ಸದ್ಯಕ್ಕೆ ನನ್ನ ಲೈಫಲ್ಲಿ ನಾನು, ಅವರ ಲೈಫಲ್ಲಿ ಅವರು ನಮ್ಮನಮ್ಮ ಕೆಲಸಗಳ ಮೂಲಕ ಬ್ಯುಸಿ ಆಗಿದ್ದೇವೆ. ಈ ಬಗ್ಗೆ ಯಾವುದೇ ಸಮಸ್ಯೆ ಇಬ್ಬರಿಗೂ ಇಲ್ಲ. ಈಗ ಇಬ್ಬರದೂ ಇಂಡಿಪೆಂಡೆಂಟ್ ಲೈಫ್. ಆದರೆ, ಮ್ಯಾರೇಜ್ ಲೈಫಲ್ಲಿ ಸುಖ-ನೆಮ್ಮದಿ ಇದ್ದಿದ್ದರೆ ಖಂಡಿತಾ ಬೇರೆಬೇರೆ ಆಗ್ತಾ ಇರ್ಲಿಲ್ಲ. ಮುಂದೆ ನೋಡಿ..
ಸೋಷಿಯಲ್ ಮೀಡಿಯಾ ಸೆನ್ಸೇಷನ್
ನಟಿ, ರೀಲ್ಸ್ ರಾಣಿ ನಿವೇದಿತಾ ಗೌಡ (Niveditha Gowda) ಅವರೆಂದರೆ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಎಂಬುದು ಬಹುತೇಕರಿಗೆ ಗೊತ್ತು. ಅವರು ಮಾತನಾಡಲಿ ಮಾತನಾಡದೇ ಇರಲಿ, ಸಿನಿಮಾ ಕೆಲಸದಲ್ಲಿ ಇರಲಿ ಬಿಡಲಿ, ನಿವೇದಿತಾ ಗೌಡ ಯಾವತ್ತೂ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಅದು ಅವರ ಸ್ಪೆಷಾಲಿಟಿ. ರಿಯಾಲಿಟಿ ಶೋ, ಸಿನಿಮಾ ಹಾಗೂ ಮಾಡೆಲಿಂಗ್ ಹೀಗೆ ಎಲ್ಲಾ ಕಡೆ ನಿವೇದಿತಾ ಗೌಡ ಅವರು ಸುದ್ದಿಯಾಗುತ್ತಾರೆ. ಚಂದನ್ ಶೆಟ್ಟಿ (Chandan Shetty) ಜೊತೆಗಿನ ಮದುವೆ, ಡಿವೋರ್ಸ್ ಎಲ್ಲವೂ ಸಾಕಷ್ಟು ಸುದ್ದಿಯಾಗಿದ್ದು ಗೊತ್ತೇ ಇದೆ. ಇದೀಗ ಹೊಸದೊಂದು ಸುದ್ದಿ ಸೌಂಡ್ ಮಾಡತೊಡಗಿದೆ. ಅದೇನು ನೋಡಿ..
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿವೇದಿತಾ ಗೌಡ ಅವರು ತಮ್ಮ ವೈಯಕ್ತಿಕ ಸಂಗತಿಗಳನ್ನು ಸಹ ಹಂಚಿಕೊಂಡಿದ್ದಾರೆ. ಅವರು ಎಲ್ಲೂ ಚಂದನ್ ಶೆಟ್ಟಿಯವರನ್ನು ದೂರಿಲ್ಲ, ತಮ್ಮ ಮಾಜಿ ಗಂಡನ ಮೇಲೆ ಕೆಟ್ಟ ಆಪಾದನೆ ಮಾಡಿಲ್ಲ. ಆದರೆ, ಮದುವೆ ಬಳಿಕ ತಮ್ಮ ಜೀವನ ಚೆನ್ನಾಗಿರಲಿಲ್ಲ ಎಂದಿದ್ದಾರೆ. ಜೀವನದಲ್ಲಿ ಅದೊಂದು ಕಹಿ ನೆನಪು ಎಂದಿರುವ ನಿವೇದಿತಾ ಅವರು 'ಮದುವೆ ಬಳಿಕ ನಾನು ಸಾಕಷ್ಟು ಒತ್ತಡದ ಜೀವನ ನಡೆಸುತ್ತಿದ್ದೆ. ನನಗೆ ಈಗ ಒಂಥರಾ ರಿಲೀಫ್ ಆಗಿದೆ. ನನ್ನ ಇಷ್ಟದ ಪ್ರಕಾರ ಲೈಫ್ ಲೀಡ್ ಮಾಡುತ್ತಿದ್ದೇನೆ' ಎಂದಿದ್ದಾರೆ ನಿವೇದಿತಾ ಗೌಡ.
ಸತ್ಯ ಸಂಗತಿ ರಿವೀಲ್!
ಅಷ್ಟೇ ಅಲ್ಲ, ಚಂದನ್ ಶೆಟ್ಟಿಯವರೊಡನೆ ಈಗ ಸಂಬಂಧ ಹೇಗಿದೆ ಎಂಬುದನ್ನು ಕೂಡ ನಿವೇದಿತಾ ಗೌಡ ಅವರು ಹೇಳಿದ್ದಾರೆ. ಆಂಕರ್ 'ನೀವು ಅಂದು ಪ್ರೆಸ್‌ಮೀಟ್‌ನಲ್ಲಿ ನಾವಿಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದರೂ ಕೂಡ ಲೈಫ್‌ಲಾಂಗ್ ಬೆಸ್ಟ್ ಫ್ರೆಂಡ್ಸ್ ಆಗಿರ್ತೀವಿ ಅಂತ ಹೇಳಿದ್ರಿ. ಆ ಬಗ್ಗೆ ಈಗ ಏನ್ ಹೇಳ್ತೀರಿ' ಅಂತ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಿವೇದಿತಾ ಗೌಡ ಉತ್ತರಿಸುತ್ತ 'ಅದು ಕಂಪ್ಲೀಟ್ ತಪ್ಪು ಹೇಳಿಕೆ ಅಂತ ನನಗೆ ಈಗ ಅರ್ಥ ಆಗ್ತಿದೆ. ಯಾಕಂದ್ರೆ, ಒಂದ್ ಬಾರಿ ಬಿಟ್ಟು ಹೋಗಿ ಆದ್ಮೇಲೆ ಮತ್ತೆ ಹಾಗೆ ಮಾಡ್ಬಾರ್ದು, ಬೆಸ್ಟ್ ಫ್ರೆಂಡ್ ಆಗಿ ಇರಬಾರ್ದು. ಯಾಕೆ ಅಂದ್ರೆ.. ಇಬ್ರಿಗೂ ಫ್ಯೂಚರ್ ಇರುತ್ತೆ.. ಮುಂದೆ, ಅಂದ್ರೆ ಫ್ಯೂಚರ್‌ನಲ್ಲಿ ಇಬ್ರುನೂ ಬೇರೆ ಯಾರನ್ನೋ ಇಷ್ಟ ಪಟ್ಟಾಗ, ಅದು ಅವರವರ ಪಾರ್ಟ್‌ನರ್‌ಗೆ ಅಗೌರವ ತೋರಿಸಿದ ಹಾಗೆ ಆಗುತ್ತೆ ನಾವು ನಮ್ಮ ಹಳೆಯ ಸಂಬಂಧದಲ್ಲಿ ಮತ್ತೆ ಇರೋದು..
ಈ ಮಾತು ಇಬ್ಬರಿಗೂ ಅನ್ವಯಿಸುತ್ತೆ.. ಒಮ್ಮೆ ಬೇಡ ಅಂತ ಬಿಟ್ಟು ಹೋದ್ಮೇಲೆ ಮತ್ತೆ ಫ್ರೆಂಡ್ಸ್ ಆಗಿ ಯಾಕೆ ಇರ್ಬೇಕು? ಹಾಗೆ ಹೇಳಿದಾಗ ಸಹಜವಾಗಿಯೇ ಹಲವು ಪ್ರಶ್ನೆಗಳು ಮೂಡುತ್ತವೆ.. ಮತ್ತೆ ಸ್ನೇಹಿತರಾಗಿ ಇರ್ತೀವಿ ಅಂತಾದ್ರೆ ಯಾಕೆ ಬಿಟ್ಟು ಹೋಗ್ಬೇಕು? ಯಾಕೆ ಬಿಟ್ಟು ಬಂದು ಮತ್ತೆ ಫ್ರೆಂಡ್ಸ್ ಆಗಿ ಇರೋ ಅಗತ್ಯ ಇರುತ್ತೆ? ಆದ್ರೆ ಆ ಕ್ಷಣಕ್ಕೆ ಪ್ರೆಸ್‌ಮೀಟ್‌ನಲ್ಲಿ ಹಾಗೆ ಇಬ್ಬರೂ ಹೇಳಿದೀವಿ. ಕಾರಣ, ಆಗಿನ ನಮ್ಮ ಅಭಿಪ್ರಾಯ ಆದಾಗಿತ್ತು. ಆದರೆ, ಅದು ಆ ಬಳಿಕ ಬದಲಾಗಿದೆ, ಬದಲಾಗಲೇಬೇಕು ಅಲ್ವಾ?
ಯಾವುದೇ ಸಮಸ್ಯೆ ಇಬ್ಬರಿಗೂ ಇಲ್ಲ
ಸದ್ಯಕ್ಕೆ ನನ್ನ ಲೈಫಲ್ಲಿ ನಾನು, ಅವರ ಲೈಫಲ್ಲಿ ಅವರು ನಮ್ಮನಮ್ಮ ಕೆಲಸಗಳ ಮೂಲಕ ಬ್ಯುಸಿ ಆಗಿದ್ದೇವೆ. ಈ ಬಗ್ಗೆ ಯಾವುದೇ ಸಮಸ್ಯೆ ಇಬ್ಬರಿಗೂ ಇಲ್ಲ. ಈಗ ಇಬ್ಬರದೂ ಇಂಡಿಪೆಂಡೆಂಟ್ ಲೈಫ್. ಆದರೆ, ಮ್ಯಾರೇಜ್ ಲೈಫಲ್ಲಿ ಸುಖ-ನೆಮ್ಮದಿ ಇದ್ದಿದ್ದರೆ ಖಂಡಿತಾ ಬೇರೆಬೇರೆ ಆಗ್ತಾ ಇರ್ಲಿಲ್ಲ. ಆದರೆ, ಇಬ್ಬರ ನಡುವೆ ಹೊಂದಾಣಿಕೆ ಕೊರತೆಯಿಂದ ಡಿವೋರ್ಸ್ ಪಡೆಯಲೇಬೇಕಾಯ್ತು. ಆದರೆ, ಆಮೇಲೆ ನಾವಿಬ್ಬರೂ ಸ್ನೇಹಿತರ ಸಂಬಂಧದಲ್ಲಿ ಇಲ್ಲ ಎಂಬುದು ಕೂಡ ಅಷ್ಟೇ ನಿಜ. ಆಗಿದ್ದು ಆಗಿಹೋಯ್ತು, ಈಗ ಲೈಫ್ ಚೆನ್ನಾಗಿದೆ, ಮುಂದಿನದು ಮುಂದೆ ನೋಡಿಕೊಂಡರೆ ಆಯ್ತು' ಎಂದಿದ್ದಾರೆ ನಿವೇದಿತಾ ಗೌಡ.
