1934 ರಿಂದ ಬೆಳೆದುಕೊಂಡು ಬಂದ ಕನ್ನಡ ಸಿನಿಮಾರಂಗಕ್ಕೆ ಡಾ ರಾಜ್‌ಕುಮಾರ್ ಆಗಮನವಾಗಿದ್ದು 1942ರಲ್ಲಿ. ರಾಜ್‌ಕುಮಾರ್ ಅವರು ಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ' ಅಲ್ಲ, ಬದಲಾಗಿ 'ಭಕ್ತ ಪ್ರಹ್ಲಾದ' (1942) ದಲ್ಲಿ ಬಾಲನಟನಾಗಿದ್ದರು. 'ಶ್ರೀನಿವಾಸ ಕಲ್ಯಾಣ' (1952) ಚಿತ್ರದಲ್ಲಿ ಕಾಣಿಸಿಕೊಂಡರು.

ತಪ್ಪು ಅಥವಾ ಸರಿ ಎಂಬ ಚರ್ಚೆಯ ಅಗತ್ಯವಿಲ್ಲ!

ಕನ್ನಡ ಚಿತ್ರರಂಗ ಎಂದ ಕೂಡಲೇ ನೆನಪಾಗುವುದು ಸಹಜವಾಗಿಯೇ ಕೆಲವು ಹೆಸರುಗಳು. ಡಾ ರಾಜ್‌ಕುಮಾರ್, ವಿಷ್ನುವರ್ಧನ್, ಅಂಬರೀಷ್, ಶಂಕರ್‌ ನಾಗ್, ಅನಂತ್‌ ನಾಗ್ ಹೀಗೆ ಹಲವು ಸ್ಟಾರ್ ನಟರುಗಳ ಹೆಸರುಗಳೇ ನೆನಪಾಗುತ್ತವೆ. ವೈ.ವಿ.ರಾವ್, ಬಿ ಆರ್ ಪಂತುಲು, ನಟ ಬಾಲಕೃಷ್ಣ, ನರಸಿಂಹರಾಜ್ ಹಾಗೂ ವೈ.ವಿ. ರಾವ್ ಅಂತವರಲ್ಲ. ಅದು ತಪ್ಪು ಅಥವಾ ಸರಿ ಎಂಬ ಚರ್ಚೆಯ ಅಗತ್ಯವಿಲ್ಲ. ಆದರೆ, ಸಾಮಾನ್ಯವಾಗಿ ನಿರ್ಮಾಪಕರು, ನಿರ್ದೇಶಕರು ಅಥವಾ ಪೊಷಕ ನಟರುಗಳ ನೆನಪಾಗುವುದೇ ಇಲ್ಲ. ಅವರೆಲ್ಲರೂ ಚಿತ್ರರಂಗಕ್ಕೆ ಅವರವರ ಕಾಲದಲ್ಲಿ ಅನಿವಾರ್ಯ ಎನ್ನಿಸಿದ್ದ ಆಧಾರ ಸ್ತಂಭಗಳೇ ಆಗಿದ್ದವರು.

ಕನ್ನಡವೂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆ ಎನ್ನಿಸಿದ್ದ ನಟಿ ಲಕ್ಷ್ಮೀ (ಜ್ಯೂಲಿ ಲಕ್ಷ್ಮಿ) ಅವರ ತಂದೆ ಯರಗುಡಿಪತಿ ವರದರಾವ್ (Y. V. Rao) ಅವರು ಕನ್ನಡ ಸಿನಿಮಾರಂಗದ ಒಬ್ಬರು ಆಧಾರಸ್ಥಂಬ ಎನ್ನಿಸಿದ್ದವರು. ಕಾರಣ, ವೈ.ವಿ. ರಾವ್ ಅವರು ಕನ್ನಡದ ಮೊದಲ ಚಲನಚಿತ್ರವಾದ "ಸತಿ ಸುಲೋಚನ" (1934) ನಿರ್ದೇಶಿಸಿದ್ದರು. ಅವರು ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ, ಸಂಪಾದಕ ಮತ್ತು ನಟರಾಗಿ ಬಹಳಷ್ಟು ಕನ್ನಡ ಸಿನಿಮಾಗಳಿಗೂ ಕೆಲಸ ಮಾಡಿದ್ದರು. ಅಂದು ಸಿನಿಮಾ ಕೆಲಸದ ಕೇಂದ್ರ ಬಿಂದು ಕರ್ನಾಟಕ ಆಗಿರಲಿಲ್ಲ, ಮದ್ರಾಸ್ ಆಗಿತ್ತು ಅಷ್ಟೇ.

1934 ರಿಂದ ಹೀಗೆ ಬೆಳೆದುಕೊಂಡು ಬಂದ ಕನ್ನಡ ಸಿನಿಮಾರಂಗಕ್ಕೆ ಡಾ ರಾಜ್‌ಕುಮಾರ್ ಆಗಮನವಾಗಿದ್ದು 1942ರಲ್ಲಿ. ಡಾ. ರಾಜ್‌ಕುಮಾರ್ ಅವರು ಮೊದಲು ನಟಿಸಿದ ಸಿನಿಮಾ 'ಬೇಡರ ಕಣ್ಣಪ್ಪ' ಅಲ್ಲ, ಬದಲಾಗಿ ಅವರು 'ಭಕ್ತ ಪ್ರಹ್ಲಾದ' (1942) ಚಿತ್ರದಲ್ಲಿ ಬಾಲನಟನಾಗಿ ನಟಿಸಿದ್ದರು ಮತ್ತು 'ಶ್ರೀನಿವಾಸ ಕಲ್ಯಾಣ' (1952) ಚಿತ್ರದಲ್ಲಿ ಸಪ್ತ ಋಷಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಂಡರು. ಅವರು ನಾಯಕರಾಗಿ ನಟಿಸಿದ ಮೊದಲ ಸಿನಿಮಾ 1954ರಲ್ಲಿ ಬಿಡುಗಡೆಯಾದ 'ಬೇಡರ ಕಣ್ಣಪ್ಪ'. ಅ ಬಳಿಕ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, 'ಕರ್ನಾಟಕ ರತ್ನ' ಎನಿಸಿಕೊಂಡರು.

ಇನ್ನು ಡಾ ವಿಷ್ಣುವರ್ಧನ್ ಅವರು ಸಿನಿಮಾರಂಗಕ್ಕೆ ಬಂದಿದ್ದು 1972 ರಲ್ಲಿ ತೆರೆಕಂಡ 'ವಂಶವೃಕ್ಷ' ಚಿತ್ರದ ಮೂಲಕ. ಈ ಚಿತ್ರವು ಗಿರೀಶ್ ಕಾರ್ನಾಡ್ ಮತ್ತು ಬಿ. ವಿ. ಕಾರಂತ ನಿರ್ದೇಶಿಸಿದ ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ನಟರಾಗಿ ಕಾಣಿಸಿಕೊಂಡಿದ್ದ ವಿಷ್ಣುವರ್ಧನ್ ಅವರು ಅದೇ ವರ್ಷ, ಅಂದರೆ 1972ರಲ್ಲಿ 'ನಾಗರಹಾವು' ಸಿನಿಮಾದ ಮೂಲಕ ನಾಯಕರಾಗಿ ಚಿತ್ರರಂಗಕ್ಕೆ ಬಂದವರು. ಅಲ್ಲಿಂದ ಮುಂದೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅವರು ಕನ್ನಡದ ಮೇರು ನಟ ಎನ್ನಿಸಿಕೊಂಡರು. ಇದೀಗ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಸಹ ನೀಡಿ ಗೌರವಿಸಲಾಗಿದೆ.

ಇನ್ನು, ಅಂಬರೀಷ್, ಅನಂತ್‌ ನಾಗ್, ಶಂಕರ್‌ ನಾಗ್ ಹೀಗೆ ಅನೇಕರು ಕನ್ನಡ ಸಿನಿಮಾರಂಗದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಟರು. ಸಾಕಷ್ಟು ನಟಿಯರು, ತಂತ್ರಜ್ಞರು ಹಾಗೂ ನಿರ್ಮಾಪಕರು ಹಾಗೂ ನಿರ್ದೇಶಕರುಗಳ ಕೊಡುಗೆ ಕನ್ನಡ ಚಿತ್ರರಂಗಕ್ಕೆ ದೊರಕಿದ್ದು, ಇಂದು ಸ್ಯಾಂಡಲ್‌ವುಡ್ ಜಾಗತಿಕ ಸಿನಿಮಾ ಮಾಡಿ ಹೆಸರು-ಹಣ ಗಳಿಸಿಕೊಳ್ಳುವಷ್ಟು ಬೆಳೆದಿದೆ. ಆದರೆ, ನಮಗೆ ಸ್ಟಾರ್ ನಟರುಗಳು ಮಾತ್ರ ಥಟ್ಟನೇ ನೆನಪಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಹಾಗೂ ಶಂಕರ್‌ ನಾಗ್ ಅವರುಗಳ ಹೆಸರುಗಳು ಒಂದೇ ಸಾಲಿನಲ್ಲಿ ಬಂದು ಕಣ್ಣೆದುರು ನಿಲ್ಲುತ್ತವೆ.

ಡಾ ರಾಜ್‌ಕುಮಾರ್ ತುಂಬಾ ಹಿರಿಯರು!

ಆದರೆ, ಅಚ್ಚರಿ ಎಂದರೆ ಡಾ ರಾಜ್‌ಕುಮಾರ್ ಅವರು ಮಿಕ್ಕ ನಟರುಗಳ ಸಮಕಾಲೀನರು ಅಲ್ಲ, ಅವರು ತುಂಬಾ ಹಿರಿಯ ನಟ. ಡಾ ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ನಾಯಕರಾಗಿ ಬಂದಾಗ ವಿಷ್ಣುವರ್ಧನ್ ಅವರಿಗೆ ಕೇವಲ 4 ವರ್ಷ. ಅಂಬರೀಷ್ ಅವರಿಗೆ 2 ವರ್ಷ ಹಾಗೂ ಶಂಕರ್‌ ನಾಗ್ ಅವರು ಆಗ ಕೇವಲ 6 ತಿಂಗಳ ಮಗು. ಅನಂತ್‌ ನಾಗ್ ಅವರಿಗೂ ಆಗ 6 ವರ್ಷ ಅಷ್ಟೇ ಆಗಿತ್ತು. ಹೀಗಾಗಿ ಅವರೆಲ್ಲರೂ ಡಾ ರಾಜ್‌ಕುಮಾರ್ ಅವರ ಸಮಕಾಲೀನರಲ್ಲ, ಬದಲಿಗೆ ತುಂಬಾ ಕಿರಿಯರು. ಅವರನ್ನು ಜೂನಿಯರ್ಸ್ ಅಂತ ಕರೆದು ಡಾ ರಾಜ್‌ಕುಮಾರ್ ಅವರನ್ನು ಸೀನಿಯರ್ ನಟರೆಂದು ಕರೆಯುವದೇ ಸರಿ. ಆದರೆ, ಅವರೆಲ್ಲರ ಮಧ್ಯೆ ಅಭಿಮಾನಿಗಳು ಹೋಲಿಕೆ ಮಾಡಿ ಒಂದೇ ಕಾಲದ ನಟರೆಂಬ ಹಣೆಪಟ್ಟಿಯಲ್ಲಿ ನೋಡುತ್ತಾರೆ.

ಸಮಕಾಲೀನರು ಎಂದು ಬಿಂಬಿಸುವುದು ತಪ್ಪು!

ನಿಜವಾಗಿ ಹೇಳಬೇಕು ಎಂದರೆ, ಡಾ ರಾಜ್‌ಕುಮಾರ್ ಅವರು ನಾಟಕರಂಗದ (ವೃತ್ತಿ ರಂಗಭೂಮಿ) ಮೂಲಕ ಕಲಾವಿದರಾಗಿ ಬಳಿಕ ಸಿನಿಮಾರಂಗಕ್ಕೆ ಬಂದವರು. ಆದರೆ ಉಳಿದವರೆಲ್ಲರೂ ನಾಟಕದಲ್ಲಿ ಭಾಗವಹಿಸಿ ಬಂದಿದ್ದವರೇ ಆಗಿದ್ದರೂ ಕೂಡ ಅವರೆಲ್ಲರೂ ಸಿನಿಮಾರಂಗದಲ್ಲೇ ಮಿಂಚಿದವರು. ಈ ಎಲ್ಲಾ ಕಾರಣಗಳಿಂದ ಅವರನ್ನು ಸಮಕಾಲೀನರು ಎಂದು ಬಿಂಬಿಸುವುದು ತಪ್ಪು ಹಾಗೂ ಹೋಲಿಕೆ ಮಾಡಬೇಕಾಗಿಯೇ ಇಲ್ಲ. ಡಾ ರಾಜ್ಕುಮಾರ್ ಕಾಲದ ನಂತರದ ಮೇರನಟರು ಡಾ ವಿಷ್ಣುವರ್ಧನ್, ಅಂಬರೀಷ್, ಅನಂತ್‌ ನಾಗ್ ಹಾಗೂ ಶಂಕರ್‌ ನಾಗ್ ಎನ್ನುವುದು ಸೂಕ್ತ!