Food delivery boy assaulted incident in Bengaluru, ಬೆಂಗಳೂರಿನಲ್ಲಿ ಫುಡ್ ಡೆಲಿವರಿ ತಡವಾಗಿದ್ದಕ್ಕೆ ಜೊಮೊಟೋ ಡೆಲಿವರಿ ಬಾಯ್ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು(ಸೆ.20): ಫುಡ್ ಡೆಲಿವರಿ ಕೊಡೋದು ತಡವಾಯ್ತು ಎಂದು ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪಿಗಳನ್ನ ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಮುಬಾರಕ್ ಮತ್ತು ಆದಿಲ್ ಹುಸೇನ್ ಬಂಧಿತ ಆರೋಪಿಗಳು. ಆರೋಪಿಗಳು ಜೊಮೊಟೋದ ಮೂಲಕ ಫುಡ್ ಆರ್ಡರ್ ಮಾಡಿದ್ದರು.
ಫುಡ್ ಡೆಲಿವರಿ ತಡವಾಗಿದ್ದ ಹಲ್ಲೆ:
ಬೆಂಗಳೂರಿನ ಶಾಮಣ್ಣ ಗಾರ್ಡನ್‌ನಲ್ಲಿ ಕಳೆದ ಭಾನುವಾರ ರಾತ್ರಿ ಘಟನೆ ನಡೆದಿತ್ತು. ಮುಬಾರಕ್ ರಾತ್ರಿ 7 ಗಂಟೆಗೆ ಫುಡ್ ಆರ್ಡರ್ ಮಾಡಿದ್ದರು. ಆದರೆ ಆದರೆ, ಚಾಂದ್ ಪಟೇಲ್ ರಾತ್ರಿ 8 ಗಂಟೆಗೆ ಆಹಾರವನ್ನು ತಲುಪಿಸಿದಾಗ, ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಮುಬಾರಕ್ ಮತ್ತು ಆದಿಲ್, ಚಾಂದ್‌ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ, ಖಾಲಿ ಕ್ಯಾನ್ ಮತ್ತು ಪ್ಲಾಸ್ಟಿಕ್ ಚೇರ್‌ನಿಂದ ಚಾಂದ್‌ಗೆ ಆರೋಪಿಗಳಿಬ್ಬರೂ ಗಂಭೀರವಾಗಿ ಹಲ್ಲೆ ನಡೆಸಿದ್ದರು.
ಈ ದಾಳಿಯಿಂದ ಗಾಯಗೊಂಡ ಚಾಂದ್ ಪಟೇಲ್, ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಮುಬಾರಕ್ ಮತ್ತು ಆದಿಲ್ ಹುಸೇನ್‌ನನ್ನು ಬಂಧಿಸಿ ಕ್ರಮ ಜರುಗಿಸಿದ್ದಾರೆ.
ಈ ಘಟನೆಯಿಂದ ಫುಡ್ ಡೆಲಿವರಿ ಕಾರ್ಮಿಕರ ಸುರಕ್ಷತೆ ಕುರಿತಂತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
