Toxic Movie Actress Love Story: ‘ಟಾಕ್ಸಿಕ್’ ಸಿನಿಮಾದ ನಟಿಯೋರ್ವರು ನಾಲ್ಕು ವರ್ಷ ಡೇಟ್ ಮಾಡಿ ಟೈಮ್ ಪಾಸ್ ಎಂದಿದ್ದ ಪ್ರಿಯತಮನಿಗೆ ಠಕ್ಕರ್ ಕೊಡಲು ರೆಡಿಯಾದರಾ ಎಂಬ ಪ್ರಶ್ನೆ ಮೂಡಿದೆ.
ನಟ ಯಶ್ ‘ಟಾಕ್ಸಿಕ್’ ಸಿನಿಮಾದ ಹೀರೋಯಿನ್, ಬಾಲಿವುಡ್ ನಟಿ ತಾರಾ ಸುತಾರಿಯಾ, ವೀರ್ ಪಹಾರಿಯಾ ಲವ್ ಸ್ಟೋರಿ ಈಗ ಸಾರ್ವಜನಿಕವಾದಂತಿದೆ. ಈಗಾಗಲೇ ಸಾಕಷ್ಟು ಫ್ಯಾಷನ್ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಏರ್‌ಪೋರ್ಟ್‌ನಲ್ಲಿ ಕೂಡ ಒಟ್ಟಿಗೆ ಕಾಲ ಕಳೆದಿತ್ತು.
ಪರೋಕ್ಷವಾಗಿ ಪ್ರೀತಿ ಹೇಳಿಕೊಂಡ್ರಾ?
ಗಣೇಶ ಚತುರ್ಥಿಯಂದು ತಾರಾ ಅವರು ವೀರ್ ಜೊತೆಗಿನ ಫೊಟೋ ಹಂಚಿಕೊಂಡು, ಲವ್ ಮಾಡ್ತಿರೋದು ಸತ್ಯ ಎಂದು ಅಧಿಕೃತವಾಗಿ ಹೇಳಿದ್ದಾರಾ ಎಂಬ ಸಂದೇಹ ಶುರುವಾಗಿದೆ. ಒಟ್ಟಿನಲ್ಲಿ ಪರೋಕ್ಷವಾಗಿ ಈ ಜೋಡಿ ಪ್ರೀತಿ ವಿಷಯವನ್ನು ಹೇಳಿಕೊಂಡಿದೆ.
ಜೋಡಿ ಫೋಟೋನ ಹಂಚಿಕೊಂಡ ನಟಿ
ಗಣೇಶ ಚತುರ್ಥಿ ದಿನ ಒಂದಿಷ್ಟು ಫೋಟೋ ಹಂಚಿಕೊಂಡ ತಾರಾ ಅವರು, “ಭಕ್ತಿ, ನಂಬಿಕೆ, ಆಚರಣೆ, ಗಣಪತಿ ಬಪ್ಪ ಮೋರಯಾ” ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ವೀರ್ ಅವರು ಎರಡು ಹಾರ್ಟ್ ಸಿಂಬಲ್‌ಗಳನ್ನು ಕಾಮೆಂಟ್ ಮಾಡಿದ್ದಾರೆ.
ತಾರಾ, ಆಧಾರ್ ಲವ್‌ನಲ್ಲಿದ್ದರು!
ಈ ಹಿಂದೆ ತಾರಾ ಸುತಾರಿಯಾ ಅವರು ಆಧಾರ್ ಜೈನ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ನಾಲ್ಕು ವರ್ಷಗಳ ಕಾಲ ಈ ಜೋಡಿ ಲವ್ ಮಾಡಿತ್ತು. 2023ರಲ್ಲಿ ಇವರಿಬ್ಬರು ದೂರ ಆದರು. ಆ ಬಳಿಕ ಆಧಾರ್ ಜೈನ್ ಅವರು ಅಲೇಖಾ ಅಡ್ವಾನಿಯನ್ನು ಮದುವೆಯಾದರು. “ಅಲೇಖಾ ಅಂದರೆ ನನಗೆ ತುಂಬ ಇಷ್ಟ. ಅಲೇಖಾಳನ್ನು ನಾನು ಮೊದಲಿನಿಂದಲೂ ಪ್ರೀತಿಸುತ್ತಿದ್ದೆ, ಆದರೆ ಅವಳ ಜೊತೆ ಇರೋಕೆ ಆಗಲಿಲ್ಲ. ನಾನು ಈ ಹಿಂದೆ ನಾಲ್ಕು ವರ್ಷ ಡೇಟ್‌ನಲ್ಲಿದ್ದದ್ದು ಟೈಮ್ ಪಾಸ್” ಎಂದು ಆಧಾರ್ ಜೈನ್ ಹೇಳಿದ್ದರು.
ಟೈಮ್ ಪಾಸ್ ಎಂದಿದ್ದ ಆಧಾರ್
ಟೈಮ್ ಪಾಸ್ ಬಗ್ಗೆ ಮತ್ತೆ ಕಾಮೆಂಟ್ ಮಾಡಿದ ಆಧಾರ್ ಜೈನ್ ಅವರು, “ಹತ್ತು ಸೆಕೆಂಡ್ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಡಿ. ಟೈಮ್ ಪಾಸ್ ಅಂತ ಹೇಳಿಲ್ಲ. ಈ ರೀತಿ ಅಭಿಪ್ರಾಯಗಳಿಂದ ಮೂರು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದರು.
ಮಾಜಿ ಪ್ರಿಯತಮ ಬೇರೆ ಮದುವೆ ಆಗುತ್ತಿದ್ದಂತೆ, ತಾರಾ ಸುತಾರಿಯಾ ಈಗ ಬೇರೆ ಲವ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಜೋಡಿ ಯಾವಾಗ ಮದುವೆ ಆಗಲಿದೆ? ಎಂದು ಕಾದು ನೋಡಬೇಕಿದೆ. ಅಂದಹಾಗೆ ‘ಟಾಕ್ಸಿಕ್ʼ ಸಿನಿಮಾದಲ್ಲಿ ತಾರಾ ಪಾತ್ರ ಏನು ಎಂದು ರಿವೀಲ್ ಆಗಿಲ್ಲ.
ಚಿತ್ರರಂಗದಲ್ಲಿ ಆಕ್ಟಿವ್ ಆಗಿರುವ ನಟಿ
Bigg Bada Boom ಎನ್ನುವ ರಿಯಾಲಿಟಿ ಶೋ ಮೂಲಕ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತಾರಾ ಸುತಾರಿಯಾ ಅವರು, ‘The Suite Life of Karan & Kabir’, ‘Oye Jassie’, ‘Student of the Year 2’ ಸೇರಿದಂತೆ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ, ಕೆಲವೇ ಕೆಲವು ಶೋಗಳಲ್ಲಿ ಭಾಗಿಯಾಗಿದ್ದಾರೆ. ಆದರೆ ಇವರಿಗೆ ಹೇಳಿಕೊಳ್ಳುವಂಥ ಹೆಸರು, ಯಶಸ್ಸು ಸಿಕ್ಕಿಲ್ಲ.

