"ಅದು ರಶ್ಮಿಕಾಳ ಧ್ವನಿ! ಅವರು ದೀಪಾವಳಿಗೆ ವಿಜಯ್ ದೇವರಕೊಂಡ ಮನೆಯಲ್ಲಿ ಇದ್ದರಾ?" ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, "ನನಗೆ ಕಿವಿಯಲ್ಲಿ ರಶ್ಮಿಕಾಳ ಧ್ವನಿ ಸ್ಪಷ್ಟವಾಗಿ ಕೇಳಿಸಿದೆ. ಇದು ನಿಜಕ್ಕೂ ಅವರು ಒಂದಾಗಿದ್ದಾರೆ ಎಂಬುದಕ್ಕೆ ಪುರಾವೆ" ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಸತ್ಯ ಏನು?
ವಿಜಯ್ ದೇವರಕೊಂಡ ದೀಪಾವಳಿ ವಿಡಿಯೋ!
ವಿಜಯ್ ದೇವರಕೊಂಡ (Vijay Deverakonda) ಅವರ ದೀಪಾವಳಿ ಪೋಸ್ಟ್ ಬಗ್ಗೆ ಒಂದು ಸಖತ್ ಮಸಾಲೆ ಭರಿತ ಸುದ್ದಿ ಹೊರಬಿದ್ದಿದೆ! ಇದು ನಿಜಕ್ಕೂ ಮನರಂಜನಾ ಜಗತ್ತಿನಲ್ಲಿ ಒಂದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಮ್ಮ ರೌಡಿ ಹೀರೋ ವಿಜಯ್ ದೇವರಕೊಂಡ ದೀಪಾವಳಿ ಹಬ್ಬದ ಶುಭಾಶಯ ಕೋರಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಆದರೆ, ಅವರ ಅಭಿಮಾನಿಗಳು ಆ ವಿಡಿಯೋದಲ್ಲಿ ಕೇಳಿದ ಒಂದು ಚಿಕ್ಕ ಧ್ವನಿಯನ್ನು ಪತ್ತೆ ಹಚ್ಚಿ, ಅದು 'ರಶ್ಮಿಕಾ ಮಂದಣ್ಣ' ಅವರ ಧ್ವನಿ ಎಂದು ಹೇಳಿ ಇಡೀ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದಾರೆ!
ನಿಮಗೆಲ್ಲರಿಗೂ ತಿಳಿದಿರುವಂತೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಡುವೆ ಪ್ರೀತಿಯಿದೆ ಎನ್ನುವ ಗಾಳಿಸುದ್ದಿ ಬಹಳ ಹಿಂದಿನಿಂದಲೂ ಇದೆ. ಇವರಿಬ್ಬರೂ ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ಆನ್-ಸ್ಕ್ರೀನ್ ಕೆಮಿಸ್ಟ್ರಿ ಜೊತೆಗೆ ಆಫ್-ಸ್ಕ್ರೀನ್‌ನಲ್ಲೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಈ ಜೋಡಿಯನ್ನು ಇಷ್ಟಪಡುವ ಅಭಿಮಾನಿಗಳ ಸಂಖ್ಯೆ ಅಪಾರ. ಹೀಗಿರುವಾಗ, ವಿಜಯ್ ಅವರ ದೀಪಾವಳಿ ವಿಡಿಯೋದಲ್ಲಿ ಕೇಳಿದ ಧ್ವನಿ, ಈ ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಿದೆ ಎನ್ನಬಹುದು!
ಅದು ದೀಪಾವಳಿ ಹಬ್ಬದ ದಿನ. ವಿಜಯ್ ದೇವರಕೊಂಡ ತಮ್ಮ ಮನೆಯಲ್ಲಿ ಪಟಾಕಿ ಹಚ್ಚುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅವರು ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಿರುವುದು ಕಾಣುತ್ತದೆ. ಆದರೆ, ವಿಡಿಯೋದ ಹಿನ್ನೆಲೆಯಲ್ಲಿ ಒಂದು ಸ್ತ್ರೀ ಧ್ವನಿ ಕೇಳಿಸುತ್ತದೆ. ಅದು 'ಬೇಬಿ... ಇನ್ನೊಂದು...' ಎಂದು ಹೇಳಿದಂತೆ ಇದೆ. ತಕ್ಷಣವೇ ಚುರುಕುಬುದ್ಧಿಯ ಅಭಿಮಾನಿಗಳು ಆ ಧ್ವನಿ ರಶ್ಮಿಕಾ ಮಂದಣ್ಣ ಅವರದ್ದು ಎಂದು ಗುರುತಿಸಿದ್ದಾರೆ!
ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚಿಸಲು ಪ್ರಾರಂಭಿಸಿದ್ದಾರೆ. "ಅದು ರಶ್ಮಿಕಾಳ ಧ್ವನಿ! ಅವರು ದೀಪಾವಳಿಗೆ ವಿಜಯ್ ದೇವರಕೊಂಡ ಮನೆಯಲ್ಲಿ ಇದ್ದರಾ?" ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, "ನನಗೆ ಕಿವಿಯಲ್ಲಿ ರಶ್ಮಿಕಾಳ ಧ್ವನಿ ಸ್ಪಷ್ಟವಾಗಿ ಕೇಳಿಸಿದೆ. ಇದು ನಿಜಕ್ಕೂ ಅವರು ಒಂದಾಗಿದ್ದಾರೆ ಎಂಬುದಕ್ಕೆ ಪುರಾವೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್‌ಗಳು ಈಗ ವೈರಲ್ ಆಗಿದ್ದು, ವಿಜಯ್ ಮತ್ತು ರಶ್ಮಿಕಾ ಸಂಬಂಧದ ಬಗ್ಗೆ ಮತ್ತೊಮ್ಮೆ ಅನುಮಾನಗಳನ್ನು ಹುಟ್ಟುಹಾಕಿದೆ.
ಇದು ಮೊದಲ ಬಾರಿಯೇನಲ್ಲ
ಇದು ಮೊದಲ ಬಾರಿಯೇನಲ್ಲ, ವಿಜಯ್ ಮತ್ತು ರಶ್ಮಿಕಾ ಆಗಾಗ ಒಟ್ಟಿಗೆ ರಜಾದಿನಗಳನ್ನು ಕಳೆಯುವುದು, ಒಂದೇ ಸ್ಥಳದಲ್ಲಿ ಕಾಣಿಸಿಕೊಳ್ಳುವುದು, ಒಂದೇ ರೀತಿಯ ವಸ್ತುಗಳನ್ನು ಧರಿಸುವುದು ಇಂತಹ ಅನೇಕ ಘಟನೆಗಳು ನಡೆದಿವೆ. ಆದರೆ ಅವರಿಬ್ಬರೂ ಎಂದಿಗೂ ತಮ್ಮ ಸಂಬಂಧವನ್ನು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಯಾವಾಗಲೂ "ನಾವು ಉತ್ತಮ ಸ್ನೇಹಿತರು" ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಅವರ ನಡುವೆ ಸ್ನೇಹಕ್ಕಿಂತ ಹೆಚ್ಚಿನದೇನೋ ಇದೆ ಎಂದು ದೃಢವಾಗಿ ನಂಬಿದ್ದಾರೆ. ಅಂದಹಾಗೆ, ನಟಿ ರಶ್ಮಿಕಾ ಅವರು ನಟ ವಿಜಯ್ ದೇವರಕೊಂಡ ಅವರನ್ನು ‘ವಿಜು’ ಎಂದು ಕರೆಯುತ್ತಾರೆ.
ಮೌನವೇ ಹಲವು ಪ್ರಶ್ನೆಗಳಿಗೆ ಉತ್ತರ?
ಈ ದೀಪಾವಳಿ ವಿಡಿಯೋ ಅವರ ಸಂಬಂಧಕ್ಕೆ ಮತ್ತೊಂದು ಪುಷ್ಟಿ ನೀಡಿದಂತಾಗಿದೆ. ದೀಪಾವಳಿಯಂತಹ ಕುಟುಂಬದ ಹಬ್ಬದಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ಅವರ ಜೊತೆಗಿದ್ದರು ಎಂಬುದು ಹಲವರ ಊಹೆಗೆ ಕಾರಣವಾಗಿದೆ. ಸದ್ಯಕ್ಕೆ, ವಿಜಯ್ ದೇವರಕೊಂಡ ಅವರಾಾಗಲಿ ಅಥವಾ ರಶ್ಮಿಕಾ ಮಂದಣ್ಣ ಆಗಲೀ ಈ ವಿಡಿಯೋ ಅಥವಾ ಅಭಿಮಾನಿಗಳ ಕಾಮೆಂಟ್‌ಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಮೌನವೇ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದಂತೆ ಕಾಣುತ್ತಿದೆ. ಈ ಜೋಡಿ ತಮ್ಮ ಸಂಬಂಧವನ್ನು ಯಾವಾಗ ಒಪ್ಪಿಕೊಳ್ಳುತ್ತದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ!
