ಡಾ ರಾಜ್‌ಕುಮಾರ್ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಾಲದಲ್ಲಿ ಈಗಿನಂತೆ ಸೋಷಿಯಲ್ ಮೀಡಿಯಾಗಳು ಹಾಗು ಮೀಡಿಯಾಗಳು ಅಷ್ಟಾಗಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಸುದ್ದಿಗೋಷ್ಠಿ, ವರ್ತಮಾನ ಪತ್ರಿಕೆಗಳು ಅಷ್ಟೇ ಇರೋದು. ಕಟ್ಟೆ ಪುರಾಣಗಳ ಮೂಲಕ ಸಿಗುವ ಸುದ್ದಿಗಳು ಹಾಗೂ ಹರಡುತ್ತಿದ್ದ ಸುದ್ದಿಗಳೇ ಹೆಚ್ಚು!
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಅವರ ಜೀವನವೇ ಒಂದು ಮಹಾ ಪವಾಡ ಎನ್ನಬಹುದು. ಕಡುಬಡತನದಲ್ಲಿ ಜನಿಸಿದ ಮುತ್ತುರಾಜ್ ಅವರು ನಟರಾಗಿ, ಮೇರ ನಟರಾಗಿ ಹಾಗು ಕನ್ನಡದ 'ಅಣ್ಣಾವ್ರು' ಎಂಬ ಪಟ್ಟಕ್ಕೆ ಏರಿರುವ ಕಥೆಯೇ ರೋಚಕ. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿದ ನಟ ಡಾ ರಾಜ್‌ಕುಮಾರ್. ಅಂತ ನಟನ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿ, ಮರುಬಿಡುಗಡೆ ಆಗಿವೆ. ಹಾಗಿದ್ದರೆ ಅವು ಯಾವವು ನೋಡಿ..
ಸತ್ಯ ಹರಿಶ್ಚಂದ್ರ, ಮಂತ್ರಾಲಯ ಮಹಾತ್ಮೆ, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ದಾರಿ ತಪ್ಪಿದ ಮಗ, ರಾಜಾ ನನ್ನ ರಾಜಾ, ಭಾಗ್ಯವಂತರು, ಬಬ್ರುವಾಹನ, ನಾನೊಬ್ಬ ಕಳ್ಳ, ಗಂಧದ ಗುಡಿ, ಎರಡು ಕನಸು, ಜಗ ಮೆಚ್ಚಿದ ಮಗ (ಮರುಬಿಡುಗಡೆಗೆ ತಯಾರಾಗುತ್ತಿದೆ). ಹೀಗೆ ಅಂಥ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಈಗ. ಬರೋಬ್ಬರಿ 50 ವರ್ಷಗಳ ಬಳಿಕ ಮತ್ತೆ ಬಿಡುಗಡೆ ಮಾಡಿದರೂ ಕೆಲವು ಸಿನಿಮಾಗಳು ಸೂಪರ್ ಹಿಟ್ ಆಗಬಹುದು ಎನ್ನಲಾಗುತ್ತಿದೆ. ಇನ್ನೇನು ಕೆಲವು ಸಮಯದ ಬಳಿಕ 'ಜಗ ಮೆಚ್ಚಿದ ಮಗ' ಚಿತ್ರವು ಮರುಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.
ಡಾ ರಾಜ್‌ಕುಮಾರ್ ಸ್ಟಾರ್ ನಟರಾಗಿ ಮಿಂಚುತ್ತಿದ್ದ ಕಾಲದಲ್ಲಿ ಈಗಿನಂತೆ ಸೋಷಿಯಲ್ ಮೀಡಿಯಾಗಳು ಹಾಗು ಮೀಡಿಯಾಗಳು ಅಷ್ಟಾಗಿ ಇರಲಿಲ್ಲ. ಅಲ್ಲೊಂದು ಇಲ್ಲೊಂದು ಸುದ್ದಿಗೋಷ್ಠಿ, ವರ್ತಮಾನ ಪತ್ರಿಕೆಗಳು (ನ್ಯೂಸ್ ಪೇಪರ್) ಅಷ್ಟೇ ಇರೋದು. ಹಳ್ಳಿಗಳಲ್ಲಿ ಗುಂಪುಗುಂಪಾಗಿ ನಡೆಸುತ್ತಿದ್ದ ಕಟ್ಟೆ ಪುರಾಣಗಳ ಮೂಲಕ ಸಿಗುವ ಸುದ್ದಿಗಳು ಹಾಗೂ ಹರಡುತ್ತಿದ್ದ ಸುದ್ದಿಗಳಷ್ಟೇ ಇದ್ದವು. ಅದರೂ ಕೂಡ ಬಾಯಿಸುದ್ದಿಯ (ಮೌತ್ ಪಬ್ಲಿಸಿಟಿ) ಮೂಲಕವೇ ಅಂದು ಬಹಳಷ್ಟು ಸಿನಿಮಾಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದವು, ನೂರು-ಇನ್ನೂರು ದಿನಗಳು ಓಡುತ್ತಿದ್ದವು, ಕೆಲವು ವರ್ಷವನ್ನೂ ಪೂರೈಸುತ್ತಿದ್ದವು.
ಅಂದು ಸಿನಿಮಾ ಹಾಗೂ ವೈಯಕ್ತಿಕ ಜೀವನ ಎರಡೂ ಅಷ್ಟಾಗಿ ಜನರಿಗೆ ರೀಚ್ ಆಗುತ್ತಿರಲಿಲ್ಲ. ಹೀಗಾಗಿ, ಅಂದಿನ ಕಾಲದ ನಟರ ವೈಯಕ್ತಿಕ ಜೀವನದ ಸುದ್ದಿಗಳು ಹೆಚ್ಚಾಗಿ ಜನರಿಗೆ ತಲುಪುತ್ತಿರಲಿಲ್ಲ. ಆದರೆ, ಅಂದು ನಡೆದ ಸಿನಿಮಾ ಹಾಗೂ ಪರ್ಸನಲ್ ಘಟನೆಗಳನ್ನು ತಿಳಿದವರು ಇಂದು ಅದನ್ನು ಯೂಟ್ಯೂಬ್‌ಗಳು ಹಾಗೂ ಸೋಷಿಯಲ್ ಮೀಡಿಯಾಗಳ ಮೂಲಕ ಹೇಳುತ್ತಿದ್ದಾರೆ. ಈ ಮೂಲಕ ಡಾ ರಾಜ್‌ಕುಮಾರ್ ಜೀವನದಲ್ಲಿ ನಡೆದ ಹಲವು ಘಟನೆಗಳು ಇಂದು ಜನಮನವನ್ನು ತಲುಪುತ್ತಿವೆ.
