ಬೆಂಗಳೂರಿನ ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ ಫ್ಲೈ ಓವರ್, ಅಂಡರ್ಪಾಸ್ ಸೇರಿದಂತೆ ಆಸುಪಾಸು ಸಂಜೆಯಾಗುತ್ತಿದ್ದಂತೆಯೇ ಚಿತ್ರಣವೇ ಬದಲಾಗಿ ಹೋಗುತ್ತದೆ. ಇಲ್ಲಿ ಮಹಿಳೆಯರು ನಡೆಸುವ ದಂಧೆಗೆ ಪುರುಷರು ಹೈರಾಣಿ ಹೋಗಿದ್ದಾರೆ.
ಬೆಂಗಳೂರಿನ ಬಹುತೇಕ ಸ್ಥಳಗಳಲ್ಲಿ ಸಂಜೆಯಾಗುತ್ತಿದ್ದಂತೆಯೇ ಒಂಟಿ ಮಹಿಳೆ ನಿಂತುಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಬಂದು ಬಹಳ ವರ್ಷಗಳೇ ಕಳೆದು ಹೋಗಿವೆ. ಇದಕ್ಕೆ ಕಾರಣ, ಪುರುಷರ ಭಯಕ್ಕಿಂತಲೂ ಹೆಚ್ಚಾಗಿ, ಹೀಗೆ ನಿಂತರೆ ಅವರನ್ನು ಬೇರೆಯದ್ದೇ ಅರ್ಥ ಕಲ್ಪಿಸಿಕೊಳ್ಳಲಾಗುತ್ತದೆ. ಕಚೇರಿ ಮುಗಿಸಿ ಬಸ್ ಸ್ಟ್ಯಾಂಡ್ನಲ್ಲಿ ನಿಲ್ಲುವ ಮಹಿಳೆಯರ ಸ್ಥಿತಿಯಂತೂ ಬೇಡವೇ ಬೇಡ. ಕಾರು, ಆಟೋಗಳಲ್ಲಿ ಬರುವ ಕೆಲವರು ಅಲ್ಲಿಯೇ ವಾಹನ ನಿಲ್ಲಿಸಿ ಬರ್ತಿಯಾ ಎನ್ನುವ ಸನ್ನೆ ಮಾಡುವಷ್ಟರ ಮಟ್ಟಿಗೆ ಭಯದ ವಾತಾವರಣ ಇದೆ. ಯಾರೇ ಮಹಿಳೆ ಒಂಟಿಯಾಗಿ ನಿಂತರೂ ನೋಡಿದವರು ಎಲ್ಲರೂ ಅವರನ್ನು ಅದೇ ರೀತಿ ಕಲ್ಪಿಸಿಕೊಳ್ಳುವುದೇ ಆಗಿಬಿಟ್ಟಿದೆ. ಆ ಪರಿಯಲ್ಲಿ ಈ ದಂಧೆ ಬೆಂಗಳೂರಿನಂಥ ನಗರಗಳಲ್ಲಿ ಸಾಮಾನ್ಯವಾಗಿ ಹೋಗಿದೆ.
ಇನ್ನು ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ ಅದರಲ್ಲಿಯೂ ಫ್ಲೈ ಓವರ್ ಮೇಲೆ ಹೋಗಲು ಪುರುಷರು ಭಯ ಬೀಳುತ್ತಿದ್ದಾರೆ. ಕೆಲವರು ಉದ್ದೇಶಪೂರ್ವಕವಾಗಿ ಇಂಥವರನ್ನು ನೋಡಲು ಹೋಗುವವರಿದ್ದರೆ, ಮತ್ತೆ ಕೆಲವರು ವ್ಯವಹಾರ ಕುದುರಿಸಿಕೊಳ್ಳಲೂ ಹೋಗುತ್ತಾರೆ. ಇವರ ಮಾತು ಬಿಡಿ. ಆದರೆ ಅರಿಯದೇ ಯಾರಾದರೂ ಬಸ್ಗಾಗಿಯೋ ಇಲ್ಲವೇ ರೈಲ್ವೆಗಾಗಿಯೂ ಫ್ಲೈ ಓವರ್ ಹತ್ತಿದರೆ ಅವರ ಕಥೆ ಮುಗಿದೇ ಹೋಯ್ತು. ಒಂದೇ ಸಲಕ್ಕೆ ದಾಳಿ ಇಡುವ ಈ ನಾರಿಮಣಿಗಳು ದುಡ್ಡು ಕಿತ್ತುಕೊಳ್ಳುವುದು, ಕೊಡದಿದ್ದರೆ ಹೊಡೆಯುವುದನ್ನೂ ಮಾಡುತ್ತಾರೆ ಎಂದು ಯುಟ್ಯೂಬರ್ ಒಬ್ಬರಿಗೆ ನೊಂದವರು ಹೇಳುತ್ತಿದ್ದಾರೆ.
ಮಡಿಕೇರಿ ಆಂಟಿಯರ ಸುದ್ದಿಗೆ ಹೋಗಿ ತಗ್ಲಾಕ್ಕೊಂಡ ಭೂಪ! ಹನಿಮೂನ್ಗೆ ಹೋಗಿ ಜೈಲು ಸೇರಿದ...
ಗೋಳು ತೋಡಿಕೊಂಡ ಪುರುಷರು
ನನಗೆ ಹೊಡೆದರು ಅಣ್ಣಾ ಎಂದು ಕೆಲವರು ಹೇಳಿದರೆ, ದುಡ್ಡು ಕಿತ್ತುಕೊಂಡು ಹೋದರು ಎಂದು ಮತ್ತೆ ಕೆಲವರು ಹೇಳುತ್ತಾರೆ. ಇಲ್ಲಿಯ ಸ್ಥಿತಿ ಕಂಡು ಹಲವರು ಮೆಜೆಸ್ಟಿಕ್ ಬಸ್ಸ್ಟ್ಯಾಂಡ್ ಫ್ಲೈ ಓವರ್ ಸಹವಾಸವೇ ಬೇಡ ಎನ್ನುತ್ತಾರೆ. ಆದರೆ ರೈಲು ನಿಲ್ದಾಣ ಮತ್ತು ಬಸ್ ಹತ್ತಲು ಫ್ಲೈ ಓವರ್ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಅಂಡರ್ಪಾಸ್ನಲ್ಲಿ ಹೋಗಬೇಕು. ಅಷ್ಟಕ್ಕೂ ಇಲ್ಲಿಯ ಸ್ಥಿತಿಯೂ ಭಿನ್ನವಾಗಿಲ್ಲ. ಮೇಲೆ ಹೋದರೂ ಅವರ ಕಾಟ, ಕೆಳಗೆ ಬಂದರೂ ಅವರ ಕಾಟ. ಇಲ್ಲಿ ಮಹಿಳೆಯರಿಗೆ ಪುರುಷರು ಹೆದರುವ ಸ್ಥಿತಿ ಇದೆ.
ವಿಕಾಸ್ ಗೌಡ ಎನ್ನುವವರು ಇಲ್ಲಿಯ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಮಹಿಳೆಯೊಬ್ಬರು ಹೊಟ್ಟೆಪಾಡಿಗೆ ಹೀಗೆ ಮಾಡ್ತಿರೋದಾಗಿ ಹೇಳಿದ್ದಾರೆ. ದುಡಿದು ತಿನ್ನುವ ಬದಲು ಹೀಗೆ ಮಾಡೋದು ಸರಿಯಲ್ಲ ಎನ್ನುವ ಬುದ್ಧಿಮಾತು ಅವರ ತಲೆಗೆ ಎಲ್ಲಿ ಹೋಗತ್ತೆ ಹೇಳಿ. ಅವರ ಹಿಂದೆ ರೌಡಿಗಳ ಗ್ಯಾಂಗ್ ಕೂಡ ಇರುತ್ತದೆ. ಈ ಮಹಿಳೆಯರ ವಿಷಯಕ್ಕೆ ಬಂದರೆ, ಆ ಗ್ಯಾಂಗ್ಗಳು ದಾಳಿ ಮಾಡುವ ಘಟನೆಗಳೂ ನಡೆಯುತ್ತಿವೆ. ಹಲವರು ತಮ್ಮ ಸಮಸ್ಯೆ ಇಲ್ಲಿ ಹೇಳಿಕೊಂಡಿದ್ದಾರೆ. ಆದರೆ ಪೊಲೀಸರು ಮಾತ್ರ ಮೌನವಾಗಿರುವುದಕ್ಕೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಕೂಡ ಬರುತ್ತಿವೆ. ಈ ವಿಡಿಯೋ ಮಾಡುತ್ತಿದ್ದಂತೆಯೇ ಕೆಲವು ಮಹಿಳೆಯರು ಕಾಲ್ಕಿತ್ತಿದ್ದಾರೆ.
ಗಿಳಿಯಿಂದ ಬಯಲಾಯ್ತು ಅಕ್ರಮ ಸಂಬಂಧದ ಗುಟ್ಟು: ಪತಿಗೆ ಕೋರ್ಟ್ ಕೊಟ್ಟಿತು ಶಿಕ್ಷೆ!
