ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಕುಮಾರ್ ಶವವಾಗಿ ಪತ್ತೆಯಾಗಿದ್ದು, ಪತ್ನಿ ಮತ್ತು ಬಾಲ್ಯ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಕ್ರಮ ಸಂಬಂಧ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.

ನೆಲಮಂಗಲ (ಆ.12): ನೆಲಮಂಗಲದ ಮಾಚೋಹಳ್ಳಿ ಬಳಿಯ ಡಿಗ್ರೂಪ್ ಲೇಔಟ್‌ನಲ್ಲಿ ರಿಯಲ್ ಎಸ್ಟೇಟ್ ಮತ್ತು ಫೈನಾನ್ಸ್ ವ್ಯವಹಾರದಲ್ಲಿ ತೊಡಗಿದ್ದ 39 ವರ್ಷದ ವಿಜಯ್ ಕುಮಾರ್‌ನ ಶವ ಪತ್ತೆಯಾಗಿದೆ. 30 ವರ್ಷಗಳ ಬಾಲ್ಯ ಸ್ನೇಹಿತ ಧನಂಜಯ ಮತ್ತು ಮೃತ ವಿಜಯ್‌ನ ಪತ್ನಿ ಆಶಾ ಒಟ್ಟಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿದ ಒಂದು ದುರಂತ ಇಲ್ಲಿದೆ.

ವಿಜಯ್ ಕುಮಾರ್, ಮಾಗಡಿಯ ಸುಂಕದಕಟ್ಟೆಯ ನಿವಾಸಿಯಾಗಿದ್ದು, 10 ವರ್ಷಗಳ ಹಿಂದೆ ಆಶಾಳನ್ನು ಮದುವೆಯಾಗಿದ್ದ. ದಂಪತಿಗಳು ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದರು. ವಿಜಯ್‌ಗೆ ಬಾಲ್ಯ ಸ್ನೇಹಿತನಾಗಿದ್ದ ಧನಂಜಯ ಅಲಿಯಾಸ್ ಜಯ. ವಿಜಯನ ಪತ್ನಿ ಪರಿಚಯವಾಗಿದ್ದಳು. ಪರಿಚಯ ಪತ್ನಿ ಆಶಾ ನಡುವಿನ ಅನೈತಿಕ ಸಂಬಂಧದವರೆಗೆ ಬೆಳೆದು ನಿಂತಿತ್ತು. ಪತ್ನಿಯೊಂದಿಗೆ ಬಾಲ್ಯಸ್ನೇಹಿತ ಜಯ ಅನೈತಿಕ ಸಂಬಂಧ ವಿಜಯ್‌ಗೆ ಗೊತ್ತಾಗಿದೆ. ಅಲ್ಲದೇ ಇಬ್ಬರೂ ಒಟ್ಟಿಗಿರುವ ಫೋಟೋಗಳು ಸಿಕ್ಕಿಬಿದ್ದಿದ್ದರಿಂದ ಈ ವಿಷಯದ ಬಗ್ಗೆ ವಿಜಯ್ ಗಲಾಟೆಯನ್ನೂ ಮಾಡಿದ್ದ. ಈ ಕಾರಣಕ್ಕಾಗಿ ಕಾಮಾಕ್ಷಿಪಾಳ್ಯ ಬಿಟ್ಟು ಕಡಬಗೆರೆಯ ಮಾಚೋಹಳ್ಳಿಯಲ್ಲಿ ಬಾಡಿಗೆ ಮನೆಗೆ ತೆರಳಿದ್ದ ವಿಜಯ್. ಆದರೂ ಆಶಾ ಮತ್ತು ಧನಂಜಯನ ಸಂಬಂಧಕ್ಕೆ ಕಡಿವಾಣ ಬಿದ್ದಿರಲಿಲ್ಲ.

ಸಂಜೆ ವೇಳೆ ಮನೆಯಿಂದ ಹೋಗಿದ್ದ ವಿಜಯ್, ಡಿಗ್ರೂಪ್ ಲೇಔಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆಯ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಆಶಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಜಯ್‌ನ ಕೊಲೆಗೆ ಆಶಾ ಮತ್ತು ಧನಂಜಯನ ಒಡನಾಟವೇ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

30 ವರ್ಷಗಳ ಸ್ನೇಹ ಮತ್ತು 10 ವರ್ಷಗಳ ವೈವಾಹಿಕ ಜೀವನವನ್ನು ಒಂದು ಕ್ಷಣದಲ್ಲಿ ಈ ಘಟನೆ ನಾಶಗೊಳಿಸಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ಈ ಪ್ರಕರಣದ ಸಂಪೂರ್ಣ ಸತ್ಯ ಶೀಘ್ರದಲ್ಲೇ ಬಹಿರಂಗವಾಗಲಿದೆ.