ಪತಿ ಆಯಸ್ಸು ವೃದ್ಧಿಗೆ ಮಹಿಳೆಯರು ಕರ್ವಾ ಚೌತ್ ವ್ರತ ಮಾಡ್ತಾರೆ. ಅನೇಕಾನೇಕ ವರ್ಷಗಳಿಂದ ಮಹಿಳೆಯರು ಈ ಆಚರಣೆ ಮಾಡ್ಕೊಂಡು ಬಂದಿದ್ದಾರೆ. ಆದ್ರೆ ಈ ವ್ರತದ ಬಗ್ಗೆ ಪ್ರೇಮಾನಂದ ಮಹಾರಾಜ್ ಹೇಳಿದ್ದೇನು ಗೊತ್ತಾ?
ಹಿಂದೂ ಧರ್ಮದಲ್ಲಿ ಕರ್ವಾ ಚೌತ್ (Karwa Chauth) ಗೆ ವಿಶೇಷ ಮಹತ್ವ ಇದೆ. ಮಹಿಳೆಯರು ತಮ್ಮ ಪತಿಯ ದೀರ್ಘ ಆಯಸ್ಸಿಗೆ ಪ್ರಾರ್ಥನೆ ಮಾಡಿ ಉಪವಾಸ ಮಾಡ್ತಾರೆ. ವಿವಾಹಿತ ಮಹಿಳೆಯರು ಈ ದಿನವನ್ನು ಭಕ್ತಿ ಮತ್ತು ಪ್ರೀತಿಯಿಂದ ಆಚರಿಸುತ್ತಾರೆ. ವಿವಾಹಿತ ಹಿಂದೂ ಮಹಿಳೆಯರು ದಿನವಿಡೀ ನಿರ್ಜಲ ಉಪವಾಸವನ್ನು ಮಾಡಿ, ಸಂಜೆ ಚಂದ್ರನ ದರ್ಶನ ಮಾಡಿ, ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ, ಪತಿ ಕೈನಿಂದ ಸಿಹಿ ತಿನ್ನುವ ಮೂಲಕ ವ್ರತವನ್ನು ಮುಗಿಸ್ತಾರೆ. ಈ ಬಾರಿ ಅಕ್ಟೋಬರ್ 9 ರಂದು ಕರ್ವಾ ಚೌತ್ ಆಚರಣೆ ಮಾಡಲಾಗ್ತಿದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಕರ್ವಾ ಚೌತ್ ಉಪವಾಸವನ್ನು ಆಚರಿಸಲಾಗುತ್ತದೆ. ಕರ್ವಾ ಚೌತ್ ಬಗ್ಗೆ ಪ್ರೇಮಾನಂದ ಮಹಾರಾಜರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕರ್ವಾ ಚೌತ್ ವ್ರತ ಆಚರಣೆ ನಿಜವಾಗಿಯೂ ಪತಿಯ ಆಯುಷ್ಯವನ್ನು ಹೆಚ್ಚಿಸುತ್ತಾ ಎನ್ನುವ ಪ್ರಶ್ನೆಗೆ ಪ್ರೇಮಾನಂದ ಮಹಾರಾಜರು ಉತ್ತರ ನೀಡಿದ್ದಾರೆ.
ಕರ್ವಾ ಚೌತ್ ಉಪವಾಸದ ಬಗ್ಗೆ ಪ್ರೇಮಾನಂದ ಮಹಾರಾಜ್ ಹೇಳಿದ್ದೇನು? :
ಕರ್ವಾ ಚೌತ್ ಆಚರಣೆ ಮಾಡೋದ್ರಿಂದ ಪತಿಯ ಆಯಸ್ಸು ವೃದ್ಧಿಯಾಗುತ್ತಾ? ಕರ್ವಾ ಚೌತ್ ಉಪವಾಸ ಯಾಕೆ ಮಾಡ್ಬೇಕು ಎಂದು ಮಹಿಳೆ, ಪ್ರೇಮಾನಂದ ಮಹಾರಾಜರನ್ನು ಕೇಳಿದ್ದಾರೆ. ಇವು ಕ್ಷುಲ್ಲಕ ವಿಷಯಗಳು, ಗ್ರಾಮದ ನಂಬಿಕೆಗಳು. ಯಾವುದೇ ಆಚರಣೆ ಸಾವನ್ನು ತಡೆಯಲು ಸಾಧ್ಯವಿಲ್ಲ. ಕರ್ವಾ ಚೌತ್ ಸಾವನ್ನು ಹೇಗೆ ತಡೆಯಬಹುದು? ವಿಧಿ ಏನು ಬರೆದಿದ್ದಾನೋ ಅದೇ ಆಗುತ್ತೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ. ಒಬ್ಬ ವ್ಯಕ್ತಿಯ ವಯಸ್ಸು ಅಥವಾ ಸಾವಿನ ಸಮಯ ಪೂರ್ವನಿರ್ಧರಿತವಾಗಿದೆ. ಯಾವುದೇ ಆಚರಣೆ ಅಥವಾ ಉಪವಾಸ ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.
ವೃಶ್ಚಿಕದಲ್ಲಿ ತ್ರಿಗ್ರಾಹಿ ಯೋಗ, ಈ ರಾಶಿಗೆ ಬಂಪರ್ ಲಾಟರಿ, ಶ್ರೀಮಂತಿಕೆ ಜೊತೆಗೆ ಧಿಡೀರ್ ಆರ್ಥಿಕ ಲಾಭ
ಮಹಿಳೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ್ದಾಳೆ. ಪತಿ ಹಾಗೂ ಮಕ್ಕಳಿಗಾಗಿ ವ್ರತ ಮಾಡುವುದ್ರಿಂದ ಏನೂ ಪ್ರಯೋಜನ ಇಲ್ವಾ ಎಂದು ಕೇಳಿದ್ದಾಳೆ. ಅದಕ್ಕೆ ಉತ್ತರ ನೀಡಿದ ಪ್ರೇಮಾನಂದ ಮಹಾರಾಜರು, ಉಪವಾಸ ಒಂದು ಸಣ್ಣ ಬೆಂಬಲ ವ್ಯವಸ್ಥೆ. ಉದಾಹರಣೆಗೆ, 10 ವರ್ಷ ವಯಸ್ಸಿನ ಮಗುವಿಗೆ ತೊಂದ್ರೆ ಇದೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದಾಗ ತಾಯಿ ಉಪವಾಸ ಮಾಡಿದ್ರೆ ಬರುವ ಸಮಸ್ಯೆ ಪ್ರಮಾಣ ಕಡಿಮೆ ಆಗ್ಬಹುದು. ಆದ್ರೆ ಸಾವು ಹತ್ತಿರ ಬಂದಿದ್ದರೆ ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ.
ಪರಿಣಾಮ ಬೀರುತ್ತೆ ಈ ಮಂತ್ರ :
ಪ್ರೇಮಾನಂದ ಮಹಾರಾಜರ ಪ್ರಕಾರ, ಒಬ್ಬ ವ್ಯಕ್ತಿಯ ಸಾವು ಸನ್ನಿಹಿತವಾಗಿದ್ದರೂ ಖಚಿತವಾಗಿಲ್ಲದಿದ್ದರೆ, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದರಿಂದ ಬಿಕ್ಕಟ್ಟನ್ನು ತಪ್ಪಿಸಬಹುದು. ಆದರೆ ವಿಧಿ ಸಾವನ್ನು ನಿರ್ಧರಿಸಿದ್ದರೆ, ಮಹಾಮೃತ್ಯುಂಜಯ ಮಂತ್ರ ಸಹ ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
500 ವರ್ಷಗಳ ನಂತ್ರ ಒಂದೇ ಬಾರಿ 3 ರಾಜಯೋಗ ರಚನೆ; ಮೂರು ರಾಶಿಗಳಿಗೆ ಅನಿರೀಕ್ಷಿತ ಧನಲಾಭ!
ಜೀವನ ಮತ್ತು ಮೃತ್ಯು ಎರಡೂ ದೇವರ ಇಚ್ಛೆ. ಯಾವುದೇ ಪೂಜೆ, ಹವನ, ತಂತ್ರ – ಮಂತ್ರ ಇದನ್ನು ಬದಲಿಸಲು ಸಾಧ್ಯವಿಲ್ಲ. ಕರ್ವಾ ಚೌತ್ ವ್ರತ ಮಾಡಿ, ಸಾವನ್ನು ತಡೆಯಬಹುದು ಅಂತ ನೀವು ಅಂದ್ಕೊಂಡಿದ್ರೆ ಅದು ನಿಮ್ಮ ಭ್ರಮೆ. ಜೀವನದ ಅಂತ್ಯ ನಿಶ್ಚಿತವಾಗಿದ್ರೆ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರೇಮಾನಂದ ಮಹಾರಾಜರು ಹೇಳಿದ್ದಾರೆ. ಪ್ರೇಮಾನಂದ ಮಹಾರಾಜರ ವಿಡಿಯೋಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಕೆಲವರು ಪ್ರೇಮಾನಂದ ಮಹಾರಾಜರ ಮಾತನ್ನು ಒಪ್ಪಿದ್ರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ದೇಶ – ವಿದೇಶದಲ್ಲಿ ಹೆಸರು ಪಡೆದಿರುವ ಪ್ರೇಮಾನಂದ ಮಹಾರಾಜರ ಶಿಷ್ಯರಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಕೂಡ ಸೇರಿದ್ದಾರೆ.
