೀಪಾವಳಿಯ ಶುಭಾಶಯಗಳು
ನೀವು ಬೆಳಗಿಸುವ ಪ್ರತಿ ದೀಪವೂ ನಿಮ್ಮ ಮುಖದಲ್ಲಿ ಸಂತೋಷದ ಹೊಳಪನ್ನು ತರಲಿ ಮತ್ತು ನಿಮ್ಮ ಆತ್ಮವನ್ನು ಬೆಳಗಿಸಲಿ. ದೀಪಾವಳಿಯ ಶುಭಾಶಯಗಳು
ಕತ್ತಲೆಯನ್ನು ಓಡಿಸಲು ಯಾವಾಗಲೂ ಬೆಳಕು ಇರುತ್ತದೆ. ಅದೇ ರೀತಿ ದೀಪಗಳ ಬೆಳಕು ನಿಮ್ಮ ಜೀವನದಲ್ಲಿ ಸಂತೋಷವನ್ನು ಹರಡಲಿ. ದೀಪಾವಳಿಯ ಶುಭಾಶಯಗಳು
ಶಾಂತಿ, ಸಂತೋಷ, ತೃಪ್ತಿ ಮತ್ತು ಪ್ರೀತಿಯಿಂದ ತುಂಬಿರುವ ದೀಪಾವಳಿಯು ನಿಮ್ಮ ಬದುಕಿನಲ್ಲಿ ಹೊಸ ಅಲೆ ಮೂಡಿಸಲಿ.ದೀಪಾವಳಿಯ ಶುಭಾಶಯಗಳು
ದೀಪಾವಳಿಯ ಬೆಳಕು ಕತ್ತಲೆ ಮತ್ತು ಅಜ್ಞಾನವನ್ನು ಹೋಗಲಾಡಿಸಿ, ಜ್ಞಾನ ಮತ್ತು ಬುದ್ಧಿವಂತಿಕೆಯ ಪ್ರಕಾಶವನ್ನು ಹರಡಲಿ. ಶುಭ ದೀಪಾವಳಿ.
ಬೆಳಕಿನ ಹಬ್ಬವು ನಿಮ್ಮ ಮನೆಯಲ್ಲಿ ಸದಾ ಸಂಪತ್ತು, ಸಂತೋಷ ಮತ್ತು ಸಂತಸ ತುಂಬುವಂತೆ ಮಾಡಲಿ. ದೀಪಾವಳಿಯ ಶುಭಾಶಯಗಳು
ಮಣ್ಣಿನ ಹಣತೆಯಲ್ಲಿ ಉರಿಯುವ ಬೆಳಕಿನಂತೇ ನಿಮ್ಮ ಬದುಕು ಬೆಳಗಲಿ. ದೀಪಾವಳಿ ಶುಭಾಶಯಗಳು.
ದೀಪದ ಬೆಳಕಿನಲ್ಲಿ ಕತ್ತಲು ಕರುಗುವಂತೆ ಕಷ್ಟಗಳು ಕರಗಲಿ, ದೀಪದ ಬೆಳಕಿನಂತೆ ಸಂತೋಷ ಹೊಳೆಯಲಿ ದೀಪಾವಳಿಯ ಶುಭಾಶಯಗಳು
ಮೂಡಲಿ ಖುಷಿಯ ಚಿತ್ತಾರ, ದೂರಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ದೀಪಾವಳಿಯ ಹರುಷ,ದೀಪಾವಳಿಯ ಶುಭಾಶಯಗಳು
ಬೆಳಕಿನ ಹಬ್ಬವು ನಿಮ್ಮ ಜೀವನವನ್ನು ಬೆಳಗಲಿ. ನಿಮಗೆ ಯಶಸ್ಸು ಮತ್ತು ಸಂತೋಷವನ್ನು ತರಲಿ. ದೀಪಾವಳಿಯ ಶುಭಾಶಯಗಳು.
ಇದು ಅಂತರಂಗದಲ್ಲಿ ಬೆಳಕು ಹರಡಿಸುವ ಹಬ್ಬ, ಪ್ರೇಮ, ವಿಶ್ವಾಸ, ಶಾಂತಿ, ಭಕ್ತಿಯ ಬೆಳಕು ಶುಭ ದೀಪಾವಳಿ
ಈ ದೀಪಾವಳಿ ನಿಮ್ಮ ಬದುಕನ್ನು ಇನ್ನಷ್ಟು ಪ್ರಜ್ವಲಿಸಲಿ. ಸುಖ, ಸಮೃದ್ಧಿ, ಹೊಸತನವನ್ನು ತುಂಬಿಸಲಿ.. ದೀಪಾವಳಿ ಶುಭಾಶಯ