ಅದಿತಿ ರಾವ್ ಹೈದರಿ ಹುಟ್ಟುಹಬ್ಬ: Romantic Photos ಜೊತೆ ಕವನ ಗೀಚಿದ ಸಿದ್ಧಾರ್ಥ್
ನಟ ಸಿದ್ಧಾರ್ಥ್ ತಮ್ಮ ಪತ್ನಿ ಅದಿತಿ ರಾವ್ ಹೈದರಿಗೆ ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದಷ್ಟು ರೊಮ್ಯಾಂಟಿಕ್ ಅನ್ ಸೀನ್ ಫೋಟೊಗಳು, ಕವಿತೆ ಎಲ್ಲವನ್ನೂ ಹಂಚಿಕೊಳ್ಳುವ ಮೂಲಕ ತಮ್ಮ ಬಾಳ ಸಂಗಾತಿಗೆ ವಿಶ್ ಮಾಡಿದ್ದಾರೆ.

ಅದಿತಿ ರಾವ್ ಹೈದರಿ-ಸಿದ್ದಾರ್ಥ್
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಸಿನಿಮಾ ಇಂಡಷ್ಟ್ರಿಯ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಈ ಜೋಡಿ ಇತ್ತೀಚೆಗೆ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಸಾಮಾಜಿಕ ಮಾಧ್ಯಮದಲ್ಲಿ ಒಟ್ಟಿಗೆ ಫೋಟೋಗಳನ್ನು ಹಂಚಿಕೊಂಡಾಗಲೆಲ್ಲಾ ಈ ಜೋಡಿ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇದೀಗ ಅಕ್ಟೋಬರ್ 28ರಂದು ಅದಿತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಿದ್ದಾರ್ಥ್ ಸ್ಪೆಷಪ್ ಪೋಸ್ಟ್ ಮಾಡಿದ್ದಾರೆ.
ಹುಟ್ಟುಹಬ್ಬದ ಶುಭಾಶಯ
ಸಿದ್ಧಾರ್ಥ್ ಅವರು ಅದಿತಿಯನ್ನು ತಮ್ಮ ಆತ್ಮೀಯ ಸ್ನೇಹಿತೆ ಮತ್ತು ತಮ್ಮ ದೊಡ್ಡ ಶಕ್ತಿ ಎಂದು ಕರೆದಿದ್ದಾರೆ. ಸಿದ್ಧಾರ್ಥ್ ಅವರು ಅದಿತಿಯ ಕೆಲವು ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡರೆ, ಇನ್ನು ಕೆಲವು ಫೋಟೋಗಳಲ್ಲಿ ಅದಿತಿ ಸಿಂಗಲ್ ಆಗಿರೋದು ಕಾಣಬಹುದು.
ಹುಟ್ಟಿದ್ದಕ್ಕಾಗಿ ಧನ್ಯವಾದಗಳು
ಈ ಫೋಟೊ ಜೊತೆಗೆ ಸಿದ್ಧಾರ್ಥ್, "ನನ್ನ ಪ್ರೀತಿ ಹುಟ್ಟಿದ ದಿನ ಇಂದು. ಪ್ರತಿದಿನದ ಪ್ರತಿ ಸೆಕೆಂಡ್, ನನ್ನ ಅಸ್ತಿತ್ವದಲ್ಲಿ ನಾನು ನಿನ್ನನ್ನು ಅನುಭವಿಸುತ್ತೇನೆ. ನಾನು ಎಲ್ಲಿಗೆ ಹೋದರೂ ನೀನು ನನ್ನೊಂದಿಗಿದ್ದೀಯ. ನನ್ನ ಆತ್ಮೀಯ ಸ್ನೇಹಿತೆ, ನನ್ನ ದೊಡ್ಡ ಶಕ್ತಿ. ನೀನು ಬಯಸಿದ್ದರಿಂದಲೇ ನಾನು ಇದ್ದೇನೆ. ಹುಟ್ಟಿದ್ದಕ್ಕಾಗಿ ಧನ್ಯವಾದಗಳು. ಈ ಜೀವನಕ್ಕಾಗಿ ಧನ್ಯವಾದಗಳು" ಎಂದು ಸಿದ್ಧಾರ್ಥ್ ಬರೆದಿದ್ದಾರೆ.
ನನ್ನ ಶಕ್ತಿಯಾಗಿರೋದಕ್ಕೆ ಥ್ಯಾಂಕ್ಯೂ
ಅಷ್ಟೇ ಅಲ್ಲ "ನನ್ನ ಶಕ್ತಿಯಾಗಿರೋದಕ್ಕೆ ಧನ್ಯವಾದಗಳು, ನನ್ನ ರಾಣಿ ನೀನು. ನೀನು ನನಗೆ ಸಿಕ್ಕ ಉಡುಗೊರೆ, ನನಗೆ ಸಿಕ್ಕ ಆಶೀರ್ವಾದ, ನನ್ನ ಮುದ್ದಿನ ಹೆಂಡತಿ, ಹ್ಯಾಪಿ ಬರ್ತ್ ಡೇ ಆದು, ಐ ಲವ್ ಯೂ ಎಂದು ಬರೆದುಕೊಂಡಿರುವ ಸಿದ್ಧಾರ್ಥ್ ಜೊತೆಗೆ ಹಾರ್ಟ್ ಇಮೋಜಿಗಳನ್ನು ಸಹ ಹಂಚಿಕೊಂಡಿದ್ದಾರೆ.
ಮುದ್ದಾದ ಫೋಟೋಸ್ ಶೇರ್ ಮಾಡಿದ ಸಿದ್ದಾರ್ಥ್
ಸಿದ್ಧಾರ್ಥ್ ಮತ್ತು ಅದಿತಿಯ ಫೋಟೊಗಳಿಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆ ಸುರಿದಿದ್ದಾರೆ. ಒಂದು ಫೋಟೋದಲ್ಲಿ, ಅದಿತಿ ಸಿದ್ಧಾರ್ಥ್ ಅವರ ಭುಜದ ಮೇಲೆ ತಲೆಯಿಟ್ಟುಕೊಂಡಿದ್ದಾರೆ, ಮತ್ತು ಇಬ್ಬರೂ ಕೈಗಳನ್ನು ಹಿಡಿದುಕೊಂಡು ಕ್ಯಾಮೆರಾದಿಂದ ದೂರ ನೋಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಅವರು ಮುದ್ದಾದ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಇಬ್ಬರೂ ಸ್ಟೈಲಿಶ್ ಕಪ್ಪು ಟ್ವಿನ್ನಿಂಗ್ ಮಾಡಿಕೊಂಡಿದ್ದಾರೆ.
ಅದ್ದು-ಸಿದ್ದು ಜೋಡಿ
ಸಿದ್ಧಾರ್ಥ್ ಮತ್ತು ಅದಿತಿ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಅದ್ದು ಸಿದ್ದು ಎಂದು ಕರೆಯುತ್ತಾರೆ. ಇಬ್ಬರೂ ವರ್ಷಗಳ ಕಾಲ ತಮ್ಮ ಸಂಬಂಧವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು ಮತ್ತು ಮದುವೆಯ ನಂತರ ತಮ್ಮ ಜೀವನದ ಕೆಲವು ಕ್ಷಣಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಇಬ್ಬರ ಮುದ್ದಾದ ಪ್ರೀತಿಗೆ ಅಭಿಮಾನಿಗಳು ಮನ ಸೋತಿದ್ದಾರೆ.
ಮದುವೆ ಆಗಿದ್ದು ಯಾವಾಗ?
ಅದಿತಿ ಮತ್ತು ಸಿದ್ಧಾರ್ಥ್ ಅವರ ಪ್ರೀತಿ 2021 ರಲ್ಲಿ ತೆಲುಗು ಚಿತ್ರ "ಮಹಾ ಸಮುದ್ರಂ" ಸೆಟ್‌ನಲ್ಲಿ ಪ್ರಾರಂಭವಾಯಿತು. ಇಬ್ಬರೂ ಕಳೆದ ವರ್ಷ ವನಪರ್ತಿಯ 400 ವರ್ಷ ಹಳೆಯ ದೇವಾಲಯದಲ್ಲಿ ಗುಟ್ಟಾಗಿ ವಿವಾಹವಾದರು. ಮದುವೆಯ ನಂತರವಷ್ಟೇ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದರು.