One Rupee Coin Significance: ಉಡುಗೊರೆಯಾಗಿ 100, 200 ನೀಡುವ ಬದಲು 101, 201 ರಂತೆ ಶೂನ್ಯದ ಮುಂದೆ ಒಂದನ್ನು ಸೇರಿಸೋದೇಕೆ? ಒಂದರ ನಾಣ್ಯಕ್ಕಿರುವ ಮಹತ್ವ ಏನು? ಇಲ್ಲಿದೆ ಅದ್ರ ಬಗ್ಗೆ ಮಾಹಿತಿ.
ಐವತ್ತು ಪೈಸೆ, 25 ಪೈಸೆ ನಾಣ್ಯ ಎಲ್ಲಈಗ ಪೆಟ್ಟಿಗೆ ಸೇರಿದೆ. ಆದ್ರೆ ಒಂದು ರೂಪಾಯಿ ನಾಣ್ಯ (One rupee coin)ಕ್ಕೆ ಮಾತ್ರ ಸದಾ ಬೇಡಿಕೆ. ಒಂದು ರೂಪಾಯಿಗೆ ಚಾಕೋಲೇಟ್ ಬರೋದು ಅನುಮಾನ. ಆದ್ರೆ ಹಿಂದೂ ಸಂಪ್ರದಾಯದಲ್ಲಿ ಈ ಒಂದು ಮಹತ್ವದ ಸ್ಥಾನ ಪಡೆದಿದೆ. ದೇವಸ್ಥಾನಕ್ಕೆ ಹೋದಾಗ, ಆಪ್ತರು, ಸ್ನೆಹಿತರಿಗೆ ಉಡುಗೊರೆ ನೀಡುವಾಗ ನಾವು ಒಂದು ರೂಪಾಯಿ ನಾಣ್ಯಕ್ಕೆ ತಡಕಾಡ್ತೇವೆ. ನೂರರ ಜೊತೆ ಒಂದು ರೂಪಾಯಿ ಸೇರಿಸಿ 101 ರೂಪಾಯಿ ಮಾಡಿ ಹುಂಡಿಗೆ ಹಾಕ್ತೇವೆ. ಅಪ್ಪ ಮಾಡ್ದ ಅಂತ ಮಗ, ಮಗ ಮಾಡ್ದ ಅಂತ ಅವನ ಮಗ ರೂಢಿಸಿಕೊಂಡು ಬಂದಿರುವ ಸಂಪ್ರದಾಯ ಇದಲ್ಲ. ಈ ಒಂದಕ್ಕೆ ಹಿನ್ನೆಲೆ ಇದೆ. ನೀವು ಹುಂಡಿ ಅಥವಾ ಉಡುಗೊರೆಗೆ 101, 501, 1001 ರೂಪಾಯಿ ಕೊಡುವ ಮೊದಲು ಕಾರಣ ತಿಳಿದ್ಕೊಳ್ಳಿ.
ಗಿಫ್ಟ್ (Gift) ನಲ್ಲಿ ಒಂದು ರೂಪಾಯಿ ಇಡೋದು ಏಕೆ ಮಹತ್ವ? : ಶೂನ್ಯ ಅಂತ್ಯದ ಸಂಕೇತ ಅಂತ ನಂಬ್ತಾರೆ. ಒಂದು ಹೊಸ ಆರಂಭದ ಸಂಕೇತ ಎನ್ನಲಾಗುತ್ತೆ. ನೀವು ಕವರ್ ನಲ್ಲಿ ಒಂದು ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡೋದ್ರಿಂದ ಆ ಒಂದು ರೂಪಾಯಿ ಅವರಿಗೆ ಯಾವಾಗ್ಲೂ ಸಂತೋಷ ಮತ್ತು ಸಮೃದ್ಧಿ ಜೊತೆ ಹೊಸ ಆರಂಭ ನೀಡುತ್ತದೆ. ಅದೇ ಶೂನ್ಯದಲ್ಲಿ ಅಂತ್ಯವಾಗುವ ಕವರ್ ನೀಡೋದು ಉತ್ತಮವಲ್ಲ. ಶುಭಕರವಲ್ಲ. ಇದು ಸಂತೋಷ ಮತ್ತು ಸುಖದ ಅಂತ್ಯ ಬಯಸಿದಂತೆ.
ಸೌಂದರ್ಯ, ಸಮೃದ್ಧಿಯೊಂದಿಗೆ ಐಷಾರಾಮಿ ಜೀವನ ನಡೆಸುವ 4 ರಾಶಿಚಕ್ರಗಳು
ಒಂದು ರೂ. ನಾಣ್ಯದ ಬಗ್ಗೆ ಗಣಿತ ಏನು ಹೇಳುತ್ತೆ? : ಇನ್ನು ನಾವು ಗಣಿತರ ಪ್ರಕಾರ ಈ ಸಂಖ್ಯೆಗಳನ್ನು ನೋಡೋದಾದ್ರೆ ಶೂನ್ಯದಿಂದ ಕೊನೆಯಾಗುವ ಸಂಖೆಗಳನ್ನು ಸುಲಭವಾಗಿ ಭಾಗಿಸಬಹುದು. 100, 500 ಮತ್ತು 1000 ಸಂಖ್ಯೆಗಳನ್ನು ಭಾಗಿಸಬಹುದು. ಆದ್ರೆ 101, 501 ಮತ್ತು 1001 ಸಂಖ್ಯೆಗಳನ್ನು ಭಾಗಿಸೋಕೆ ಬರೋದಿಲ್ಲ. ನೀವು ಶಕುನಕ್ಕೆ ನೀಡುವ ಈ ಹಣ ಭಾಗಿಸಲು ಬರಬಾರದು. ಆಶೀರ್ವಾದ ಮತ್ತು ಶುಭ ಹಾರೈಕೆಯನ್ನು ಬೇರ್ಪಡಿಸಬಾರದು. ಹಾಗಾಗಿಯೇ ಒಂದು ರೂಪಾಯಿಯನ್ನು 100 ರೂಪಾಯಿಗಳೊಂದಿಗೆ ಇಟ್ಟು ಕೊಡಬೇಕು ಅಂತ ಶಾಸ್ತ್ರ ಹೇಳುತ್ತದೆ.
ಒಂದು ರೂಪಾಯಿ ನಿರಂತರತೆಯ ಸಂಕೇತ : ಒಂದು ರೂಪಾಯಿ ನಿರಂತರತೆಯನ್ನು ಸೂಚಿಸುತ್ತದೆ. ಮದುವೆ ಸಮಾರಂಭದಲ್ಲಿ ಹಿರಿಯರು, ದಂಪತಿ ಸಂತೋಷವಾಗಿ, ನೆಮ್ಮದಿಯಾಗಿರಲಿ ಅಂತ ಆಶೀರ್ವದಿಸಿ ಈ ಹಣ ನೀಡಿರ್ತಾರೆ. ಜೀವನ ಪರ್ಯಂತ ದಾಂಪತ್ಯದ ಸುಖವನ್ನು ಇದು ಆಶೀರ್ವದಿಸುತ್ತದೆ. ಅಷ್ಟೇ ಅಲ್ದೆ ತೆಗೆದುಕೊಂಡ ಹಾಗೂ ನೀಡಿದವರ ಮಧ್ಯೆ ಬಾಂಧವ್ಯವನ್ನು ಬಲಪಡಿಸುತ್ತದೆ. ಇಬ್ಬರ ಮಧ್ಯೆ ಉತ್ತಮ ಸಂಬಂಧ ಮುಂದುವರೆಯುತ್ತದೆ. ಪ್ರೀತಿ, ಒಂದರ ಬಲವಾದ ಬಂಧನದಿಂದ ಬೆಸೆಯಲ್ಪಡುತ್ತದೆ.
ಸೆಪ್ಟೆಂಬರ್‌ನಲ್ಲಿ ಸೂರ್ಯನ ಡಬಲ್ ಸಂಚಾರ ಈ ರಾಶಿಯವರ ಲಕ್ ಚೇಂಜ್, ಸಂಪತ್ತು
ಲಕ್ಷ್ಮಿ (Lakshmi)ಯ ಆಶೀರ್ವಾದ ಒಂದರ ನಾಣ್ಯ : ಒಂದು ರೂಪಾಯಿ ನಾಣ್ಯವನ್ನು ಲಕ್ಷ್ಮಿ ದೇವಿಯ ಭಾಗವೆಂದು ಪರಿಗಣಿಸಲಾಗುತ್ತದೆ. ನಾಣ್ಯವನ್ನು ಲೋಹದಿಂದ ತಯಾರಿಸಲಾಗುತ್ತದೆ.ಇದು ಭೂತಾಯಿಯಿಂದು ಬರುವಂತಹದ್ದು. ಒಂದು ರೂಪಾಯಿ, ಸಮೃದ್ಧಿ, ಸಂತೋಷದ ಸಂಕೇತ ಎಂದು ಭಾವಿಸಲಾಗಿದೆ.
ಉಡುಗೊರೆ ನೀಡುವಾಗ ನೆನಪಿರಲಿ : ನೀವು ಯಾವುದೇ ವ್ಯಕ್ತಿಗೆ ಹಣವನ್ನು ಉಡುಗೊರೆಯಾಗಿ ನೀಡೋದಾದ್ರೆ ಕವರ್ ನಲ್ಲಿ ಒಂದು ರೂಪಾಯಿ ಇಡೋದನ್ನು ಮರೆಯಬೇಡಿ. ನಿಮಗೆ ಉಡುಗೊರೆಯಾಗಿ ಸಿಗುವ ಹಣಕ್ಕಿಂತ ಈ ಒಂದು ರೂಪಾಯಿ ಹೆಚ್ಚು ಮಹತ್ವದ್ದು. ಉಳಿದ ಮೊತ್ತ ಹೂಡಿಕೆಯಾದ್ರೆ ಈ ಒಂದು ಹೂಡಿಕೆ ಬೀಜ. ಇದು ಆಶೀರ್ವಾದ, ಪ್ರೀತಿ, ಬಾಂಧವ್ಯ, ಹೊಸ ಆರಂಭ, ಅಭಿವೃದ್ಧಿಯ ಸಂಕೇತ.
