Rohit sharma : ಮೈದಾನದಲ್ಲಿ ಗೆದ್ದು ಬೀಗುವ ರೋಹಿತ್ ಶರ್ಮಾ ಮನೆಯಲ್ಲಿ ಮಗಳ ಮುಂದೆ ಸೋತಿದ್ದಾರೆ. ಮಗಳ ಜೊತೆ ಫನ್ನಿ ಗೇಮ್ ಆಡ್ತಿದ್ದ ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ (Team India hitman Rohit Sharma) ಮೈದಾನದಲ್ಲಿ ಅಬ್ಬರಿಸ್ತಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ್ರೆ ಬೌಲರ್ ಬೆವರಿಳಿಯುತ್ತೆ. ಆದ್ರೆ ಒಳಾಂಗಣ ಕ್ರೀಡಾಂಗಣದಲ್ಲಿ, ಬರೀ ಇಬ್ಬರೇ ಆಟಗಾರರಿರುವಾಗ ರೋಹಿತ್ ಶರ್ಮಾ ಗೇಮ್ ಸೋತು ಕೈಚೆಲ್ಲಿದ್ದಾರೆ. ಅದೂ ಅನುಭವಿ ಆಟಗಾರರ ಮುಂದಲ್ಲ, ತಮ್ಮ ಮಗಳು ಸಮೈರಾ ಮುಂದೆ. ಟೀಂ ಇಂಡಿಯಾ ಏಕದಿನ ಪಂದ್ಯದ ನಾಯಕ ರೋಹಿತ್ ಶರ್ಮಾ, ಸದ್ಯ ಕ್ರಿಕೆಟ್ ನಿಂದ ದೂರವಿದ್ದು, ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಮಗಳ ಜೊತೆ ಆಟವಾಡಿದ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಗಳ ಮುಂದೆ ಸೋತ ರೋಹಿತ್ ಶರ್ಮಾ : ಇನ್ಸ್ಟಾಗ್ರಾಮ್ ನಲ್ಲಿ ರೋಹಿತ್ ಶರ್ಮಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ರೋಹಿತ್ ಹಾಗೂ ಅವರ ಮಗಳು ಸಮೈರಾ, ಡೋಂಟ್ ಸ್ಪಿಲ್ ದಿ ವಾಟರ್ ಗೇಮ್ ಆಡ್ತಿದ್ದಾರೆ. ಈ ಆಟದಲ್ಲಿ ನೀರನ್ನು ಹೊರಗೆ ಚೆಲ್ಲದೆ ಗ್ಲಾಸ್ ನಲ್ಲಿ ನೀರನ್ನು ತುಂಬಿಸಬೇಕು. ಆರಂಭದಲ್ಲಿ ಬಹಳ ವಿಶ್ವಾಸದಿಂದ ಆಟ ಆಡುವ ರೋಹಿತ್ ಶರ್ಮಾಗೆ ಮಗಳು ಸಮೈರಾ ಟಕ್ಕರ್ ನೀಡ್ತಾರೆ. ಅತ್ಯಂತ ಎಚ್ಚರಿಕೆಯಿಂದ ಆಟ ಮುಂದುವರೆಸುವ ಸಮೈರಾ, ನೀರನ್ನು ಕೆಳಗೆ ಚೆಲ್ಲೋದಿಲ್ಲ. ಇನ್ನೇನು ಸಮೈರಾ ಹಾಕಿದ ನೀರು ಗ್ಲಾಸಿನಿಂದ ಹೊರಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದ ರೋಹಿತ್, ಸಮೈರಾ ಜಾಣತನವನ್ನು ಮೆಚ್ಚಿಕೊಳ್ತಾರೆ. ಆದ್ರೆ ರೋಹಿತ್ ಅಂತಿಮವಾಗಿ ಸೋಲು ಕಾಣ್ತಾರೆ. ಸಮೈರಾ ವಿನ್ನರ್ ಆಗ್ತಿದ್ದಂತೆ ಸೋತ ರೋಹಿತ್ ಮುಖ ಮುಚ್ಚಿಕೊಳ್ತಾರೆ.
ಸತತ 5 ಸಿಕ್ಸರ್ ಚಚ್ಚಿದ ಲಂಕಾ ಸ್ಪಿನ್ನರ್ ತಂದೆಯ ಸಾವಿನ ಸುದ್ದಿ ಕೇಳಿ ಶಾಕ್ ಆದ ನಬಿ! ವಿಡಿಯೋ ವೈರಲ್
ರೋಹಿತ್ ವಿಡಿಯೋ ಮೆಚ್ಚಿನ ಫ್ಯಾನ್ಸ್ : ಇನ್ಸ್ಟಾಗ್ರಾಮ್ ನಲ್ಲಿ ರೋಹಿತ್ ಶರ್ಮಾ, ಇದು ಕಾಣಿಸುವದಕ್ಕಿಂತ ಕಠಿಣವಾಗಿದೆ ಎನ್ನುವ ಶೀರ್ಷಿಕೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅವರ ವಿಡಿಯೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಮೈದಾನದಲ್ಲಿ ಏನೇ ಆಟ ಆಡ್ಲಿ, ಮಗಳ ಜೊತೆ ಸೋಲಲೇಬೇಕು ಅಂತ ಕಮೆಂಟ್ ಮಾಡಿದ್ದಾರೆ.
ಹಿಂದಿ ಮಾತನಾಡಲು ಸಲಹೆ : ರೋಹಿತ್ ಶರ್ಮಾ, ಸಮೈರಾ ಹಾಗೂ ವಿಡಿಯೋ ಮಾಡಿರುವ ರಿತಿಕಾ ಸಜ್ ದೇವ್ ಸಂಪೂರ್ಣವಾಗಿ ಇಂಗ್ಲೀಷ್ ನಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿದ ಹಿಂದಿ ಪ್ರೇಮಿಗಳಿಗೆ ಸ್ವಲ್ಪ ಬೇಸರವಾಗಿದೆ. ಮನೆಯಲ್ಲಾದ್ರೂ ಹಿಂದಿ ಮಾತನಾಡಿ, ಮಕ್ಕಳಿಗೆ ಹಿಂದಿ ಕಲಿಸಿ ಅಂತ ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿಗಳೆಲ್ಲ ಮಾತೃ ಭಾಷೆ ಬಿಟ್ಟು ಇಂಗ್ಲೀಷ್ ನಲ್ಲಿ ಮಾತನಾಡೋದು ಏಕೆ ಅಂತ ಪ್ರಶ್ನೆ ಮಾಡಿದ್ದಾರೆ.
ಮಗ ಒಂದೇ ಓವರ್‌ನಲ್ಲಿ 5 ಸಿಕ್ಸರ್ ಚಚ್ಚಿಸಿಕೊಂಡ ಬೆನ್ನಲ್ಲೇ ಪ್ರಾಣಬಿಟ್ಟ ತಂದೆ! ಏಷ್ಯಾಕಪ್ ಟೂರ್ನಿಯಲ್ಲಿ ದುರಂತ
ಸದ್ಯ ಏನು ಮಾಡ್ತಿದ್ದಾರೆ ರೋಹಿತ್ ಶರ್ಮಾ? : ಏಕದಿನ ಪಂದ್ಯದ ನಾಯಕ ರೋಹಿತ್ ಶರ್ಮಾ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಐಪಿಎಲ್ 2025 ಅರ್ಹತಾ ಪಂದ್ಯಗಳ ನಂತರ ಅವರು ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಟೆಸ್ಟ್ ಮತ್ತು ಟಿ 20 ಕ್ರಿಕೆಟ್ನಿಂದ ನಿವೃತ್ತರಾದ ರೋಹಿತ್ ಈಗ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಮಾರ್ಚ್ 2025 ರಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನಂತ್ರ ಅವರು ಭಾರತ ಪರ ಆಡಿಲ್ಲ. ಇಂಗ್ಲೆಂಡ್ ಪ್ರವಾಸಕ್ಕಾಗಿ ಅವರು ಟೆಸ್ಟ್ ತಂಡದ ಭಾಗವಾಗಬೇಕಿತ್ತು. ಆದ್ರೆ ತಂಡ ಘೋಷಣೆಗೆ ಸ್ವಲ್ಪ ಮೊದಲು ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ರು. ರೋಹಿತ್ ಈಗ ಆಸ್ಟ್ರೇಲಿಯಾ ಪ್ರವಾಸಕ್ಕೆ ತಯಾರಿ ನಡೆಸುತ್ತಿದ್ದಾರೆ. ಅಕ್ಟೋಬರ್ 19 ರಿಂದ ಪ್ರಾರಂಭವಾಗುವ ಈ ಪ್ರವಾಸದಲ್ಲಿ ಭಾರತ ಮೂರು ಏಕದಿನ ಮತ್ತು ಐದು ಟಿ 20 ಐಗಳನ್ನು ಆಡಲಿದೆ.
