ರೋಹಿತ್ ಶರ್ಮಾ ನಂತರ ಏಕದಿನ ತಂಡದ ನಾಯಕತ್ವ ಶ್ರೇಯಸ್ ಅಯ್ಯರ್‌ಗೆ ಸಿಗುತ್ತೆ ಅನ್ನೋದನ್ನ ಆಕಾಶ್ ಚೋಪ್ರಾ ತಳ್ಳಿಹಾಕಿದ್ದಾರೆ. ಶುಭ್‌ಮನ್ ಗಿಲ್ ನಾಯಕರಾಗೋದು ಖಚಿತ ಅಂತ ಹೇಳಿದ್ದಾರೆ.
ದೆಹಲಿ: ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾ ಬಿಟ್ಟ ನಂತರ ಶ್ರೇಯಸ್ ಅಯ್ಯರ್ ಅವರಿಗೆ ಸಿಗುತ್ತೆ ಅನ್ನೋ ಸುದ್ದಿಗಳನ್ನ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಳ್ಳಿಹಾಕಿದ್ದಾರೆ. ರೋಹಿತ್ ನಂತರ ಶುಭ್‌ಮನ್ ಗಿಲ್ ನಾಯಕರಾಗೋದು ಖಚಿತ ಅಂತ ಹೇಳಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಅಗತ್ಯನೂ ಇಲ್ಲ ಅಂತಲೂ ಹೇಳಿದ್ದಾರೆ. ರೋಹಿತ್ ಶರ್ಮಾ ನಂತರ ನಾಯಕ ಯಾರು ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಶ್ರೇಯಸ್ ಅಯ್ಯರ್ ಹೆಸರೂ ಕೇಳಿಬರ್ತಿತ್ತು. ಆದ್ರೆ ಶುಭ್‌ಮನ್ ಗಿಲ್ ಈಗಾಗಲೇ ನಾಯಕರಾಗೋಕೆ ರೆಡಿ ಇದ್ದಾರೆ. ಅಧಿಕೃತ ಘೋಷಣೆ ಬೇಕಾಗಿಲ್ಲ ಅಂತ ನಾನು ಭಾವಿಸ್ತೀನಿ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕರಾಗ್ತಾರೆ ಅನ್ನೋದೆಲ್ಲಾ ಊಹಾಪೋಹ. ಶುಭ್‌ಮನ್ ಗಿಲ್ ಈಗಾಗಲೇ ಟೆಸ್ಟ್ ನಾಯಕ, ಏಕದಿನ ಮತ್ತು ಟಿ20 ತಂಡದ ಉಪನಾಯಕ. ರೋಹಿತ್ ಶರ್ಮಾ ತಂಡ ಬಿಟ್ಟ ಮೇಲೆ ಶುಭ್‌ಮನ್ ಗಿಲ್ ಸ್ವಾಭಾವಿಕವಾಗಿಯೇ ನಾಯಕರಾಗ್ತಾರೆ. ಈ ಬಗ್ಗೆ ಅಧಿಕೃತ ಘೋಷಣೆ ಅಗತ್ಯನೂ ಇಲ್ಲ ಅಂತ ಚೋಪ್ರಾ ಹೇಳಿದ್ದಾರೆ.
ಅಕ್ಷರ್ ಪಟೇಲ್ ಉಪನಾಯಕ ಸ್ಥಾನ ಕಳೆದುಕೊಂಡಿದ್ದು ಕಳಪೆ ಪ್ರದರ್ಶನದಿಂದಲ್ಲ, ಗಿಲ್ ಬೆಳವಣಿಗೆಯಿಂದ ಅಂತಲೂ ಚೋಪ್ರಾ ಹೇಳಿದ್ದಾರೆ. ಏಷ್ಯಾಕಪ್ ತಂಡದಿಂದ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದು ಚರ್ಚೆಗೆ ಗ್ರಾಸವಾಗಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ಇದರ ಬೆನ್ನಲ್ಲೇ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್ ಯಾದವ್‌ಗೆ ನಾಯಕ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶುಭ್‌ಮನ್ ಗಿಲ್ ಆಕರ್ಷಕ 754 ರನ್ ಸಿಡಿಸುವ ಮೂಲಕ ಮಿಂಚಿದ್ದರು. ಇದರ ಬೆನ್ನಲ್ಲೇ ಇದೀಗ ಏಷ್ಯಾಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ವೇಳೆಯಲ್ಲಿ ಅಕ್ಷರ್ ಪಟೇಲ್ ಬದಲಿಗೆ ಶುಭ್‌ಮನ್ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮೂರು ಮಾದರಿಯ ಕ್ರಿಕೆಟ್‌ಗೆ ಒಬ್ಬನೇ ನಾಯಕರನ್ನಾಗಿ ಮಾಡುವ ಉದ್ದೇಶದಿಂದಲೇ ಶುಭ್‌ಮನ್ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಲಾಗಿದೆ ಎನ್ನುವಂತಹ ಚರ್ಚೆಯೂ ಜೋರಾಗಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್, ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ತಿಲಕ್ ವರ್ಮಾ, ರಿಂಕು ಸಿಂಗ್
ವಿಕೆಟ್ ಕೀಪರ್: ಸಂಜು ಸ್ಯಾಮ್ಸನ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಬ್ಯಾಟರ್. ಎರಡನೇ ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಜಿತೇಶ್ ಶರ್ಮಾ.
ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್.
ಬೌಲಿಂಗ್ ವಿಭಾಗ: ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.
