Udupi veg omelette: ಉಡುಪಿ ಶೈಲಿಯ ಅಡುಗೆಗಳು ಬಹಳ ರುಚಿಯಾಗಿರುತ್ತದೆ. ಹಾಗಾಗಿ ನಾವಿಂದು ಉಡುಪಿ ಶೈಲಿಯ ವೆಜ್ ಆಮ್ಲೆಟ್ ಮಾಡುವುದು ಹೇಗೆಂದು ನೋಡೋಣ ಬನ್ನಿ. ಇದು ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ನೀವು ಮೊಟ್ಟೆಯಿಂದ ಏನೇ, ಹೇಗೆ ಅಡುಗೆ ಮಾಡಿ ತಿಂದರೂ ಚೆಂದ ಇರುತ್ತೆ. ಬಹುತೇಕರು ಅವುಗಳನ್ನು ಆಮ್ಲೆಟ್ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹೌದು, ಊಟ ಮಾಡುವಾಗ ಆಮ್ಲೆಟ್ ಅನ್ನು ಸೈಡ್ ಡಿಶ್ ಆಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೇಗಿದ್ದರೂ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳಿಂದ ಮುಕ್ತಗೊಳಿಸಲು ಆಮ್ಲೆಟ್ ಮಾಡಿ ಕೊಡಿ. ಸಾಮಾನ್ಯವಾಗಿ ಉಡುಪಿ ಶೈಲಿಯಲ್ಲಿ ಮಾಡುವ ಅಡುಗೆಗಳು ನಮ್ಮ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಫೇಮಸ್. ಅಷ್ಟೇ ಅಲ್ಲ, ಉಡುಪಿ ಶೈಲಿಯ ಅಡುಗೆಗಳು ಬಹಳ ರುಚಿಯಾಗಿರುತ್ತದೆ. ಹಾಗಾಗಿ ನಾವಿಂದು ಉಡುಪಿ ಶೈಲಿಯ ವೆಜ್ ಆಮ್ಲೆಟ್ ಮಾಡುವುದು ಹೇಗೆಂದು ನೋಡೋಣ ಬನ್ನಿ. ಇದು ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಆಮ್ಲೆಟ್ ಮಾಡಲು ಬೇಕಾಗುವ ಪದಾರ್ಥಗಳು

ಬಿಳಿ ಕಡಲೆ - 100 ಗ್ರಾಂ
ದೊಡ್ಡ ಈರುಳ್ಳಿ-2 (ಮಧ್ಯಮ ಗಾತ್ರ)
ಅಡುಗೆ ಸೋಡಾ - ¼ ಟೀ ಚಮಚ
ಹಸಿರು ಮೆಣಸಿನಕಾಯಿ - 2
ಕರಿಬೇವು - ಅಗತ್ಯಕ್ಕೆ ತಕ್ಕಂತೆ
ಕೊತ್ತಂಬರಿ ಸೊಪ್ಪು - ಅಗತ್ಯಕ್ಕೆ ತಕ್ಕಂತೆ
ಅರಿಶಿನ ಪುಡಿ - ¼ ಟೀ ಚಮಚ
ಕಾಳುಮೆಣಸಿನ ಪುಡಿ - ½ ಟೀ ಚಮಚ (ಖಾರಕ್ಕೆ ಅನುಗುಣವಾಗಿ ಹೊಂದಿಸಿ) -
ಕಾರದಪುಡಿ - ¼ ಟೀಚಮಚ
ಉಪ್ಪು - ಅಗತ್ಯಕ್ಕೆ ತಕ್ಕಂತೆ
ಎಣ್ಣೆ - ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ
*ಬಿಳಿ ಕಡಲೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ರಾತ್ರಿಯಿಡೀ ನೆನೆಸಿಡಿ.
*ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಸ್ವಚ್ಛಗೊಳಿಸಿ.ಈರುಳ್ಳಿಯ ಮೇಲ್ಮೈಯಲ್ಲಿ ಕಪ್ಪು ಅಚ್ಚು ಇದ್ದರೆ, ಅದನ್ನು ತೊಳೆದು ಸ್ವಚ್ಛಗೊಳಿಸಿ.
* ಈಗ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆಗಳನ್ನು ತೊಳೆದು ಸ್ವಚ್ಛಗೊಳಿಸಿ, ಚಿಕ್ಕದಾಗಿ ಕಟ್ ಮಾಡಿ.
* ಮಿಕ್ಸರ್ ಜಾರ್‌ನಲ್ಲಿ ನೆನೆಸಿದ ಕಡಲೆ ಹಾಕಿ, ಅಗತ್ಯವಿರುವಷ್ಟು ನೀರು ಸೇರಿಸಿ. ಒಡೆದ ಮೊಟ್ಟೆಯೊಂದಿಗೆ ರುಬ್ಬಿ.
* ಈಗ ರುಬ್ಬಿಕೊಂಡ ಮಿಶ್ರಣಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ಇದಕ್ಕೆ ಕಾಳುಮೆಣಸಿನ ಪುಡಿ, ಅರಿಶಿನ ಪುಡಿ, ಕಾರದಪುಡಿ, ಅರಿಶಿನ ಪುಡಿ ಮತ್ತು ಅಡುಗೆ ಸೋಡಾ ಸೇರಿಸಿ.
* ಕೊನೆಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ. ಆಮ್ಲೆಟ್ ತರಹದ ಸ್ಥಿರತೆ ರೂಪುಗೊಳ್ಳುವವರೆಗೆ ಮಿಶ್ರಣ ಮಾಡಿ.
* ಈಗ ದೋಸೆ ಹಂಚನ್ನು ಒಲೆಯ ಮೇಲೆ ಇರಿಸಿ. ಎಣ್ಣೆ ಹರಡಿ ಬಿಸಿಯಾಗಲು ಬಿಡಿ.
* ನಂತರ ತಯಾರು ಮಾಡಿಕೊಂಡ ಮೊಟ್ಟೆ ಮಿಶ್ರಣ ತೆಗೆದುಕೊಂಡು ಸಣ್ಣ ವೃತ್ತಕಾರಕ್ಕೆ ಸುರಿದು ಬೇಯಲು ಬಿಡಿ. ದೊಡ್ಡದಾಗಿ ಸುರಿದರೆ ತಿರುಗಿಸಿದಾಗ ಅದು ಒಡೆಯುತ್ತದೆ.
* ಒಂದು ಬದಿ ಬೆಂದ ನಂತರ, ಅದನ್ನು ತಿರುಗಿಸಿ ಇನ್ನೊಂದು ಬದಿ ಬೇಯಿಸಿ. ರುಚಿಕರವಾದ ಉಡುಪಿ ವೆಜ್ ಆಮ್ಲೆಟ್ ಸಿದ್ಧವಾಗುತ್ತದೆ.

ಹಲವಾರು ಪ್ರಯೋಜನಗಳು

ಮೊಟ್ಟೆಯನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಮೊಟ್ಟೆ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಮೊಟ್ಟೆ ಸಾಮಾನ್ಯ ಉಪಹಾರ ಆಹಾರ ಪದಾರ್ಥವಾಗಿದೆ. ಮೊಟ್ಟೆಯನ್ನು ವಿವಿಧ ರೀತಿಯಾಗಿ ಸೇವಿಸಬಹುದು. ಇದನ್ನ ಬಹಳ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ್ದರಿಂದ ಮೊಟ್ಟೆಗೆ ಗೃಹಿಣಿಯರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಡಿ, ಇ, ರಿಬೋಫ್ಲಾವಿನ್ ಮತ್ತು ಫೋಲೇಟ್, ಹಾಗೆಯೇ ಸೆಲೆನಿಯಮ್, ಅಯೋಡಿನ್, ರಂಜಕ ಮತ್ತು ಸತುವು ಇದ್ದು, ಇದು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.