ಪಾಕಿಸ್ತಾನಕ್ಕೆ ಮಾಸಿಲ್ಲ ಭಾರತ ವಿರುದ್ದದ ಸತತ ಸೋಲಿನ ನೋವು, ನಾಯಕ ಸಲ್ಮಾನ್‌ಗೆ ಕೊಕ್ ಸಾಧ್ಯತೆ, ಏಷ್ಯಾಕಪ್ ಟೂರ್ನಿಯಲ್ಲ 15 ದಿನಗಳ ಅಂತರದಲ್ಲಿ ಸತತ ಸೋಲು ಕಂಡು ಮುಖಭಂಗ ಅನುಭವಿಸಿದ್ದೇ ಇದಕ್ಕೆ ಕಾರಣ.

ಇಸ್ಲಾಮಾಬಾದ್ (ಅ.16) ಏಷ್ಯಾಕಪ್ ಟೂರ್ನಿ ಚಾಂಪಿಯನ್ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುತ್ತಿದ್ದರೆ, ಏಕದಿನ ತಂಡ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ಸಜ್ಜಾಗಿದೆ. ಇತ್ತ ಭಾರತ ವಿರುದ್ ಏಷ್ಯಾಕಪ್ ಟೂರ್ನಿಯಲ್ಲಿ ಸತತ ಸೋಲು ಕಂಡು ಮುಖಭಂಗ ಅನುಭವಿಸಿರುವ ಪಾಕಿಸ್ತಾನದ ನೋವು ಇನ್ನು ಮಾಸಿಲ್ಲ. ಆಪರೇಶನ್ ಸಿಂದೂರ್ ಬಳಿಕ ಭಾರತ ಎಲ್ಲಾ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಕಡೆಗಣಿಸಿತ್ತು. ಏಷ್ಯಾಕಪ್ ಟೂರ್ನಿಯಲ್ಲಿ ಹ್ಯಾಂಡ್ ಶೇಕ್ ಇಲ್ಲದೆ ಮತ್ತೆ ಮುಖಭಂಗ ಮಾಡಿತ್ತು. ಇದರ ನಡುವೆ ಮೂರು ಬಾರಿ ಸೋಲು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಪಾಕಿಸ್ತಾನ ಟಿ20 ನಾಯಕ ಸಲ್ಮಾನ್ ಆಘಾಗೆ ಕೊಕ್ ನೀಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಾಗಿದೆ.

ನಾಯಕತ್ವದಿಂದ ಸಲ್ಮಾನ್ ಆಘಾಗೆ ಕೊಕ್ ಸಾಧ್ಯತೆ

ವರದಿಗಳ ಪ್ರಕಾರ ಪಾಕಿಸ್ತಾನ ಟಿ20 ನಾಯಕತ್ವದಿಂದ ಸಲ್ಮಾನ್ ಆಘಾಗೆ ಕೊಕ್ ನೀಡುವ ಸಾಧ್ಯತೆ ದಟ್ಟವಾಗಿದೆ. 15 ದಿನಗಳ ಅಂತರದಲ್ಲಿ ಭಾರತ ವಿರುದ್ದ ಸತತ ಸೋಲು ಕಂಡಿರುವುದೇ ಇದಕ್ಕೆ ಕಾರಣ. ಟೀಂ ಇಂಡಿಯಾ ಮೈದಾನದಲ್ಲಿ ಪಾಕಿಸ್ತಾನ ತಂಡವನ್ನು ಭಾರಿ ಅವಮಾನ ಮಾಡಿತ್ತು. ಇದರ ಜೊತೆಗೆ ಸೋಲು ಪಾಕಿಸ್ತಾನವನ್ನು ಕಂಗಾಲು ಮಾಡಿದೆ. ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರಿಂದ ಪಾರಾಗಾಲು ಇದೀಗ ಸಲ್ಮಾನ್ ಆಘಾಗೆ ಕೊಕ್ ನೀಡಲು ಮುಂದಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಮೂರು ಭಾರಿ ಸೋತ ಪಾಕಿಸ್ತಾನ

ಏಷ್ಯಾಕಪ್ 2025ರ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಮೂರು ಬಾರಿ ಸೋಲು ಕಂಡಿತ್ತು. ಮೊದಲು ಲೀಗ್ ಹಂತದಲ್ಲಿ ಮುಖಾಮುಖಿಯಾಗಿದ್ದರೆ ಬಳಿಕ ಸೂಪರ್ ಫೋರ್ ಹಾಗೂ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಮೂರು ಭಾರಿ ಪಾಕಿಸ್ತಾನ ತಂಡವನ್ನು ಹೀನಾಯವಾಗಿ ಸೋಲಿಸಿತ್ತು. ಇದು ಪಾಕಿಸ್ತಾನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿತ್ತು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಆರಂಭದಲ್ಲಿ ಅಬ್ಬರಿಸಿದರೂ ಬಳಿಕ ಭಾರತ ಮೇಲುಗೈ ಸಾಧಿಸಿತ್ತು. ಇಷ್ಟೇ ಅಲ್ಲ ಭರ್ಜರಿ ಗೆಲುವು ದಾಖಲಿಸಿತ್ತು.

2026ರ ವಿಶ್ವಕಪ್‌ಗೆ ಪ್ಲಾನ್

ಪಾಕಿಸ್ತಾನ ತಂಡ 2026ರ ವಿಶ್ವಕಪ್ ಟೂರ್ನಿಗೆ ಈಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. 2026ರ ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸಿದೆ. ಹೀಗಾಗಿ ಈಗಿನಿಂದಲೇ ತಂಡ ಕಟ್ಟಲು ಪಾಕಿಸ್ತಾನ ಪ್ಲಾನ್ ಮಾಡಿದೆ. ಶದಬ್ ಖಾನ್‌ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ.