Asia Cup ಟಾಸ್ ಗೆದ್ದ ಬಾಂಗ್ಲಾದೇಶ 4 ಬದಲಾವಣೆ, ಟೀಂ ಇಂಡಿಯಾ ಪ್ಲೇಯಿಂಗ್ 11 ಹೇಗಿದೆ? ಭಾರತ ವಿರುದ್ದ ಪಂದ್ಯಕ್ಕಾಗಿ ಬಾಂಗ್ಲಾದೇಶ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ, ಟೀಂ ಇಂಡಿಯಾದ ತಂಡದಲ್ಲಿ ಬದಲಾವಣೆ ಏನು?
ದುಬೈ (ಸೆ.24) ಏಷ್ಯಾಕಪ್ ಟೂರ್ನಿಯಲ್ಲಿ ಇಂದು ಭಾರತ ಹಾಗೂ ಬಾಂಗ್ಲಾದೇಶ ಹೋರಾಟ. ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದುಕೊಂಡಿದೆ. ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವ ಬಾಂಗ್ಲಾದೇಶ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಿದೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ ಇದೀಗ ಬಾಂಗ್ಲಾದೇಶ ಮಣಿಸಲು ಸಜ್ಜಾಗಿದೆ. ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಟೀಂ ಇಂಡಿಯಾ ಪ್ಲೇಯಿಂಗ್ 11
ಅಭಿಶೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮರಾ, ವರುಣ್ ಚಕ್ರವರ್ತಿ,
ಬಾಂಗ್ಲಾದೇಶ ಪ್ಲೇಯಿಂಗ್ 11
ಸೈಫ್ ಹಸನ್, ತಾಂಜಿದ್ ಹಸನ್ ತಮೀಮ್, ಪರ್ವೇಜ್ ಹೊಸೈನ್ ಇಮೊನ್, ತೌವ್ಹಿದ್ ಹ್ರಿದೊಯ್, ಶಮೀಮ್ ಹುಸೈನ್, ದೇಕ್ ಅಲಿ (ನಾಯಕ), ಮೊಹಮ್ಮದ್ ಸೈಫುದ್ದೀನ್, ರಿಶದ್ ಹುಸೈನ್, ತಾಂಜಿಮ್ ಹಸನ್ ಶಾಕೀಬ್, ನಸುಮ್ ಅಹಮ್ಮದ್, ಮುಸ್ತುಫಿಜುರ್ ರೆಹಮಾನ್
ಕಳೆದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿದ್ದೇವೆ, ಇದು ದುಬಾರಿಯಾಗಿದೆ. ಪಂದ್ಯ ಗೆದ್ದರೂ ಪಂದ್ಯದಲ್ಲಿ ತಪ್ಪುಗಳು ಹಲವಿತ್ತು. ಫೀಲ್ಡಿಂಗ್ ವಿಭಾಗದಲ್ಲಿ ಮತ್ತಷ್ಟು ಸುಧಾರಣೆಗೆ ಪ್ರಯತ್ನ ಮಾಡಿದ್ದೇವೆ ಎಂದು ಸೂರ್ಯುಕಮಾರ್ ಯಾದವ್ ಹೇಳಿದ್ದಾರೆ. ಕಳೆದ 4-5 ಪಂದ್ಯಗಳಲ್ಲಿ ಉತ್ತಮ ಹೋರಾಟ ನೀಡಿದ್ದೇವೆ ಎಂದಿದ್ದಾರೆ.
ಸೂಪರ್ 4 ಹಂತದಲ್ಲಿ ಭಾರತ ಹೋರಾಟ
ಸೂಪರ್ 4 ಹಂತದಲ್ಲಿ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆಲುವು ದಾಖಲಿಸಿದೆ. ಸದ್ಯ ಸೂಪರ್ 4 ಹಂತದಲ್ಲಿ ಭಾರತ 1 ಪಂದ್ಯ ಆಡಿದೆ. ಬಾಂಗ್ಲಾದೇಶ ವಿರುದ್ದ 2ನೇ ಪಂದ್ಯವಾಗಿದೆ. ಇತ್ತ ಬಾಂಗ್ಲಾದೇಶ ಕೂಡ ಸೂಪರ್ 4 ಹಂತದಲ್ಲಿ 1 ಪಂದ್ಯ ಆಡಿ ಗೆಲುವು ದಾಖಲಿಸಿದೆ. ಇತ್ತ ಪಾಕಿಸ್ತಾನ 2 ಪಂದ್ಯ ಆಡಿ 1 ಗೆಲುವು 1 ಸೋಲು ಕಂಡಿದ್ದರೆ, ಶ್ರೀಲಂಕಾ ಆಡಿದ 2 ಪಂದ್ಯದಲ್ಲೂ ಸೋಲು ಕಂಡಿದೆ.
