ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಟದ ವಿಷ್ಯಕ್ಕೆ ಮಾತ್ರವಲ್ಲ ವೈಯಕ್ತಿಕ ವಿಚಾರಕ್ಕೂ ಸುದ್ದಿಯಲ್ಲಿರ್ತಾರೆ. ಅವರು ಅಪ್ಪ – ಅಮ್ಮನ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ. ಅವರಿಬ್ಬರಿಗೆ ಡಿವೋರ್ಸ್ ಸಲಹೆ ನೀಡಿದ್ದೇ ನಾನು ಎಂದಿದ್ದಾರೆ.
ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ (Yuvraj Singh), ಮೈದಾನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ನಿರ್ಭೀತರು. 2011 ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್, ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯ ಮತ್ತು ಕೌಟುಂಬಿಕ ಹೋರಾಟಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಯುವರಾಜ್ ಸಿಂಗ್ ಹಾಗೂ ಅವರ ತಂದೆ ಯೋಗರಾಜ್ ಸಿಂಗ್ ಮಧ್ಯೆ ವಿವಾದವಿದೆ. ಆಗಾಗ ಇದು ಚರ್ಚೆಗೆ ಬರ್ತಿರುತ್ತೆ. ಸಂದರ್ಶನದಲ್ಲಿ ಈ ವಿಷ್ಯವನ್ನು ಎಲ್ಲರ ಮುಂದಿಟ್ಟ ಯುವರಾಜ್ ಸಿಂಗ್, ಹೆತ್ತವರ ವಿಚ್ಛೇದನಕ್ಕೆ ಸಲಹೆ ನೀಡಿದ್ದು ನಾನೇ ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ.
ಅಪ್ಪ – ಅಮ್ಮನಿಗೆ ವಿಚ್ಛೇದನದ ಸಲಹೆ ನೀಡಿದ್ದರು ಯುವರಾಜ್ ಸಿಂಗ್ :
ಯುವರಾಜ್ ಸಿಂಗ್, ಚಂಡೀಗಢದಲ್ಲಿ ಜನಿಸಿದ್ದರು. ಅವರ ತಂದೆ ಯೋಗರಾಜ್ ಸಿಂಗ್ ಕ್ರಿಕೆಟ್ ಆಟಗಾರ. ಹಾಗೆಯೇ ಕಲಾವಿದ. ಅವರು ಹಿಂದಿ ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದರು. ತಮ್ಮ ಕನಸನ್ನು ಮಗ ನನಸು ಮಾಡ್ಬೇಕು ಎನ್ನುವ ಆಸೆ ಹೊಂದಿದ್ದರು. ಇಂಡಿಯಾ ಟೀಂನಲ್ಲಿ ಮಗ ಆಡಬೇಕು ಎನ್ನುವ ಆಸೆ ಹೊಂದಿದ್ದರು. ಆದ್ರೆ ಅತ್ಯಂತ ಶಿಸ್ತುಬದ್ಧ ಮತ್ತು ಹಠಮಾರಿ ವ್ಯಕ್ತಿ. ಯುವರಾಜ್ ಸಿಂಗ್, ಬಾಲ್ಯದಲ್ಲಿ, ತಂದೆಯ ಕೋಪ ಮತ್ತು ಕಠಿಣ ತರಬೇತಿಯಿಂದಾಗಿ ಸದಾ ಒತ್ತಡದಲ್ಲಿರುತ್ತಿದ್ದರು. ಇಷ್ಟೇ ಅಲ್ಲ, ಯುವರಾಜ್ ಸಿಂಗ್ ಬಾಲ್ಯದಲ್ಲಿ ಮನೆಯಲ್ಲಿ ಸಂತೋಷ ನೋಡಿದ್ದಕ್ಕಿಂತ ಗಲಾಟೆ ನೋಡಿದ್ದೇ ಹೆಚ್ಚು. ಮನೆಯಲ್ಲಿ ಸದಾ ಜಗಳ, ವಾದ – ವಿವಾದ ನಡೆಯುತ್ತಿತ್ತು. ಮನೆಯಲ್ಲಿ ಶಾಂತಿ ಇರಲಿಲ್ಲ. ಅಪ್ಪ – ಅಮ್ಮನ ಜಗಳನ್ನು ನೋಡಿ ಬೇಸತ್ತಿದ್ದ ಯುವರಾಜ್ ಸಿಂಗ್ ತಮ್ಮ 14 - 15 ವರ್ಷನೇ ವಯಸ್ಸಿನಲ್ಲಿ, ಅಪ್ಪ – ಅಮ್ಮನಿಗೆ ಬೇರೆಯಾಗುವ ಸಲಹೆ ನೀಡಿದ್ದರು. ನಿಮ್ಮಿಬ್ಬರ ಮಧ್ಯೆ ಸಂತೋಷ ಉಳಿದಿಲ್ಲ ಎಂದಾದ್ರೆ ವಿಚ್ಛೇದನ ಪಡೆಯುವುದು ಸೂಕ್ತ ಎಂದಿದ್ದರಂತೆ.
ಕೆಕೆಆರ್ ತಂಡಕ್ಕೆ ನೂತನ ಕೋಚ್ ನೇಮಕ; ಕೋಚ್ ಮೂಲಕ ರೋಹಿತ್ ಶರ್ಮಾಗೆ ಗಾಳ ಹಾಕುತ್ತಾ ಫ್ರಾಂಚೈಸಿ?
ನಾನು ಕ್ರಿಕೆಟ್ ನಲ್ಲಿ ಮಗ್ನವಾಗಿದ್ದೆ. ಆದ್ರೆ ಮನೆಗೆ ಬಂದಾಗ ಜಗಳ ಒತ್ತಡವನ್ನು ಹೆಚ್ಚು ಮಾಡ್ತಿತ್ತು. ಇದಕ್ಕೆ ಸೂಕ್ತ ದಾರಿಕಂಡುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೆ. ಅಪ್ಪ – ಅಮ್ಮ ಜಗಳವಾಡುತ್ತಲೇ ಇದ್ದರೆ ಅದು ಅವರಿಗೂ ಒಳ್ಳೆಯದಲ್ಲ, ನನಗೂ ಒಳ್ಳೆಯದಲ್ಲ ಎಂದು ನಾನು ಭಾವಿಸಿದ್ದೆ. ಅದಕ್ಕಾಗಿಯೇ ನಾನು ಅವರಿಗೆ ಬೇರೆಯಾಗಲು ಸಲಹೆ ನೀಡಿದ್ದೆ ಎಂದು ಯುವರಾಜ್ ಹೇಳಿದ್ದಾರೆ. ಆದ್ರೆ ಕ್ರಿಕೆಟ್ ಕನಸು ಬಿತ್ತಿದ್ದು ಅವರೇ ಎಂದು ಯುವರಾಜ್ ಒಪ್ಪಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಮಹಿಳಾ ವಿಶ್ವಕಪ್ ಸೆಮೀಸ್‌ನಲ್ಲಿ ಕಪ್ಪು ಪಟ್ಟಿ ತೊಟ್ಟು ಮೈದಾನಕ್ಕಿಳಿದ ಭಾರತ-ಆಸೀಸ್!
ಅಮ್ಮನ ಮೇಲೆ ಅಪಾರ ಪ್ರೀತಿ :
ಅಪ್ಪನ ಕಠಿಣತೆ ಯುವರಾಜ್ ಸಿಂಗ್ ಅವರಿಗೆ ಕಷ್ಟವಾಗ್ತಾ ಬಂತು. ದಿನ ಕಳೆದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಪಾಲಕರು ವಿಚ್ಛೇದನ ಪಡೆದು ದೂರ ಆಗ್ತಿದ್ದಂತೆ ಯುವರಾಜ್ ಸಿಂಗ್ ಅಮ್ಮನ ಜೊತೆ ನಡೆದ್ರು. ತಾಯಿ ಶಬ್ನಮ್ ಸಿಂಗ್ ಅವರ ತ್ಯಾಗಕ್ಕೆ ಯುವರಾಜ್ ಸದಾ ಋಣಿ. ನನ್ನ ಜೀವನದ ನಿಜವಾದ ನಾಯಕ ಅಮ್ಮ ಎಂದು ಯುವರಾಜ್ ಬಣ್ಣಿಸಿದ್ದಾರೆ. ನಾನು ಇಂದು ಈ ಹಂತಕ್ಕೆ ತಲುಪಲು ಕಾರಣ ನನ್ನ ತಾಯಿ, ಅವರು ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು ಎಂದು ಯುವರಾಜ್ ಹೇಳಿದ್ದಾರೆ. ಯುವರಾಜ್ ಸಿಂಗ್ 17 ನೇ ವಯಸ್ಸಿನಲ್ಲಿ ತಮ್ಮ ತಾಯಿ ಜೊತೆ ವಾಸ ಶುರು ಮಾಡಿದ್ದರು. ಯೋಗರಾಜ್ ಸಿಂಗ್ ಮರುಮದುವೆಯಾಗಿ ಇಬ್ಬರು ಮಕ್ಕಳ ತಂದೆಯಾದ್ರು. ಯುವರಾಜ್ 2016ರಲ್ಲಿ ಹ್ಯಾಝೆಲ್ ಕೀಚ್ ಅವರನ್ನು ಮದುವೆಯಾಗಿದ್ದು, ಇಬ್ಬರು ಮುದ್ದಾದ ಮಕ್ಕಳಿಗೆ ಪಾಲಕರಾಗಿದ್ದಾರೆ. ಬಾಲ್ಯದಲ್ಲಿ ತಮಗೆ ಸಿಗದ ಸೌಲಭ್ಯಗಳನ್ನು, ಪ್ರೀತಿಯನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.
