ಹಾರ್ದಿಕ್ ಮೊದಲ ಎಸೆತ ವೈಡ್ ಆಗಿತ್ತು. ಆದರೆ ನಿಯಮಬದ್ಧವಾಗಿ ಎಸೆದ ಮೊದಲ ಎಸೆತದಲ್ಲೇ ಪಾಕ್ ಆರಂಭಿಕ ಆಟಗಾರ ಸಯೀಮ್ ಅಯೂಬ್‌ರನ್ನು ಔಟ್ ಮಾಡಿದರು. ಈ ಮೂಲಕ ಹಾರ್ದಿಕ್ ಪಾಂಡ್ಯ ಪಾಕ್ ವಿರುದ್ಧವೇ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.
ದುಬೈ (ಸೆ.14): ಏಷ್ಯಾ ಕಪ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಪರೂಪದ ಸಾಧನೆ ಮಾಡಿದ ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಟಿ20 ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನಕ್ಕೆ ಆಘಾತ ನೀಡುವಂತೆ ಹಾರ್ದಿಕ್ ಆರಂಭಿಸಿದರು.
ಹಾರ್ದಿಕ್ ಮೊದಲ ಎಸೆತ ವೈಡ್ ಆಗಿತ್ತು. ಆದರೆ ನಿಯಮಬದ್ಧವಾಗಿ ಎಸೆದ ಮೊದಲ ಎಸೆತದಲ್ಲೇ ಪಾಕ್ ಆರಂಭಿಕ ಆಟಗಾರ ಸಯೀಮ್ ಅಯೂಬ್‌ರನ್ನು ಔಟ್ ಮಾಡಿದರು. ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ, ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಸೋಲಿನ ಬಗ್ಗೆ ಅಯೂಬ್‌ರನ್ನು ಪತ್ರಕರ್ತರು ಪ್ರಶ್ನಿಸಿದ್ದರು. ಅದನ್ನು ತನಗೆ ನೆನಪಿಲ್ಲ ಎಂದು ಅಯೂಬ್ ಉತ್ತರಿಸಿದ್ದರು. ಆದರೆ ಭಾರತದ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕ್ ಆದ ನಂತರ ಈ ಪಂದ್ಯವನ್ನು ಅಯೂಬ್ ಖಂಡಿತವಾಗಿಯೂ ನೆನಪಿಟ್ಟುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಅರ್ಷದೀಪ್ ಸಿಂಗ್ ಮೊದಲ ಆಟಗಾರ:
ಕಳೆದ ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ವಿರುದ್ಧ ಅರ್ಷದೀಪ್ ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದರು. ಅಮೆರಿಕದ ಶಾಯನ್ ಜಹಾಂಗೀರ್ ಅವರನ್ನು ಔಟ್ ಮಾಡುವ ಮೂಲಕ ಅರ್ಷದೀಪ್ ಈ ಸಾಧನೆ ಮಾಡಿದ್ದರು.
ದುಬೈನಲ್ಲಿ ಸಯೀಮ್ ಅಯೂಬ್‌ರನ್ನು ಔಟ್ ಮಾಡುವ ಮೂಲಕ ಹಾರ್ದಿಕ್ ಆ ಸಾಧನೆಯನ್ನು ಪುನರಾವರ್ತಿಸಿದರು. ಸಯೀಮ್ ಅಯೂಬ್ ಅವರನ್ನು ಔಟ್ ಮಾಡಿದ ನಂತರ, ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಹಾರ್ದಿಕ್ ವಿಕೆಟ್‌ಗಳ ಸಂಖ್ಯೆ 14ಕ್ಕೆ ಏರಿತು. ಮೊದಲ ಓವರ್‌ನಲ್ಲಿ ಅಯೂಬ್ ವಿಕೆಟ್ ನಷ್ಟದೊಂದಿಗೆ ಐದು ರನ್ ಗಳಿಸಿದ ಪಾಕಿಸ್ತಾನಕ್ಕೆ ಜಸ್ಪ್ರೀತ್ ಬುಮ್ರಾ ಎಸೆದ ಎರಡನೇ ಓವರ್‌ನಲ್ಲಿಯೂ ಹಿನ್ನಡೆಯಾಯಿತು. ತಮ್ಮ ಎರಡನೇ ಎಸೆತದಲ್ಲೇ ಮೊಹಮ್ಮದ್ ಹ್ಯಾರಿಸ್ ಅವರನ್ನು ಹಾರ್ದಿಕ್ ಕೈಗೆ ಕ್ಯಾಚ್ ನೀಡುವಂತೆ ಮಾಡುವ ಮೂಲಕ ಬುಮ್ರಾ ಪಾಕಿಸ್ತಾನಕ್ಕೆ ಎರಡನೇ ಹೊಡೆತ ನೀಡಿದರು.
ಇದಕ್ಕೂ ಮುನ್ನ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯವನ್ನು ಆಡಿದ ತಂಡದಲ್ಲಿ ಯಾವುದೇ ಬದಲಾವಣೆಗಳಿಲ್ಲದೆ ಭಾರತ ಮತ್ತು ಪಾಕಿಸ್ತಾನ ತಮ್ಮ ಹೆಮ್ಮೆಯ ಪಂದ್ಯಕ್ಕೆ ಇಳಿದವು.
