'ವಿಷ್ಣು ದಾದಾ ಅವರ ಸ್ಮಾರಕ ಬೇಕು ಎಂದು ಅಭಿಮಾನಿಗಳಿಂದ ಮನವಿ ಕೊಟ್ಟಿದ್ದಾರೆ. ತೆರವು ಮಾಡಿದ ಜಾಗದಲ್ಲೇ ನಮಗೆ ಜಾಗ ಬೇಕು ಎಂದಿದ್ದಾರೆ. ಅದಷ್ಟು ಬೇಗ ಸರ್ಕಾರಕ್ಕೆ ಮನವಿ ಮಾಡ್ತೀವಿ. ನಾನು ನಿಮ್ಮೆಲ್ಲರ ಜೊತೆ ಇದೀನಿ..
ಕನ್ನಡದ ಮೇರು ನಟ ವಿಷ್ಣುವರ್ಧನ್ (Vishnuvardhan) ಸಮಾಧಿ ಧ್ವಂಸ ಹಿನ್ನೆಲೆಯಲ್ಲಿ ಅಭಿಮಾನಿಗಳ ಪ್ರೊಟೆಸ್ಟ್ ಜೋರಾಗಿದೆ. ಫಿಲಂ ಚೇಂಬರ್ ಮುಂದೆ ವಿಷ್ಣು ಅಭಿಮಾನಿಗಳು ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಇಂದು (11 ಆಗಸ್ಟ್ 2025) ಫಿಲಂ ಚೇಂಬರ್ ಗೆ ಆಗಮಿಸಿರುವ ನಟ ವಿಷ್ಣುವರ್ಧನ್ ಅಭಿಮಾನಿಗಳು ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಿದ್ದಾರೆ.
ಈ ಬಗ್ಗೆ ಅಲ್ಲಿ ಮಾತನ್ನಾಡಿರುವ ವಿಷ್ಣು ಫ್ಯಾನ್ಸ್ 'ಫಿಲಂ ಚೇಂಬರ್ ಕಡೆಯಿಂದ ಯಾವುದೇ ರೀತಿಯ ಬೆಂಬಲ ಇಲ್ಲ. ನಾವು ತಮಿಳು ನಾಡಿನಲ್ಲಿ ಇಲ್ಲ ಕರ್ನಾಟಕದಲ್ಲಿ ಇರೋದು. ಅಭಿಮಾನ್ ಸ್ಟುಡಿಯೋದಲ್ಲಿಯೇ. ನಮಗೆ ಸಮಾಧಿ ಬೇಕು ಅನ್ನೋ ಕೂಗು ಹಾಕುತ್ತಿದ್ದಾರೆ ವಿಷ್ಣು ಅಭಿಮಾನಿಗಳು.
ಇನ್ನು ವಿಷ್ಣುವರ್ಧನ್ ಅಭಿಮಾನಿ ಕ್ರಾಂತಿ ರಾಜು ಹೇಳಿಕೆ ನೀಡಿದ್ದಾರೆ. ಸಾರಾ ಗೋವಿಂದು ಅವ್ರ ನೇತೃತ್ವದಲ್ಲೇ ವಿಷ್ಣು ಸಮಾಧಿ ಮರು ನಿರ್ಮಾಣ ಆಗಬೇಕು. ರಾಜಕುಮಾರ್ ಹಾಗೆ ವಿಷ್ಣು ವರ್ಧನ್ ಕೂಡ ಕರ್ನಾಟಕಕ್ಕೆ ಕೊಡುಗೆ ಕೊಟ್ಟಿದ್ದಾರೆ.
ಮಾಡಿ ದ್ವಾಂಸ ಮಾಡೋದು ಅಂದ್ರೆ ಅಷ್ಟು ಸುಲಭನಾ..? ಸಾಹಸ ಸಿಂಹನಿಗಾಗಿ ಅಭಿಮಾನ್ ಸ್ಟುಡಿಯೋ ಜಾಗ ಉಳಿಸಿ ಕೊಡಿ. ಫಿಲ್ಮ್ ಚೇಂಬರ್ ಮೂಲಕ ಸಿಎಂಗೆ ಮನವಿ ಸಲ್ಲಿಸುವಂತೆ ಮನವಿ ಮಾಡುತಿದ್ದೇವೆ.
ಸರ್ಕಾರ ಇದನ್ನ ಉಳಿಸಿಕೊಡಬೇಕು. ಒಬ್ಬ ಮೇರು ನಟನಿಗೆ ಅವಮಾನ ಮಾಡಿದ್ದಾರೆ. ಸುದೀಪ್ ಬಿಟ್ರೆ ಯಾರಿಗೂ ಕೃತಜ್ಞತೆ ಇಲ್ಲ. ತಪ್ಪು ಮಾಡಿದವರು ಮಾಡಿರೋ ತಪ್ಪನ್ನ ಸರಿ ಪಡಿಸಿಕೊಂಡು ಕ್ಷಮೆ ಕೇಳಿ. ಕನ್ನಡದ ಒಬ್ಬ ಮೇರುನಟನಿಗಾಗಿ 10 ಗುಂಟೆ ಜಗ ಕೊಡೋದಕ್ಕೆ ಆಗಲ್ವ?' ಎಂದು ಗರಂ ಆಗಿದ್ದಾರೆ.
ಈ ಬಗ್ಗೆ ಸಾರಾ ಗೋವಿಂದು ಹೇಳಿಕೆ ನೀಡಿದ್ದಾರೆ. ವಿಷ್ಣು ಅಭಿಮಾನಿಗಳಿಂದ ಮನವಿ ಸ್ವೀಕರಿಸಿದ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು 'ವಿಷ್ಣು ದಾದಾ ಅವರ ಸ್ಮಾರಕ ಬೇಕು ಎಂದು ಅಭಿಮಾನಿಗಳಿಂದ ಮನವಿ ಕೊಟ್ಟಿದ್ದಾರೆ. ತೆರವು ಮಾಡಿದ ಜಾಗದಲ್ಲೇ ನಮಗೆ ಜಾಗ ಬೇಕು ಎಂದಿದ್ದಾರೆ. ಅದಷ್ಟು ಬೇಗ ಸರ್ಕಾರಕ್ಕೆ ಮನವಿ ಮಾಡ್ತೀವಿ. ನಾನು ನಿಮ್ಮೆಲ್ಲರ ಜೊತೆ ಇದೀನಿ..
ಸರ್ಕಾರದವರು ಪರ್ಯಾಯವಾಗಿ ಮೈಸೂರಿನಲ್ಲಿ ಜಾಗ ಕೊಟ್ಟಿದ್ದಾರೆ. ಅದು ಇರಲಿ, ಜೊತೆಗೆ ಇಲ್ಲೂ ಜಾಗ ಕೊಡಿಸೋಕೆ ಕೇಳೋಣ. ಗೀತಾ ಬಾಲಿಯವರೇ ಹೇಳಿದ್ದಾರೆ.. ಕಿಡಿಗೇಡಿ ಕೈವಾಡ ಇದೆ ಅಂತ. ಸರ್ಕಾರಕ್ಕೆ ಮನವಿ ಮಾಡ್ತೀವಿ' ಎಂದಿದ್ದಾರೆ.
ಇನ್ನು ಈ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಸಹ ಹೇಳಿಕೆ ನೀಡಿದ್ದಾರೆ. 'ನಾವು ಸರ್ಕಾರದ ಗಮನಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಮ್ಮಿಂದ ಏನಾಗುತ್ತೋ ಅದು ನಾನು ಮಾಡೇ ಮಾಡ್ತೀನಿ. ವಿಷಯ ಗೊತ್ತಾದಾಗ ಮೊದಲಿಗೆ ಹೋಗಿದ್ದೆ ನಾನು. ನಾವು ರಾಜಕೀಯ ಮಾಡುತ್ತಿಲ್ಲ. ವಿಷ್ಣು ಅಭಿಮಾನಿ ಸೇನೆಯವರಿಗೆ ಎಂದು ಮಲತಾಯಿ ಧೋರಣೆ ರೀತಿ ಮಾಡಿಲ್ಲ, ನಾವು ತಾರತಮ್ಯ ಮಾಡಿಲ್ಲ.
ನಾವು ತಿಳಿದು ನೋಡಿ ಮಾಡಿ ಈ ವಿಷಯವನ್ನ ನೋಡುತ್ತಿದ್ದೇವೆ. ನಾವು ಈ ವಿಷಯವನ್ನ ಪರಿಶೀಲಿಸಿ ಮುಂದೆ ನಡೆಯುತ್ತಿದ್ದೇವೆ. ನಾನು ಸರ್ಕಾರದ ಗಮನಕ್ಕೆ ಅದಷ್ಟು ಬೇಗ ತರುತ್ತೇನೆ. ಸರ್ಕಾರ ಮನಸು ಮಾಡಿದರೆ ಮಾತ್ರ ಆಗುತ್ತೆ. ಈಗಲೇ ಸರ್ಕಾರದ ಗಮನಕ್ಕೆ ತರುತ್ತೇನೆ.
ನಾನು ಕಾರ್ತಿಕ್ ಜೊತೆ ಮಾತನಾಡಿದ್ದೇನೆ. ಆದರೆ ಯಾವುದೇ ರೀತಿಯ ಉತ್ತರವಿಲ್ಲ. ಯಾವುದೇ ರೀತಿ ಉತ್ತರ ಇಲ್ಲ ಇದರ ಬಗ್ಗೆ. ಕಾರ್ತಿಕ್ ನನ್ನ ಕೈಗೆ ಸಿಗುತ್ತಿಲ್ಲ. ಸುದೀಪ್ ಬಿಟ್ಟು ಬೇರೆ ಯಾರೂ ಇದರ ಬಗ್ಗೆ ಮಾತಾಡಿಲ್ಲ. ಚಿತ್ರರಂಗದವರೆಲ್ಲ ಇದರ ಬಗ್ಗೆ ಮಾತಾಡಲೇಬೇಕು' ಎಂದಿದ್ದಾರೆ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹುಲು.
ಸದ್ಯ, ನಟ ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರು ಈ ಬಗ್ಗೆ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಒಂದು ಕಡೆ ಅಭಿಮಾನಿಗಳು ಹಾಗೂ ಇನ್ನೊಂಡು ಕಡೆ ಸರ್ಕಾರ ಹಾಗೂ ಬಾಲಣ್ಣನ ಕುಟುಂಬ, ಹೀಗೆ ನಿರಂತರವಾಗಿ ಅನಿರುದ್ಧ ಅವರು ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ವಿವಾದದ ಹಂತದಲ್ಲಿರುವ ನಟ ವಿಷ್ಣುವರ್ಧನ್ ಸಮಾಧಿ ಸಂಗತಿ ಯಾವತ್ತು ತಾರ್ಕಿಕ ಅಂತ್ಯ ಕಾಣುತ್ತೆ ಎಂದು ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
