ಬಾಲಿವುಡ್ ನಟಿ ವಿದ್ಯಾ ಬಾಲನ್ ತಲೆ ನೋವು ಬಂದ್ರೆ ಏನು ಮಾಡ್ತಾರೆ? ಮಾತ್ರೆ ಬದಲು ಕೆಲ ಶಬ್ಧವನ್ನು ಹೇಳಿಕೊಳ್ತಾರೆ. ಹಾಗಿದ್ರೆ ಆ ಶಬ್ಧ ಯಾವ್ದು?
ಕೆಲ್ಸದ ಒತ್ತಡ, ಮನೆ, ಹಣಕಾಸಿನ ನಿರ್ವಹಣೆ ಅಂತ ಜನ ದಿನ ಪೂರ್ತಿ ಟೆನ್ಷನ್ ನಲ್ಲೇ ಇರ್ತಾರೆ. ಇದ್ರಿಂದ ತಲೆ ನೋವು ಕಾಡೋದು ಸಾಮಾನ್ಯ. ಕಣ್ಣಿಗೆ ಕಾರಣ, ಅನುಭವಿಸಲು ಸಾಧ್ಯವಾಗದ ನೋವಿನಲ್ಲಿ ಈ ತಲೆ ನೋವು ಒಂದು. ತಲೆ ನೋವು ಇಡೀ ದಿನ ಹಾಳು ಮಾಡ್ಬಾರದು ಎಂಬ ಉದ್ದೇಶಕ್ಕೆ ಅನೇಕರು, ತಲೆ ನೋವು ಕಾಣಿಸಿಕೊಳ್ತಿದ್ದಂತೆ ಮಾತ್ರೆ ತೆಗೆದುಕೊಳ್ತಾರೆ. ವಾರದಲ್ಲಿ ಮೂರ್ನಾಲ್ಕು ದಿನ ಈ ಮಾತ್ರೆ ಸೇವಿಸುವವರಿದ್ದಾರೆ. ಮಾತ್ರೆ ತಕ್ಷಣ ನಿಮ್ಮ ತಲೆ ನೋವಿಗೆ ಪರಿಹಾರ ನೀಡ್ಬಹುದು. ಆದ್ರೆ ಭವಿಷ್ಯದಲ್ಲಿ ಅದ್ರ ಅಡ್ಡ ಪರಿಣಾಮ ಹೆಚ್ಚು. ಬಾಲಿವುಡ್ ನಟಿ ವಿದ್ಯಾ ಬಾಲನ್ (Vidya Balan) ತಲೆ ನೋವಿಗೆ ಹೊಸ ಮದ್ದು ಕಂಡು ಹಿಡಿದಿದ್ದಾರೆ. ಅವರು ತಲೆ ನೋವು ಬಂದಾಗ ಯಾವ್ದೆ ಮಾತ್ರೆ, ಔಷಧಿ ಸೇವನೆ ಮಾಡೋದಿಲ್ಲ. ಮ್ಯಾಜಿಕ್ ಶಬ್ಧವನ್ನು ಹೇಳಿಕೊಳ್ತಾರೆ. ಅದ್ರಿಂದ ಅವ್ರ ತಲೆ ನೋವು ಬೇಗ ಕಡಿಮೆ ಆಗುತ್ತಂತೆ.
ವಿದ್ಯಾ ಬಾಲನ್ ತಲೆ ನೋವಿ (headache)ಗೆ ಮದ್ದು : ವಿದ್ಯಾ ಬಾಲನ್ ಒಂದು ವಾಕ್ಯವನ್ನು ಕೆಲವು ಬಾರಿ ಹೇಳಿಕೊಳ್ತಾರೆ. ಹೀಗೆ ಮಾಡೋದ್ರಿಂದ ತಲೆ ನೋವು ನಿಯಂತ್ರಣಕ್ಕೆ ಬರುತ್ತೆ ಇಲ್ಲವೆ ಸಂಪೂರ್ಣ ಕಡಿಮೆ ಆಗುತ್ತೆ. ನನ್ನ ಜೀವನದಲ್ಲಿ ಇದು ವರ್ಕ್ ಆಗ್ತಿದೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ. ದಿ ಸಮ್ಥಿಂಗ್ ಬಿಗ್ಗರ್ ಶೋನಲ್ಲಿ ರೊಡ್ರಿಗೋ ಕ್ಯಾನೆಲಾಸ್ ಜೊತೆ ಮಾತನಾಡ್ತಾ ವಿದ್ಯಾ ಬಾಲನ್ ತಮ್ಮ ತಲೆ ನೋವನ್ನು ಹೇಗೆ ಕಡಿಮೆ ಮಾಡ್ತೇನೆ ಅನ್ನೋದನ್ನು ತಿಳಿಸಿದ್ದಾರೆ.
ಈ ಟ್ರಿಕ್ ಹೇಗೆ ಕೆಲ್ಸ ಮಾಡುತ್ತೆ? : ವಿದ್ಯಾ ಬಾಲನ್ ಕಳೆದ 14 ವರ್ಷಗಳಿಂದ ಹೀಲರ್ ಜೊತೆ ಕೆಲ್ಸ ಮಾಡ್ತಿದ್ದಾರೆ. ವಿದ್ಯಾ ಬಾಲನ್ ಕಷ್ಟದ ಸಮಯದಲ್ಲಿ ಪರಿಹಾರವಾಗಿ ಅವ್ರ ತಾಯಿ ಹೀಲರ್ ಪರಿಚಯ ಮಾಡಿಸಿದ್ರು. ಹೀಲರ್ ವಿದ್ಯಾ ಬಾಲನ್ ಅವರಿಗೆ ಅನೇಕ ಟೆಕ್ನಿಕ್ ತಿಳಿಸಿದ್ದಾರೆ. ಅದ್ರಲ್ಲಿ EFT ಅಂದ್ರೆ ಭಾವನಾತ್ಮಕ ಸ್ವಾತಂತ್ರ್ಯ ತಂತ್ರಗಳು (Emotional Freedom Techniques) ಅರಿವಿನ ಪ್ರವೇಶ ಸೇರಿದಂತೆ ಹಲವಾರು ತಂತ್ರಗಳಿವೆ.
ತಲೆ ನೋವು ಬಂದಾಗ ವಿದ್ಯಾ ಬಾಲನ್ ಹೇಳೋ ಶಬ್ಧ ಯಾವ್ದು? : ವಿದ್ಯಾ ಬಾಲನ್ ಅವರಿಗೆ ತಲೆ ನೋವು ಬರ್ತಾ ಇದ್ದಂತೆ ಅವರು Headache, you can leave now ಅಂತ ಅನೇಕ ಬಾರಿ ಹೇಳಿ ಕೊಳ್ತಾರಂತೆ. ವಿದ್ಯಾ ಬಾಲನ್ ಪ್ರಕಾರ, ಈ ಶಬ್ಧ ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತದೆ. ಈ ತಂತ್ರ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ. ಮನಸ್ಸನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಆಲೋಚನೆಯನ್ನು ಪುನರ್ ಪ್ರೋಗ್ರಾಂ ಮಾಡುತ್ತದೆ. ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕದ ಮೇಲೆ ಕಾರ್ಯನಿರ್ವಹಿಸುತ್ತದೆ.
ಸಾಮಾನ್ಯವಾಗಿ ಸಂಖ್ಯಾಶಾಸ್ತ್ರ ಮತ್ತು ಹೀಲಿಂಗ್ ಮಾಡುವವರು, ಪದಗಳು ಮತ್ತು ಉದ್ದೇಶದ ಶಕ್ತಿ, ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು ಅಂತ ನಂಬ್ತಾರೆ. ಇದು ತಲೆನೋವಿನಂತಹ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ವಿದ್ಯಾ ಬಾಲನ್ ಅವರಿಗೆ ವರ್ಕ್ ಆಗಿದೆ. ಇದು ನನ್ನ ಹೀಲಿಂಗ್ ನ ಒಂದು ಭಾಗ ಅಂತ ವಿದ್ಯಾ ಬಾಲನ್ ಹೇಳಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಬದಲಾಯಿಸುವ ಕಲೆ ಎಂದು ವಿದ್ಯಾ ಹೇಳಿದ್ದಾರೆ. ವಿಜ್ಞಾನದ ಪ್ರಕಾರ, ಇದು ಮೈಂಡ್ಫುಲ್ನೆಸ್ನ ಭಾಗವಾಗಿರಬಹುದು. ಸಕಾರಾತ್ಮಕ ಚಿಂತನೆ ಮತ್ತು ಮಂತ್ರಗಳ ಪುನರಾವರ್ತನೆ ತಲೆನೋವಿಗೆ ಪ್ರಮುಖ ಕಾರಣವಾದ ಒತ್ತಡವನ್ನು ಕಡಿಮೆ ಮಾಡುತ್ತದೆ. ಆದ್ರೆ ತೀವ್ರ ತಲೆನೋವಿಗೆ ವೈದ್ಯರ ಸಲಹೆ ಅಗತ್ಯ ಎಂಬುದನ್ನು ನೀವು ಮರೆಯಬಾರದು.
