ಟಾಲಿವುಡ್ ಸ್ಟಾರ್ ನಟ ವೆಂಕಟೇಶ್ ತಮ್ಮ ಪ್ರೀತಿಯ ನಾಯಿ 'ಗೂಗಲ್' ಅಗಲಿಕೆಯಿಂದ ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವಪೂರ್ಣ ಸಂದೇಶ ಹಂಚಿಕೊಂಡಿದ್ದಾರೆ.

ತೆಲುಗು ನಟ ವೆಂಕಟೇಶ್ ದಗ್ಗುಬಾಟಿ ಮನೆಯಲ್ಲಿ ದುಃಖ ಆವರಿಸಿದೆ. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾವುಕ ಪೋಸ್ಟ್‌ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಏನಾಯ್ತು ಅಂತೀರಾ? ಟಾಲಿವುಡ್ ಸ್ಟಾರ್ ವೆಂಕಟೇಶ್ 12 ವರ್ಷಗಳಿಂದ ಸಾಕಿದ್ದ ನಾಯಿ 'ಗೂಗಲ್' ಇನ್ನಿಲ್ಲ. ಇದರಿಂದ ವೆಂಕಟೇಶ್ ಭಾವುಕರಾಗಿದ್ದಾರೆ. 'ನಿನ್ನನ್ನು ಮಿಸ್ ಮಾಡ್ಕೊಳ್ತೀನಿ' ಅಂತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾಯಿಯೊಂದಿಗಿನ ಒಡನಾಟವನ್ನು ನೆನೆದಿದ್ದಾರೆ. 'ವಿದಾಯ ಗೆಳೆಯ' ಎಂದು ಬರೆದಿರುವ ಪೋಸ್ಟ್ ವೈರಲ್ ಆಗಿದೆ.

ನಿನ್ನನ್ನು ಮಿಸ್ ಮಾಡ್ಕೊಳ್ತೀನಿ 'ಗೂಗಲ್': ನನ್ನ ಪ್ರೀತಿಯ ಗೂಗಲ್, ಕಳೆದ 12 ವರ್ಷಗಳಿಂದ ನಮ್ಮ ಜೀವನದ ಭಾಗವಾಗಿದ್ದೆ. ನೀನು ನಮ್ಮ ಜೀವನವನ್ನು ಸುಂದರ ನೆನಪುಗಳಿಂದ ತುಂಬಿದ್ದೆ. ನೀನೇ ನಮ್ಮ ಸೂರ್ಯ. ನಿನ್ನ ಅಗಲಿಕೆಯ ನೋವು ಅಷ್ಟಿಷ್ಟಲ್ಲ. ನಿನ್ನನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ. ನನ್ನ ಪ್ರೀತಿಯ ಗೆಳೆಯ… ವಿದಾಯ ಎಂದು ವೆಂಕಟೇಶ್ ಬರೆದುಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು 'RIP Google', 'ಎಂದಿಗೂ ನೆನಪಿನಲ್ಲಿರುತ್ತೆ' ಎಂದು ಸಂತಾಪ ಸೂಚಿಸಿದ್ದಾರೆ.

Scroll to load tweet…

ವೆಂಕಟೇಶ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಸಂಕ್ರಾಂತಿಕಿ ವಸ್ತುನ್ನಾಂ’ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ವರ್ಷ ಹಲವು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ 'ವೆಂಕಟ ರಮಣ' ಸಿನಿಮಾ ಮಾಡ್ತಿದ್ದಾರೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ತ್ರಿಷಾ ನಾಯಕಿ ಎನ್ನಲಾಗಿದೆ.

ಅನಿಲ್ ರವಿಪೂಡಿ-ಚಿರಂಜೀವಿ ಕಾಂಬಿನೇಷನ್‌ನ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರದಲ್ಲಿ ವೆಂಕಟೇಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ. ಈ ಬಗ್ಗೆ ರವಿಪೂಡಿ ಸ್ಪಷ್ಟನೆ ನೀಡಿದ್ದಾರೆ. ಶೀಘ್ರದಲ್ಲೇ ವೆಂಕಿ ಮಾಮ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.

‘ಲಕ್ಷ್ಮಿ’ ಕಾಂಬಿನೇಷನ್ ಮತ್ತೆ?: ವಿ.ವಿ. ವಿನಾಯಕ್ ನಿರ್ದೇಶನದಲ್ಲಿ ವೆಂಕಟೇಶ್ ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಈ ಚಿತ್ರ ಮಾಸ್, ಆಕ್ಷನ್ ಮತ್ತು ಹಾಸ್ಯಮಯವಾಗಿರಲಿದೆಯಂತೆ. ಈ ಹಿಂದೆ ಈ ಜೋಡಿ 'ಲಕ್ಷ್ಮಿ' ಸಿನಿಮಾ ಮಾಡಿತ್ತು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಹಾಗಾಗಿ ವೆಂಕಿ-ವಿನಾಯಕ್ ಕಾಂಬಿನೇಷನ್ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ನೀಡಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.