ಶಾರ್ವರಿ ಮಹಡಿಯ ಮೇಲೆ ಮಗುವನ್ನು ತೆಗೆದುಕೊಂಡು ಹೋಗಿದ್ದು, ಅದಕ್ಕೆ ಹಾನಿ ಮಾಡ್ತಾಳಾ? ಮಗುವನ್ನು ಯಾರು ಕಾಪಾಡ್ತಾರೆ? ರೌಡಿಗಳನ್ನು ಸಾಕಲು ಶಾರ್ವರಿಗೆ ದುಡ್ಡು ಎಲ್ಲಿಂದ ಬರ್ತಿದೆ? 

ಶ್ರೀರಸ್ತು ಶುಭಮಸ್ತು ಅಂತ್ಯಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ ಎನ್ನುವ ಸೂಚನೆ ಸಿಗುತ್ತಿದೆ. ಮಾಧವ್​ ತನ್ನ ಗಂಡ, ಅವಿ-ಅಭಿ ತನ್ನ ಮಕ್ಕಳು ಅಂತಿದ್ದ ರಾಧಾ ಈಗ ಅದನ್ನು ನಿಲ್ಲಿಸಿದ್ದಾಳೆ. ಮಗುವನ್ನು ಕರೆದುಕೊಂಡು ಹೋಗ್ತಿದ್ದಾಗ ಶಾರ್ವರಿ ರೌಡಿಗಳು ಮಗುವನ್ನು ಕಿಡ್​ನ್ಯಾಪ್​ ಮಾಡಿದ್ದಾರೆ. ರಾಧಾ ಶಾರ್ವರಿ ಮುಖ ನೋಡಿ ಶಾರ್ವರಿ ಎಂದು ತಿಳಿದಿದೆ. ಎಲ್ಲರೂ ರಾಧಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ತುಳಸಿ ಮಾತ್ರ ರಾಧಾ ಪರವಾಗಿ ಇದ್ದಾಳೆ. ಶಾರ್ವರಿ ಮಗುವನ್ನು ಕೊಲ್ಲಲು ಸ್ಕೆಚ್​ ಹಾಕಿದ್ದಾಳೆ. ಮಹಡಿ ಮೇಲೆ ಮಗುವನ್ನು ತೆಗೆದುಕೊಂಡು ಹೋಗಿದ್ದಾಳೆ. ನಿನ್ನನ್ನು ಸಾಯಿಸಿಸ ತುಳಸಿಗೆ ಪಾರ್ಸೆಲ್ ಕಳಿಸ್ತೇನೆ ಎಂದಿದ್ದಾಳೆ.

ಆದರೆ ಹೀಗೆ ಆಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಆ ಮಗುವನ್ನು ರಾಧಾನೇ ಕಾಪಾಡುವ ಸಾಧ್ಯತೆ ಇದೆ. ಶಾರ್ವರಿ ರಾಧಾಳನ್ನು ನೋಡಿ ವಿಲನ್​ಳಿಂದ ಒಳ್ಳೆಯವಳಾಗುವ ಸಾಧ್ಯತೆ ಇದೆ. ಏಕೆಂದರೆ ಆಕೆಗೆ ಕೋಪ ಇದ್ದದ್ದು ತನ್ನ ಅಕ್ಕನನ್ನು ಸಾಯಿಸಿದರು ಎನ್ನೋ ಕಾರಣಕ್ಕೆ. ಆದರೆ ಫೋಟೋದಲ್ಲಿ ಇರುವವಳೇ ಬೇರೆ, ಇಲ್ಲಿ ಬಂದಿರುವವಳೇ ಬೇರೆ. ಅದೊಂದು ಚಿಕ್ಕ ಗೋಜಲು ಇರೋದು ಬಿಟ್ಟರೆ, ಸೀರಿಯಲ್​ ಮುಗಿಸೋ ಹಾಗಿದೆ. ಇದಾಗಲೇ ಹೊಸ ಸೀರಿಯಲ್​ಗಳ ಪ್ರೊಮೋ ಕೂಡ ರಿಲೀಸ್​ ಆಗ್ತಿದೆ. ಆದರೆ ಅದೇ ಇನ್ನೊಂದೆಡೆ, ಶಾರ್ವರಿ ಅಷ್ಟೊಂದು ರೌಡಿಗಳನ್ನು ಸಾಕಲು ಆಕೆಗೆ ದುಡ್ಡು ಯಾರು ಕೊಡ್ತಿದ್ದಾರೆ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಮನೆ ಬಿಟ್ಟು ಬಂದಾಕೆಗೆ ಕೈಯಲ್ಲಿ ಕೆಲಸವಿಲ್ಲ. ಹಾಕಿದ್ದ ಮೇಲೆ ದುಡ್ಡು ಕೋಡೋರು ಯಾರು? ಅವೆಲ್ಲಾ ಸೀರಿಯಲ್​ಗಳಲ್ಲಿ ಕೇಳುವಂತಿಲ್ಲ ಎಂದು ಕಮೆಂಟಿಗರು ತಮಾಷೆ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಸೀರಿಯಲ್​ ಬೇಗ ಮುಗಿಸಿ ಎನ್ನುವ ಮಾತೂ ಕೇಳಿಬರುತ್ತಿದೆ. ಈಗೇನು ಈ ಸೀರಿಯಲ್​​ ಅಷ್ಟೊಂದು ಇಂಟರೆಸ್ಟಿಂಗ್​ ಆಗಿ ಉಳಿದಿಲ್ಲ ಎನ್ನುವುದು ಬಹುತೇಕ ಮಂದಿಯ ಮಾತು. ʼರಾಘವೇಂದ್ರ ಸ್ವಾಮಿ ಮಹಾತ್ಮೆʼ ಧಾರಾವಾಹಿ ಪ್ರಸಾರ ಆಗಲಿದ್ದು, ಅದರ ಪ್ರೊಮೋ ಬಿಡುಗಡೆಯಾಗಿದೆ! ಶ್ರೀರಸ್ತು ಶುಭಮಸ್ತು ಸೀರಿಯಲ್‌ ಕಥೆಯ ಬಗ್ಗೆ ಹೇಳುವುದಾದರೆ, ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್​, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ.

ಅದೇ ಇನ್ನೊಂದೆಡೆ, ಅತ್ತೆಯ ಮಾತು ಕೇಳಿ ತಂಗಿ ಪೂರ್ಣಿ ಹಾಗೂ ಅತ್ತೆ ತುಳಸಿ ಕಂಡರೆ ಉರಿಬೀಳುತ್ತಿದ್ದ, ಇಬ್ಬರಿಗೂ ಹಾನಿ ಉಂಟು ಮಾಡಲು ಅತ್ತೆಯ ಜೊತೆ ಸ್ಕೆಚ್​ ಹಾಕುತ್ತಿದ್ದ ದೀಪಿಕಾ ಕೂಡ ಬದಲಾಗಿದ್ದಾಳೆ. ಇನ್ನೇನು ಇದೆ ಬಾಕಿ? ಎಲ್ಲವೂ ಬಹುತೇಕ ಮುಗಿದೇ ಹೋಗಿದೆ. ಈಗೇನಿದ್ದರೂ ಶಾರ್ವರಿಯ ಕುತಂತ್ರ ಸಾಕ್ಷಿ ಸಹಿತ ಬಯಲಾಗಿ ಆಕೆ ಜೈಲುಪಾಲು ಆಗಬೇಕಿರುವುದು ಮಾತ್ರ ಉಳಿದಿದೆ. ಇದಾಗಲೇ ಕಾರು ಅಪಘಾತ ಮಾಡಿರುವುದು ಶಾರ್ವರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳೂ ಸಿಕ್ಕಾಗಿದೆ. ಆದರೂ ಸೀರಿಯಲ್​ ಸದ್ಯ ಮುಗಿಸುವಂತೆ ಕಾಣಿಸುತ್ತಿಲ್ಲ. ಇದರ ನಡುವೆಯೇ ಈಗ 700 ಎಪಿಸೋಡ್​ ಆಗಿದೆ. ಈಗ ಏನಿದ್ದರೂ ಈ ಮನೆಯಲ್ಲಿ ಮುದ್ದು ಕಂದನದ್ದೇ ಸದ್ದು. ಆ ಮಗುವನ್ನು ಮುಗಿಸುವುದು ಅಷ್ಟು ಸುಲಭದ ಮಾತಲ್ಲ ಬಿಡಿ...