ಭಾರತದ ಅತ್ಯಂತ ಜನಪ್ರಿಯ, ಅತೀ ಶ್ರೀಮಂತ ಲಾಲ್‌ಬಾಗ್ಚಾ ಗಣೇಶ ವಿಸರ್ಜನೆ ಬರೋಬ್ಬರಿ 13 ಗಂಟೆ ವಿಳಂಬವಾಗಿದೆ. ಈ ಮೂಲಕ ಸಂಪ್ರದಾಯ ಮುರಿದಿದ್ದು ಮಾತ್ರವಲ್ಲ, ಸೂತಕ ಸಮಯದಲ್ಲಿ ಗಣೇಶ ವಿಸರ್ಜನೆ ಮಾಡಿದ ಆತಂಕ ಕಾಡುತ್ತಿದೆ.

ಮುಂಬೈ (ಸೆ.08) ಭಾರತದೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗಿದೆ. ಈ ಪೈಕಿ ಬಹುತೇಕ ಗಣೇಶ ವಿಸರ್ಜನೆಗಳು ನಡೆದಿದೆ. ಕೆಲವೆಡೆ ಅಹಿತಕರ ಘಟನಗಳು ನಡೆದಿದೆ. ಭಾರತದ ಅತೀ ಜನಪ್ರಿಯ ಹಾಗೂ ಅತೀ ಶ್ರೀಮಂತ ಗಣಪ ಎಂದೇ ಗುರುತಿಸಿಕೊಂಡಿರುವ ಮುಂಬೈನ ಲಾಲ್‌ಬಾಗ್ಚಾ ಗಣೇಶನ ವಿಸರ್ಜನೆಯಲ್ಲಿ ಭಕ್ತರು ಅಸಮಾಧಾನಗೊಂಡಿದ್ದಾರೆ. ಮುಂಬೈನ ಚೌಪಾಟಿಯ ಲಾಲ್‌ಬಾಗ್ಚಾ ರಾಜಾ ಗಣೇಶನ ಕೂರಿಸುವುದು, ಪೂಜೆ, ಅಲಂಕರಾ, ಆಭರಣ ತೊಡಿಸುವುದು ಸೇರಿದಂತೆ ವಿಸರ್ಜನೆ ಎಲ್ಲವನ್ನೂ ಪಂಚಾಂಗ ನೋಡಿ ಶುಭಘಳಿಗೆಯಲ್ಲೇ ಮಾಡಲಾಗುತ್ತದೆ. ಪ್ರತಿ ವರ್ಷ ಇದೇ ಪದ್ಧತಿಯಂತೆ ನಡೆಯುತ್ತದೆ. ಆದರೆ ಈ ಬಾರಿ ಲಾಲ್‌ಬಾಗ್ಚಾ ಗಣೇಶ ವಿಸರ್ಜನೆ ಬರೋಬ್ಬರಿ 13 ಗಂಟೆ ವಿಳಂಬವಾಗಿದೆ. ಇದು ಸಂಪ್ರದಾಯ ಮುರಿದಿದ್ದು ಮಾತ್ರವಲ್ಲ, ಸೂತಕ ಸಮಯದಲ್ಲಿ ಗಣೇಶ ವಿಸರ್ಜನೆ ಮಾಡಿದ ಆತಂಕ ಎದುರಾಗಿದೆ.

ಬರೋಬ್ಬರಿ 18 ಅಡಿ ಎತ್ತರದ ಲಾಲ್‌ಬಾಗ್ಚಾ ಗಣೇಶ ರಾತ್ರಿ ಮೆರಣಿಗೆ ಮೂಲಕ ಸಾಗಿ ಬೆಳಗಿನ ಜಾವ ಕಡಲ ತೀರ ತಲುಪಲಿದೆ. ಬೆಳಗ್ಗೆ 9 ಗಂಟೆಗೆ ಲಾಲ್‌ಬಾಗ್ಚಾ ಗಣೇಶ ಸಮುದ್ರದಲ್ಲಿ ವಿಸರ್ಜನೆ ಮಾಡಬೇಕಿತ್ತು. ಆದರೆ 13 ಗಂಟೆ ವಿಳಂಬವಾಗಿ ವಿಸರ್ಜನೆ ಮಾಡಲಾಗಿದೆ. ಅಂದರೆ ಅಂದು ರಾತ್ರಿ 10.30ರ ವೇಳೆಗೆ ಗಣೇಶ ವಿಸರ್ಜನೆ ಮಾಡಲಾಗಿತ್ತು. ಇದು ಸೂತಕಕ ಸಮಯ ಎಂದು ಪಂಚಾಂಗ ಹೇಳುತ್ತಿದೆ ಎಂದು ಭಕ್ತರು ಅಸಮಾಧಾನಗೊಂಡಿದ್ದಾರೆ. ಸೂತಕ ಸಮಯದಲ್ಲಿ ಗಣೇಶ ವಿಸರ್ಜನೆ ಉತ್ತಮ ನಡೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

13 ಗಂಟೆ ವಿಳಂಬವಾಗಲು ಕಾರಣವೇನು?

ತಕ್ಕ ಸಮಯಕ್ಕೆ ಲಾಲ್‌ಬಾಗ್ಚಾ ಗಣೇಶ ಕಡಲ ತೀರ ತಲುಪಿದ್ದರೂ ವಿಸರ್ಜನೆ ಮಾಡಿಲ್ಲ. ಇದಕ್ಕೆ ಮುಖ್ಯ ಕಾರಣ ಕಡಲು ಪ್ರಕ್ಷುಬ್ದಗೊಂಡಿತ್ತು. ಭಾರಿ ಗಾತ್ರದ ಅಲೆಗಳು ಅಪ್ಪಳಿಸುತ್ತಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಮುಂಬೈ ಕಡಲು ತೀರಕ್ಕೆ ಭಾರಿ ಅಲೆಗಳು ಅಪ್ಪಳಿಸುತ್ತಿದೆ. ಹೀಗಾಗಿ ಸಮುದ್ರದಲ್ಲಿ ಲಾಲ್‌ಬಾಗ್ಚಾ ಗಣೇಶ ವಿಸರ್ಜನೆ ತಕ್ಕ ಸಮಯದಲ್ಲಿ ಮಾಡಲು ಸಾಧ್ಯವಾಗಿಲ್ಲ. ಬೆಳಗಿನ ಸಮಯದಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಸಾಮಾನ್ಯವಾಗಿರುವ ಕಾರಣ ವಿಸರ್ಜನೆಗೆ ಕತ್ತಲಾಗುವವರೆಗೆ ಕಾಯಬೇಕಾಗಿ ಬಂದಿದೆ.

ಬೀಚ್‌ ಸ್ವಚ್ಛತೆ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಧರಿಸಿದ ಬಟ್ಟೆಗೆ ಕೊಂಕಾಡಿದ ಜನ: ವೀಡಿಯೋ ವೈರಲ್

ಸೂತಕ ಸಮಯವಾಗಿದ್ದು ಹೇಗೆ?

ನಿನ್ನೆ (ಸೆ.07) ರಾತ್ರಿ 10.30ರ ವೇಳೆಗೆ ಗಣೇಶ ವಿಸರ್ಜನೆ ಮಾಡಲಾಗಿದೆ. ಆದರೆ ಈ ಸಮಯದಲ್ಲಿ ರಾಹುಗ್ರಸ್ಥ ಚಂದ್ರಗ್ರಹಣ ಘಟಿಸಿತ್ತು. ಹಿಂದೂ ಪಂಚಾಂಗ ಪ್ರಕಾರ ಗ್ರಹಣ ಶುಭ ಘಳಿಗೆಯಲ್ಲ. ಇದು ಸೂತಕದ ಸಮಯವಾಗಿದೆ. ಹೀಗಾಗಿ ನಿನ್ನೆ ಬಹುತೇಕ ಎಲ್ಲಾ ದೇವಸ್ಥಾನಗಳು ಬಾಗಿಲು ಬಂದ್ ಮಾಡಲಾಗಿತ್ತು. ಇಂದು ಬೆಳಗ್ಗೆ ಶುದ್ಧೀಕರಣ ಮಾಡಿ ದೇವಸ್ಥಾನ ಬಾಗಿಲು ತೆಗೆಯಲಾಗಿತ್ತು. ಈ ಗ್ರಹಣ ಸಮಯದಲ್ಲಿ ವಿಸರ್ಜನೆ ಯಾವುದೇ ಕಾರಣಕ್ಕೂ ಶುಭವಲ್ಲ ಎಂದು ಭಕ್ತರು ಆಕ್ರೋಶಗೊಂಡಿದ್ದಾರೆ.

ಗಣೇಶ ವಿಸರ್ಜನೆಯಲ್ಲೂ ತಂತ್ರಜ್ಞಾನ ಬಳಸಿರುವುದು ಕೋಲಿ ಸಮಾಜಕ್ಕೆ ತೀವ್ರ ಬೇಸರ ತರಿಸಿದೆ. ತಮ್ಮನ್ನು ಕಡೆಗಣಿಸಲಾಗಿದೆ ಎಂದು ಸಮುದಾಯ ಆಕ್ರೋಶಗೊಂಡಿದೆ. ಕೋಲಿ ಸಮುದಾಯದ ನೆರವಿನಿಂದ ಪ್ರತಿ ವರ್ಷ ಲಾಲ್‌ಬಾಗ್ಚಾ ಗಣೇಶ ವಿಸರ್ಜನೆ ಮಾಡಲಾಗುತ್ತಿತ್ತು. ಈ ಬಾರಿ ತಂತ್ರಜ್ಞಾನ ಬಳಸಲಾಗಿದೆ.