ಸೋಷಿಯಲ್ ಮೀಡಿಯಾಗಳಲ್ಲಿ ಹೀಗಂತ ಸಾಕಷ್ಟು ದಿನಗಳಿಂದ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈ ಬಗ್ಗೆ ರಿಷಬ್ ಶೆಟ್ಟಿಯವರು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಈ ಸುದ್ದಿಗೆ ಕಾಂತಾರ ಸೂತ್ರಧಾರ ರಿಷಬ್ ಶೆಟ್ಟಿ ಏನು ಹೇಳಬಹುದು? ನಿಮಗೆ ಈ ಸುತ್ತುತ್ತಿರುವ ಸುದ್ದಿಯ ಬಗ್ಗೆ ಏನೆನ್ನಸುತ್ತೆ..?

ವೈರಲ್ ಆಗ್ತಿದೆ ಶಾಕಿಂಗ್ ನ್ಯೂಸ್!

ಈ ಸೋಷಿಯಲ್ ಮೀಡಿಯಾ ನೇ ಹೀಗೆ... ಏನೇನೋ ಸುದ್ದಿಗಳು ಬರುತ್ತವೆ... ಕೆಲವೊಂದು ನಗು ಉಕ್ಕಿಸಿದ್ರೆ ಕೆಲವೊಂದು ಚಿಂತನೆಗೆ ದೂಡುತ್ತವೆ... ಕೆಲವೊಂದು ಚಿಂತೆಗೂ ಕಾರಣ ಆಗಬಹುದು... ಇದೀಗ ಕಾಂತಾರ ಬಗ್ಗೆ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ... ಅದು, ಕಾಂತಾರ ಆಗೋದಕ್ಕೆ ಚೀನಾ ಕಾರಣ ಅಂತ... ಹಾಗಿದ್ರೆ ಅದು ಹೇಗೆ? ಇಲ್ಲಿ ಆ ಬಗ್ಗೆ ಸಾಕಷ್ಟು ಸಮರ್ಥನೆ ಇದೆ.. ಅದೇನು ನೋಡೋಣ ಬನ್ನಿ...

ಹೌದು, ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಸದ್ಯ ಜಗತ್ಪ್ರಸಿದ್ಧರಾಗಿದ್ದು, ಕಾಂತಾರ ಸಿನಿಮಾ (Kantara) ಈಗ 'ಟಾಕ್ ಆಫ್‌ ದಿ ವರ್ಲ್ಡ್' ಆಗಿದೆ. ಈ ಸಿನಿಮಾ ಈಗ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತನ್ನ ನಾಗಾಲೋಟ ಮುಂದುವರಿಸಿದ್ದು ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆದರೆ, ಈ ಸಿನಿಮಾ ಶುರುವಾಗಿದ್ದು ಹೇಗೆ? ರಿಷಬ್ ಶೆಟ್ಟಿ ಅವರಿಗೆ ಈ ಸಿನಿಮಾದ ಕಾನ್ಸೆಪ್ಟ್ ತಲೆಯೊಳಗೆ ಬಂದಿದ್ದು ಯಾವಾಗ? ಕಾಂತಾರ ಸಿನಿಮಾ ಶುರುವಾಗಿದ್ದು ಹೇಗೆ? ಅಂದ್ರೆ ಯಾವ ಸಂದರ್ಭದಲ್ಲಿ? ಅಚ್ಚರಿಯ ಸಂಗತಿ ಬಹಿರಂಗವಾಗುತ್ತದೆ.

ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ' ಸಿನಿಮಾ ಬಿಡುಗಡೆಯಾಗಿದ್ದು 30 ಸೆಪ್ಟೆಂಬರ್ 2022ರಂದು. ಕನ್ನಡದಲ್ಲಿ ಮಾತ್ರ ಬಿಡುಗಡೆ ಕಂಡು ಬಳಿಕ 5 ಭಾಷೆಗಳಲ್ಲಿ ಡಬ್ ಆಗಿ ತೆರೆಕಂಡು ಭರ್ಜರಿ ಜಯಭೇರಿ ಭಾರಿಸಿದೆ ಕಾಂತಾರ ಸಿನಿಮಾ. ಆದರೆ, ರಿಷಬ್ ಶೆಟ್ಟಿಯವರು ಈ ಸಿನಿಮಾದ ಸ್ಕ್ರಿಪ್ಟ್ ಮಾಡಿದ್ದು ಕೊರೋನಾ ವೈರಸ್ ಜಗತ್ತಿಗೆ ವಕ್ಕರಿಸಿದ್ದ ಸಮಯದಲ್ಲಿ. 2021ರಲ್ಲಿ ಕೊರೋನಾ ವೈರಸ್ ಹರಡಿ ಜಗತ್ತು ಅಲ್ಲೋಲಕಲ್ಲೋಲ ಆಗಿದ್ದು ನಿಜ. ಅದೇ ವೇಳೆಯಲ್ಲಿ ಹೊರಗೆ ಹೋಗಲಾಗದ ರಿಷಬ್ ಶೆಟ್ಟಿಯವರಿಗೆ ಈ ಸಿನಿಮಾದ ಥಾಟ್ ತಲೆಯಲ್ಲಿ ಬಂದಿದೆ ಅಂತ ಹೇಳಲಾಗಿದೆ.

ಸೋಷಿಯಲ್ ಮೀಡಿಯಾಗಳಲ್ಲಿ ಹೀಗಂತ ಸಾಕಷ್ಟು ದಿನಗಳಿಂದ ಸುದ್ದಿ ಹಬ್ಬುತ್ತಲೇ ಇದೆ. ಆದರೆ, ಈ ಬಗ್ಗೆ ರಿಷಬ್ ಶೆಟ್ಟಿಯವರು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಆದರೆ, ರಿಷಬ್ ಶೆಟ್ಟಿಯವರು ಸಂದರ್ಶನದಲ್ಲಿ ಒಮ್ಮೆ 'ನನಗೆ ಈ ಸಿನಿಮಾ ಮಾಡೋದಕ್ಕೆ ಒಳಗಿನಿಂದಲೇ ಪ್ರೇರಣೆ ಆಗಿದೆ' ಎಂದು ಹೇಳಿದ್ದಾರೆ. ಯಾವುದೋ ಪ್ರಶ್ನೆಗೆ ಉತ್ತರಿಸುತ್ತ 'ಕಾಂತಾರ' ನಿರ್ದೇಶಕ ರಿಷಬ್ ಶೆಟ್ಟಿಯವರು 'ನನಗೆ ಕಾಂತಾರ ಸಿನಿಮಾ ಮಾಡುವ ಬಗ್ಗೆ ಒಳಗಿನಿಂದಲೇ ಇಂಟ್ಯೂಶನ್ ಆಗಿದೆ. ಆಮೇಲೆ ದೈವ ಸನ್ನಿಧಿಯಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆದು ಈ ಸಿನಿಮಾ ಶುರುಮಾಡಿದ್ದೇನೆ' ಎಂದು ಹೇಳಿದ್ದಾರೆ.

ಕೊರೋನಾದಿಂದ ಬಂತು ಕಾಂತಾರ!

ಆದರೆ, ಅಚ್ಚರಿ ಎನಿಸಿದರೂ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಅದು ಹೇಗೆ ಸುದ್ದಿಯಾಗುತ್ತಿದೆ ನೋಡಿ! ಕೊರೋನಾ ಬಂದಿರುವ ಸಮಯದಲ್ಲಿ ರಿಷಬ್ ಶೆಟ್ಟಿಯವರಿಗೆ ಹೊರಗೆ ಹೋಗಲು ಸಾಧ್ಯವಿರಲಿಲ್ಲ. ಆಗ ಅವರಿಗೆ ಈ ಸಿನಿಮಾ ಮಾಡುವ ಬಗ್ಗೆ ಆಲೋಚನೆ ಬಂದಿದೆ. ಕೊರೋನಾ ಕಾರಣಕ್ಕೆ ಬೇರೆ ಯಾವುದೇ ಸಮಸ್ಯೆ ಆಗದೇ ಅವರು ಈ ಸಿನಿಮಾ ಬಗ್ಗೆ ಗಮನವಿಟ್ಟು ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಸಿನಿಮಾ ಚೆನ್ನಾಗಿ ಮೂಡಿಬಂದು ಸೂಪರ್ ಹಿಟ್ ಆಗಿದೆ.

ಚೈನೀಸ್‌ಗೆ ಥ್ಯಾಂಕ್ಸ್ ಹೇಳ್ಬೇಕು!

ಆದ್ದರಿಂದ 'ಕಾಂತಾರ' ಸಿನಿಮಾ ರಿಷಬ್ ಅವರಿಂದ ತೆರೆಗೆ ಬರೋದಕ್ಕೆ ಕೊರೋನಾ ಕಾರಣ. ಕೊರೋನಾ ಬರೋದಕ್ಕೆ ಚೀನಾ ಕಾರಣ. ಆದ್ದರಿಂದ ಚೀನಾ ಜನರಿಗೆ, ಅಂದರೆ 'ಚೈನಿಸ್‌'ಗೆ ನಾವೆಲ್ಲರೂ ಥ್ಯಾಂಕ್ಸ್ ಹೇಳ್ಬೇಕು ಅಂತ ಸುದ್ದಿ ವೈರಲ್ ಆಗ್ತಿದೆ. ಇದು ತಮಾಷೆಗೆ ಹೇಳಿರೋದೇ ಆಗಿದ್ದರೂ ಈ ಸಂಗತಿ ಎಂಥವರನ್ನೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಈ ಸುದ್ದಿಯ ಕ್ರಿಯೇಟಿವಿಟಿಗೆ ತಲೆದೂಗಲೇಬೇಕು. ಅದ್ಯಾರದೋ ತಲೆಗೆ ಅದೇನೇನು ಯೋಚನೆ ಬರುತ್ತೋ!

ಆದರೆ, ಯಾವುದನ್ನೋ ತೆಗೆದುಕೊಂಡು ಹೋಗಿ ಇನ್ಯಾವುದಕ್ಕೋ ಲಿಂಕ್ ಮಾಡಿ ಸುದ್ದಿಯನ್ನು ಸೃಷ್ಟಿಮಾಡುವ ಇಂತಹ ಜಾಣತನಕ್ಕೆ ಏನೆನನ್ನಬೇಕು. ಈ ಸುದ್ದಿಗೆ ಕಾಂತಾರ ಸೂತ್ರಧಾರ ರಿಷಬ್ ಶೆಟ್ಟಿ ಏನು ಹೇಳಬಹುದು? ನಿಮಗೆ ಈ ಸುತ್ತುತ್ತಿರುವ ಸುದ್ದಿಯ ಬಗ್ಗೆ ಏನೆನ್ನಸುತ್ತೆ..? ಕಾಮೆಂಟ್ ಮಾಡಿ ಅಭಿಪ್ರಾಯ ತಿಳಿಸಬಹುದಲ್ಲ, ಮತ್ಯಾಕೆ ತಡ..?!