ಒಂದು ಕಿಸ್ಸಿಂಗ್ ಸೀನ್‌ನ ಚಿತ್ರೀಕರಣದ ವೇಳೆ ಹೀರೋಯಿನ್ ಬಾಯಿಂದ ಈರುಳ್ಳಿ ವಾಸನೆ ಬರುತ್ತಿದೆ ಎಂದು ನಟ ದೂರಿದ್ದ. ಈ ಘಟನೆ ನಡೆದ ಸಿನಿಮಾ ಯಾವುದು, ಹೀರೋ- ಹೀರೋಯಿನ್ ಯಾರು, ತಿಳಿಯೋಣ ಬನ್ನಿ.
ಆಗಾಗ್ಗೆ, ಇಂತಹ ಕಥೆಗಳು ಬಾಲಿವುಡ್ ಚಲನಚಿತ್ರೋದ್ಯಮದ ಕಾರಿಡಾರ್‌ಗಳಿಂದ ಬರುತ್ತವೆ. ಕೆಲವು ಕುತೂಹಲಕಾರಿಯಾಗಿರುತ್ತವೆ. ಕೆಲವು ತಮಾಷೆಯಾಗಿರುತ್ತವೆ. 1997ರ ಜನಪ್ರಿಯ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಸಿನಿಮಾ ಒಂದರ ಚಿತ್ರೀಕರಣದ ಸಮಯದಲ್ಲಿ, ಚಿತ್ರದ ನಾಯಕ ತನ್ನ ಸಹನಟಿಯ ಬಗ್ಗೆ ದೂರು ನೀಡಲು ನಿರ್ದೇಶಕರ ಬಳಿ ಹೋದ. ಅವನ ದೂರು ಏನಿತ್ತೆಂದರೆ, ಹೀರೋಯಿನ್ ಬಾಯಿ ಸಿಕ್ಕಾಪಟ್ಟೆ ವಾಸನೆ ಬರುತ್ತಿದೆ ಅಂತ. ಅವನೇಕೆ ಆಕೆಯ ಬಾಯಿಯ ಬಳಿಗೆ ಹೋದ? ಯಾಕೆಂದರೆ ಒಂದು ಕಿಸ್ಸಿಂಗ್ ಸೀನ್‌ನ ಚಿತ್ರೀಕರಣ ನಡೆಯುತ್ತಿತ್ತು. ನಾಯಕಿಯ ಬಾಯಿಯ ವಾಸನೆ ಆ ನಾಯಕನನ್ನು ತುಂಬಾ ಅಸ್ವಸ್ಥಗೊಳಿಸಿತ್ತು. ನಾಯಕ ಸೆಟ್‌ನಲ್ಲಿರುವ ಎಲ್ಲರ ಮುಂದೆ, 'ಅವಳ ಬಾಯಿ ಗಬ್ಬು ನಾರುತ್ತಿದೆ' ಎಂದು ಹೇಳಿದ!
ಇದು ಬಾಲಿವುಡ್ ನಾಯಕನಿಂದ ಖಳನಾಯಕನ ವರೆಗೆ ಹಲವು ಥರದ ಪಾತ್ರಗಳನ್ನು ಮಾಡಿದ ಬಾಬಿ ಡಿಯೋಲ್ ಕಥೆ. 1990ರ ದಶಕದ ಉತ್ತರಾರ್ಧದಲ್ಲಿ ಬಾಬಿ 'ಗುಪ್ತ್' ಮತ್ತು 'ಸೋಲ್ಜರ್' ಮೊದಲಾದ ಎವರ್‌ಗ್ರೀನ್ ಫಿಲಂಗಳನ್ನು ನೀಡಿದ. ಆತ ಪ್ರೀತಿ ಜಿಂಟಾನಿಂದ ಹಿಡಿದು ಕಾಜೋಲ್‌ವರೆಗೆ ಎಲ್ಲರೊಂದಿಗೆ ಕೆಲಸ ಮಾಡಿದ.
ಫಿಲ್ಮ್‌ಫೇರ್‌ಗೆ ನೀಡಿದ ಒಂದು ಸಂದರ್ಶನದಲ್ಲಿ ಬಾಬಿ ಡಿಯೋಲ್ ಈ ಘಟನೆಯ ಬಗ್ಗೆ ಹೇಳಿಕೊಂಡಿದ್ದ. ಈ ಘಟನೆ 1997ರ 'ಗುಪ್ತ್' ಚಿತ್ರಕ್ಕೆ ಸಂಬಂಧಿಸಿತ್ತು. ಈ ಸೈಕಾಲಜಿಕಲ್ ಕ್ರೈಮ್ ಥ್ರಿಲ್ಲರ್‌ನಲ್ಲಿ ಬಾಬಿ ಡಿಯೋಲ್ ಜೊತೆ ಕಾಣಿಸಿಕೊಂಡ ಹೀರೋಯಿನ್‌ಗಳು ಕಾಜೋಲ್ ಮತ್ತು ಮನಿಷಾ ಕೊಯಿರಾಲ. ಇವರು ಬಾಲಿವುಡ್‌ಗೆ ಹೊಸಬರೇನೂ ಆಗಿರಲಿಲ್ಲ, ಪ್ರಮುಖ ನಟಿಯರೇ ಆಗಿದ್ದರು. ಆ ಇಬ್ಬರಲ್ಲಿ ಬಾಬಿ ಡಿಯೋಲ್ ನಿರ್ದೇಶಕರಿಗೆ ದೂರು ನೀಡಿದ್ದು ಮನಿಶಾ ಕೊಯಿರಾಲ ಬಗ್ಗೆ.
ಬಾಬಿ ಪ್ರಕಾರ, ಮನಿಷಾ ಕೊಯಿರಾಲಾ ಅವರೊಂದಿಗೆ ಗುಪ್ತ್ ಚಿತ್ರದ 'ಬೇಚೈನಿಯಾʼ ಹಾಡನ್ನು ಚಿತ್ರೀಕರಿಸುತ್ತಿದ್ದರು. ಆಗ ಇಬ್ಬರೂ ಹತ್ತಿರ ಬಂದು ಮುತ್ತಿನ ದೃಶ್ಯ ಚಿತ್ರೀಕರಿಸಬೇಕಿತ್ತು. ಶಾಟ್‌ಗಾಗಿ ಅವಳು ತನ್ನ ಮುಖವನ್ನು ಬಾಬಿಯ ಹತ್ತಿರ ತರಬೇಕಾಯಿತು. ಆದರೆ ಮನಿಷಾಳ ಬಾಯಿಯಲ್ಲಿ ಈರುಳ್ಳಿಯ ವಾಸನೆ ಬರುತ್ತಿತ್ತು. ಬಾಬಿಗೆ ಅದು ತಡೆಯಲಾಗದಷ್ಟು ಹಿಂಸೆಯಾಯಿತು.
ಕಾರಣವೇನು? ಶೂಟಿಂಗ್‌ಗೆ ಸ್ವಲ್ಪ ಮೊದಲು ಮನಿಷಾ ಹಸಿ ಈರುಳ್ಳಿಯೊಂದಿಗೆ ಚನಾ ಚಾಟ್ ತಿಂದಿದ್ದಳು. ಎಷ್ಟು ಬಾಯಿ ತೊಳೆದರೂ ಈರುಳ್ಳಿ ವಾಸನೆ ಹೋಗಿರಲಿಲ್ಲ. ಇದರಿಂದಾಗಿ, ಈ ಪ್ರಣಯ ದೃಶ್ಯವನ್ನು ಚಿತ್ರೀಕರಿಸುವುದು ಅವಳಿಗೆ ತುಂಬಾ ಕಷ್ಟಕರವಾಯಿತು. ಆ ದೃಶ್ಯ ನಾನು ಮಾಡಲು ಸಾಧ್ಯವಾದದ್ದು ಒಂದು ಪವಾಡ ಎಂದ ಬಾಬಿ. ಏಕೆಂದರೆ ಅಂಥ ಈರುಳ್ಳಿ ವಾಸನೆಯ ಬಾಯಿಯೊಂದಿಗೆ ನಡುವೆ ಪ್ರಣಯ ಭಾವನೆ ಮೂಡುವುದು ಕಡು ಕಷ್ಟ. ಆದರೆ ನಂತರ ನಾನು ಅದರ ಬಗ್ಗೆ ಎಲ್ಲವನ್ನೂ ನಿರ್ದೇಶಕರಿಗೆ ಹೇಳಿದೆ ಎಂದ.
ಬಾಬಿಯ ವೃತ್ತಿಜೀವನದ ಎರಡನೇ ಚಿತ್ರ 'ಗುಪ್ತ್'. 1997ರಲ್ಲಿ ಬಾಬಿ ಡಿಯೋಲ್ 'ಗುಪ್ತ್'ನಲ್ಲಿ ಕಾಣಿಸಿಕೊಂಡರು. ಅದರ ಜೀವಿತಾವಧಿಯ ಸಂಗ್ರಹ ರೂ. 18.23 ಕೋಟಿ.
