Yuzvendra Chahal And Dhanashree Divorce: ಯುಜುವೇಂದ್ರ ಚಾಹಲ್, ಧನಶ್ರೀ ವರ್ಮಾ ಡಿವೋರ್ಸ್‌ ಆಗಿದ್ದಾರೆ. ಸಂದರ್ಶನಗಳಲ್ಲಿ ಒಂದಲ್ಲ ಒಂದು ಆರೋಪ ಮಾಡಿಕೊಂಡು, ಇನ್ನಷ್ಟು ಜಗಳವನ್ನು ಜಾಸ್ತಿ ಮಾಡಿಕೊಳ್ತಿದ್ದಾರೆ. 

ಯುಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ (Yuzvendra Chahal Dhanashree ) ಡಿವೋರ್ಸ್‌ ಆದ ಬಳಿಕವೇ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದಾರೆ. ಪರಸ್ಪರ ಸಂದರ್ಶನಗಳನ್ನು ಕೊಡುತ್ತಿರುವ ಇವರು ಪರೋಕ್ಷವಾಗಿ ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಮಾಡಿಕೊಂಡು ಸದ್ದು ಮಾಡುತ್ತಿದ್ದಾರೆ. ಈಗ ಧನಶ್ರೀ ವರ್ಮಾ ಅವರು ನಿರ್ದೇಶಕಿ ಫರಾ ಖಾನ್‌ ಜೊತೆಗಿನ ಸಂದರ್ಶನದಲ್ಲಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬ್ಯಾಲೆನ್ಸ್‌ ಮಾಡೋದು ಕಷ್ಟ!

ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಜೊತೆಗಿನ ಆರಂಭದ ದಿನಗಳ ಬಗ್ಗೆ ಮಾತನಾಡಿದ ಅವರು, “ವೃತ್ತಿ ಜೀವನ ಮತ್ತು ವೈಯಕ್ತಿಕ ಬದ್ಧತೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಷ್ಟಕರವಾಗಿತ್ತು. ಗುರ್ಗಾಂವ್ ಹಾಗೂ ಮುಂಬೈ ನಡುವೆ ಟ್ರಾವೆಲ್‌ ಮಾಡೋದು ಕಷ್ಟ ಆಗುತ್ತಿತ್ತು, ಆದರೆ ತಾಯಿಯಿಂದ ಈ ವಿಷಯಗಳನ್ನು ಕಲಿತೆ ಎಂದು ಕೂಡ ಹೇಳಿದ್ದಾರೆ. ಯಾವುದೂ ಕೂಡ ಸುಲಭ ಇರಲಿಲ್ಲ, ಆದರೆ 100% ಪ್ರಯತ್ನ ಹಾಕಿದ್ದೇನೆ” ಎಂದು ಕೂಡ ಅವರು ಹೇಳಿದ್ದಾರೆ.

ಸಮಾಜದ ಜಡ್ಜ್‌ಮೆಂಟ್‌ ಬೇಸರ ತಂದಿತು!

ಈ ವರ್ಷದ ಆರಂಭದಲ್ಲಿ, ಧನಶ್ರೀ, ಚಾಹಲ್ ಅವರು ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು. “ಈ ಮದುವೆಯಿಂದ ಅಪ್ಪ-ಅಮ್ಮನಿಗೆ ಬೇಸರ ಆಗಿತ್ತು, ಆದರೆ ಸಮಾಜದ ಜಡ್ಜ್‌ಮೆಂಟ್‌ ನನಗೆ ತುಂಬ ಬೇಸರ ನೀಡಿತು. ಆರಾಮಾಗಿ, ಒಳ್ಳೆಯ ಸಂಬಂಧದಿಂದ ಮುಗಿಸಲು ಡಿವೋರ್ಸ್‌ ಆಗಬೇಕು ಅಂತ ನಾನು ಆಯ್ಕೆ ಮಾಡಿಕೊಂಡೆ ಎಂದು ಕೂಡ ಅವರು ಹೇಳಿದ್ದಾರೆ

ಮಾ ಅಂತ ಕರೆಯುತ್ತಿದ್ದ ಚಾಹಲ್

ಚಾಹಲ್‌ ಜೊತೆಗೆ ಒಳ್ಳೆಯ ಸ್ನೇಹ ಸಂಬಂಧ ಇದೆ, ನಾವು ಮೆಸೇಜ್‌ ಮಾಡುತ್ತಿರುತ್ತೇವೆ. ಚಾಹಲ್ ಅವರು ಪ್ರೀತಿಯಿಂದ ನನ್ನನ್ನು “ಮಾ” ಎಂದು ಕರೆಯುತ್ತಿದ್ದರು ಎಂದು ಹೇಳಿದ ಧನಶ್ರೀ ಅವರು, ಇನ್ನೂ ಕೂಡ ನಗುವಿನೊಂದಿಗೆ ನೆನಪಿಸಿಕೊಳ್ಳುವ ಒಂದು ಸನ್ನೆಯನ್ನು ನೆನಪಿಸಿಕೊಂಡಿದ್ದಾರೆ.

ಧನಶ್ರೀ ವರ್ಮಾ ಏನಂದ್ರು?

ಧನಶ್ರೀ ವರ್ಮಾ ಅವರು ಮಾತನಾಡಿ, “ಚಾಹಲ್‌ ಅವರು “ಬಿ ಯುವರ್ ಓನ್ ಶುಗರ್ ಡ್ಯಾಡಿ” ಎಂದು ಬರೆದುಕೊಂಡಿರೋ ಟಿ-ಶರ್ಟ್ ಧರಿಸಿದ್ದರು. ಡಿವೋರ್ಸ್‌ ಟೈಮ್‌ನಲ್ಲಿ ಈ ರೀತಿ ಟೀ ಶರ್ಟ್‌ ಧರಿಸಿದ್ದು ನನಗೆ ಸರ್ಪ್ರೈಸ್‌ ಆಗಿತ್ತು. ಈ ರೀತಿ ಮಾಡೋದು ಅನಗತ್ಯ ಊಹಾಪೋಹಗಳಿಗೆ ಮಾತ್ರ ಇಂಧನವನ್ನು ನೀಡಿತು, ವಿಶೇಷವಾಗಿ ನನ್ನ ವಿರುದ್ಧ ಪಬ್ಲಿಕ್‌ ತಿರುಗಿಬಿದ್ದಿತು” ಎಂದು ಹೇಳಿದ್ದರು.

ಡ್ಯಾನ್ಸ್‌ ಶೋನಿಂದ ನೆಗೆಟಿವ್‌ ಮಾತು!

ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದೆ. ರಿಹರ್ಸಲ್‌ಗಳ ಸಮಯದಲ್ಲಿ ಆಗಾಗ ಒಂದಷ್ಟು ನಿಂದನೆಯೂ ಸಿಕ್ಕಿತು ಎಂದು ಧನಶ್ರೀ ಹೇಳಿದ್ದರು. ಆಗ ಫರಾ ಖಾನ್ ಅವರು ನಕ್ಕಿದ್ದಾರೆ. “ಧನಶ್ರೀ ಅವರ ಸಾಮರ್ಥ್ಯವನ್ನು ನೋಡಿದ್ದರಿಂದ ಮಾತ್ರ ಈ ರೀತಿ ನೆಗೆಟಿವ್‌ ಪ್ರತಿಕ್ರಿಯೆ ಬಂದಿದೆ. ಆ ರೀತಿ ಡ್ಯಾನ್ಸ್‌ ಶೋನಲ್ಲಿ ನಾಲ್ಕರಿಂದ ಐದು ವಾರಗಳವರೆಗೆ ಇರುವುದು ಶ್ಲಾಘನೀಯ” ಎಂದು ಅವರು ಹೇಳಿದ್ದಾರೆ.

Rise and Fall ಎನ್ನುವ ರಿಯಾಲಿಟಿ ಶೋನಲ್ಲಿಯೂ ಧನಶ್ರೀ ಭಾಗವಹಿಸಿದ್ದಾರೆ. ಅಲ್ಲಿ ಅವರು, “ಕ್ವೀನ್‌ಗ ಸ್ಟಾರ್‌ ಆಗುವ ಅಗತ್ಯ ಇಲ್ಲ. ಸಂದರ್ಶನಕಾರರು ಕ್ಯೂನಲ್ಲಿ ನಿಂತಿದ್ದಾರೆ. ನಾನು ಪೆಂಟ್‌ಹೌಸ್‌ನಲ್ಲಿ ಎಲ್ಲ ಸ್ಪೋರ್ಟ್ಸ್‌ ಚಾನೆಲ್‌ ಬಂದಿದ್ದಾರೆ. “ಲವ್‌ ವಿಚಾರ ಬಂದಾಗ ಪ್ಲ್ಯಾನ್‌ ಮಾಡಲಾಗೋದಿಲ್ಲ. ಮತ್ತೆ ಲವ್‌ನಲ್ಲಿ ಬೀಳಬೇಕು ಎಂದು ಮ್ಯಾನಿಫೆಸ್ಟ್ ಮಾಡ್ತಿದೀನಿ. ಇವತ್ತು ಲವ್‌ನಲ್ಲಿ ಬೀಳ್ತಿರಿ, ನಾಳೆ ಎಂದು ಹೇಳೋಕಾಗಲ್ಲ” ಎಂದು ಕೂಡ ಹೇಳಿದ್ದಾರೆ.

2020ರಲ್ಲಿ ಚಾಹಲ್‌ ಹಾಗೂ ಧನಶ್ರೀ ವರ್ಮಾ ಅವರು ಗುರುಗಾಂವ್‌ನಲ್ಲಿ ಮದುವೆಯಾಗಿದ್ದರು. 2025ರಲ್ಲಿ ಈ ಜೋಡಿ ಬೇರೆಯಾಗಿತ್ತು.