ಕೆಲವು ದಶಕಗಳ ಹಿಂದೆ ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ಹಂಸಲೇಖಾ ಅವರು ಇದೀಗ ನಿರ್ದೇಶಕರ ಟೋಪಿ ಹಾಕಲು ರೆಡಿಯಾಗಿದ್ದಾರೆ. ಅಂದರೆ, ಹಂಸಲೇಖಾ ಅವರು ಕನ್ನಡ ಚಿತ್ರವೊದನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸುದ್ದಿಗೋಷ್ಠಿ ಕರೆದು ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ 'ಕ್ರೇಜಿಸ್ಟಾರ್' ಹಾಗೂ 'ರವಿಮಾಮ' ಎಂದೇ ಖ್ಯಾತಿ ಪಡೆದಿರುವ ನಟ ರವಿಚಂದ್ರನ್ (Ravichandran) ಅವರ ಇತ್ತೀಚಿನ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಸಂಗೀತ ನಿರ್ದೇಶಕ ಹಾಗು ತಮ್ಮ ಆಪ್ತಮಿತ್ರ ಹಂಸಲೇಖಾ ಅವರು ನಿರ್ದೇಶಿಸಲಿರುವ ಚಿತ್ರದ ಮುಹೂರ್ತ ಸಮಾರಂಭಕ್ಕೆ ನಟ ರವಿಚಂದ್ರನ್ ಬಂದಿದ್ದರು. ಅಲ್ಲಿ ಕ್ಯಾಮೆರಾ ಎದುರು ನಿಂತಿದ್ದ ರವಿಚಂದ್ರನ್ ಅವರು ಒಮ್ಮೆ ತಮ್ಮ ತಲೆಯ ಮೇಲಿದ್ದ ಟೋಪಿ ತೆಗೆದು ಮತ್ತೆ ಹಾಕಿಕೊಂಡಿದ್ದಾರೆ ಅಷ್ಟೇ. ಅಷ್ಟರಲ್ಲೇ ಅವರ ಕೂದಲಿಲ್ಲದ ತಲೆ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ ಇಡೀ ಜಗತ್ತಿಗೇ ದರ್ಶನ್ ಆಗಿಬಿಟ್ಟಿದೆ.

ಹೌದು, ನಟ ರವಿಚಂದ್ರನ್ ಅವರು ಇತ್ತೀಚೆಗೆ ಹೊರಗೆ ಬರುವಾಗಲೆಲ್ಲಾ ಟೋಪಿ ಧರಿಸುತ್ತಿದ್ದರು. ಆದರೆ, ತಲೆ ಮೇಲೆ ಟೋಪಿ ಧರಿಸುತ್ತಿದ್ದಾಗ ತಲೆ ಖಾಲಿಯಾಗಿದೆಯೋ ಇಲ್ಲವೋ ಅಂತ ಗೊತ್ತಾಗುತ್ತಿರಲಿಲ್ಲ. ಕೂದಲಿದ್ದರೂ ಹಲವರು ಟೋಪಿ ಧರಿಸಿ ಓಡಾಡುತ್ತಾರೆ. ಆದರೆ, ರವಿಮಾಮನ ತಲೆ ಖಾಲಿಯಾಗಿದೆ ಅಂತ ಈಗ ಜಗತ್ತಿಗೇ ಗೊತ್ತಾಗಿದೆ. 'ತಲೆ ಖಾಲಿಯಾಗಿದೆ' ಅಂದರೆ ತಲೆ ಮೇಲಿರುವ ಕೂದಲು ಖಾಲಿಯಾಗಿದೆ ಅಂತ ಅರ್ಥ. ಓದುಗರು ಬೇರೇನೋ ಅರ್ಥ ಮಾಡಿಕೊಳ್ಳಬಾರದು! ಆದರೆ, ಈ ಮೊದಲು ತಲೆ ತುಂಬಾ ಗುಂಗುರು ಕೂದಲು ಹೊಂದಿ ಅಕರ್ಷಕವಾಗಿದ್ದ ನಟ ರವಿಚಂದ್ರನ್ ತಲೆ ಈಗ ಕೂದಲು ಕಳೆದುಕೊಂಡಿದೆ.

ಈ ಸಂಗತಿಯೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ನಟ ರವಿಚಂದ್ರನ್ ಈಗ ಹಿರಿಯ ವ್ಯಕ್ತಿ, ಅವರ ತಲೆ ಮೇಲೆ ಕೂದಲಿಲ್ಲ ಅನ್ನೋದು ದೊಡ್ಡ ಸಂಗತಿಯೇನಲ್ಲ. ಈ ವಯಸ್ಸಿನಲ್ಲಿ ಸಹಜವಾಗಿಯೇ ಬಹಳಷ್ಟು ಪುರುಷರ ತಲೆಯಲ್ಲಿ ಕೂದಲು ಉದುರಿರುತ್ತದೆ, ತಲೆ ಖಾಲಿ ಅಗಿರುತ್ತದೆ. ಆದರೆ, ಅದನ್ನು ಮರೆಮಾಚಲೋ ಎಂಬಂತೆ ಯಾವಾಗಲೂ ಟೋಫಿ ಧರಿಸುತ್ತಿದ್ದ ನಟ ರವಿಚಂದ್ರನ್ ಅವರು ಹೋಗಿ ಹೋಗಿ ಕ್ಯಾಮೆರಾ ಮುಂದೆಯೇ ಟೋಫಿ ತೆಗೆದು ತಮ್ಮ ಬೋಳುತಲೆಯನ್ನು ಯಾಕೆ ಸೋಷಿಯಲ್ ಮೀಡಿಯಾಗೆ ದರ್ಶನ ಮಾಡಿಸಿದ್ದು ಎಂಬುದಷ್ಟೇ ಈಗ ಚರ್ಚೆಯಾಗುತ್ತಿರೋ ಸಂಗತಿ!

ಅಂದಹಾಗೆ, ಕೆಲವು ದಶಕಗಳ ಹಿಂದೆ ಕನ್ನಡದ ಖ್ಯಾತ ನಿರ್ದೇಶಕರಾಗಿದ್ದ ಹಂಸಲೇಖಾ ಅವರು ಇದೀಗ ನಿರ್ದೇಶಕರ ಟೋಪಿ ಹಾಕಲು ರೆಡಿಯಾಗಿದ್ದಾರೆ. ಅಂದರೆ, ಹಂಸಲೇಖಾ ಅವರು ಕನ್ನಡ ಚಿತ್ರವೊದನ್ನು ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸುದ್ದಿಗೋಷ್ಠಿ ಕರೆದು ಹೇಳಿಕೊಂಡಿದ್ದಾರೆ. ಆದರೆ, ಹಂಸಲೇಖಾ ಅವರು ತಲೆಗೆ ಟೋಪಿ ಹಾಕಿಕೊಳ್ಳುವ ಸಮಯದಲ್ಲಿ ರವಿಚಂದ್ರನ್ ಅವರ ಖಾಲಿ ತಲೆ ಬಯಲಾಗಿದೆ, ಕ್ರೇಜಿಸ್ಟಾರ್ ಟೋಪಿ ಹಿಂದಿನ ಸೀಕ್ರೆಟ್ ಸೋಷಿಯಲ್ ಮೀಡಿಯಾಗೆ ಆಹಾರವಾಗಿದೆ. ನೆಟ್ಟಿಗರ ವೈರಲ್ ವಿಡಿಯೋಗೆ ನೀವೇನಂತೀರಾ..?