ಸಲ್ಮಾನ್ ಖಾನ್, ಸಂಜಯ್ ದತ್‌ಗೆ ಭಾರತದ ಏಕೈಕ ಹೊಸ ಕಾರನ್ನು ತೋರಿಸಿದಾಗ, ಸಂಜಯ್ ಅದರ ಕೀಯನ್ನು ಸಮುದ್ರಕ್ಕೆ ಎಸೆದರು. ನಂತರ ಸಲ್ಮಾನ್ ತಂಡ ನಾಲ್ಕು ದಿನಗಳ ಕಾಲ ಕೀ ಹುಡುಕುತ್ತಲೇ ಇತ್ತು. ಆದರೂ ಅವರ ಸ್ನೇಹ ಇಂದಿಗೂ ಹಾಗೆಯೇ ಇದೆ.

Salman New Car Stories Sanjay Dutt Keys Thrown Sea : ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಅವರ ಸ್ನೇಹ ಬಾಲಿವುಡ್‌ನಲ್ಲಿ ಬಹಳ ಫೇಮಸ್. ದಬಂಗ್ ಖಾನ್, ಸಂಜಯ್ ದತ್ ಅವರನ್ನು ಅಣ್ಣನಂತೆ ಕಾಣುತ್ತಾರೆ. ಇಬ್ಬರ ನಡುವೆ ಸ್ನೇಹದ ಜೊತೆಗೆ ಆಳವಾದ ಸಂಬಂಧವಿದೆ. ಸಲ್ಮಾನ್ ಮತ್ತು ಸಂಜಯ್ ದತ್ ಆಗಾಗ ಒಬ್ಬರಿಗೊಬ್ಬರು ಸಪೋರ್ಟ್ ಮಾಡುವುದನ್ನು ಕಾಣಬಹುದು. ಇಬ್ಬರೂ ಒಬ್ಬರ ಮನೆಗೊಬ್ಬರು ಪಾರ್ಟಿಗೆ ಹೋಗುತ್ತಾರೆ. ಇತ್ತೀಚೆಗೆ ಸಲ್ಮಾನ್ ಒಂದು ಘಟನೆಯನ್ನು ವಿವರಿಸಿದ್ದು, ಅದನ್ನು ಕೇಳಿದರೆ ಈ ಘಟನೆಯ ನಂತರ ಅವರಿಬ್ಬರೂ ಮತ್ತೆಂದೂ ಸ್ನೇಹಿತರಾಗಿ ಉಳಿಯಲಿಲ್ಲವೇನೋ ಎನಿಸಬಹುದು.

ಕೋಟ್ಯಂತರ ರೂಪಾಯಿ ಕಾರಿನ ಕೀ ಸಮುದ್ರಕ್ಕೆ ಎಸೆದಿದ್ದೇಕೆ?

ಸಲ್ಮಾನ್ ಖಾನ್ ತಮ್ಮ ಸೋಹೈಲ್ ಖಾನ್ ನಿರ್ದೇಶನದ 'ಮೈನೆ ದಿಲ್ ತುಝ್ಕೋ ದಿಯಾ' ಚಿತ್ರದಲ್ಲಿ ಸಂಜಯ್ ದತ್ ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾ ಮುಗಿದ ನಂತರ ಒಂದು ಪಾರ್ಟಿಯಲ್ಲಿ ಸಲ್ಮಾನ್, ಹೊಸದಾಗಿ ಇಂಪೋರ್ಟ್ ಮಾಡಿದ್ದ ಕಾರನ್ನು ಸಂಜಯ್ ದತ್‌ಗೆ ತೋರಿಸಿದರು. ಆ ಸಮಯದಲ್ಲಿ ಭಾರತದಲ್ಲಿ ಬೇರೆ ಯಾರ ಬಳಿಯೂ ಆ ಕಾರು ಇರಲಿಲ್ಲ. ಕೋಟ್ಯಂತರ ರೂಪಾಯಿ ಬೆಲೆಯ ಈ ಕಾರಿಗೆ ಒಂದೇ ಒಂದು ಕೀ ಇತ್ತು. ಅವರು ಅದನ್ನು ಸಂಜಯ್‌ಗೆ ಕೊಡಲು ಬಯಸಿದ್ದರು. ಆದರೆ ಕಾರಿನಲ್ಲಿ ಕುಳಿತಾಗ ಸಂಜಯ್‌ಗೆ ಏನನ್ನಿಸಿತೋ ಏನೋ, ಅವರು ಕಾರಿನ ಕೀಯನ್ನು ತೆಗೆದು ಸಮುದ್ರಕ್ಕೆ ಎಸೆದುಬಿಟ್ಟರು. ಕೋಟ್ಯಂತರ ರೂಪಾಯಿ ಕಾರಿನ ಏಕೈಕ ಕೀ ಅದಾಗಿತ್ತು. ಇದರ ನಂತರ ಅವರ ಇಡೀ ತಂಡ ನಾಲ್ಕು ದಿನಗಳ ಕಾಲ ಆ ಕೀಯನ್ನು ಸಮುದ್ರದಲ್ಲಿ ಹುಡುಕಿತಂತೆ. ಈ ಘಟನೆಯನ್ನ ಸಲ್ಮಾನ್ ಶೋ ಒಂದರಲ್ಲಿ ಹೇಳಿದ್ದರು.

ಸಲ್ಮಾನ್ ಖಾನ್ ಮತ್ತು ತಂಡ 4 ದಿನ ಪರದಾಡಿತು

ಈ ವಿಚಿತ್ರ ವರ್ತನೆಯ ನಂತರ ಸಲ್ಮಾನ್ ಖಾನ್‌ಗೆ ಸಾಕಷ್ಟು ತೊಂದರೆಯಾಗಿತ್ತು. ನಾಲ್ಕು ದಿನಗಳ ಕಾಲ ಆ ಕೀಯನ್ನು ಹುಡುಕುತ್ತಿದ್ದರು. ಈ ಕಥೆಯನ್ನು ಸಲ್ಮಾನ್ ತಮಾಷೆಯಾಗಿ ಹೇಳಿದರೂ, ಅವರ ನೋವು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೂ, ಇಬ್ಬರ ಸ್ನೇಹದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ. ಸಂಜು ಬಾಬಾ ಯಾಕೆ ಹೀಗೆ ಮಾಡಿದರು ಎಂದು ಕೇಳಿದಾಗ, ಸಲ್ಮಾನ್ ನಗುತ್ತಾ ಆ ಮಾತನ್ನು ತಳ್ಳಿಹಾಕಿದರು.

ಸಲ್ಮಾನ್ ಮತ್ತು ಸಂಜಯ್ ಇಬ್ಬರೂ ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳು. ಸಲ್ಮಾನ್ ಖಾನ್ 'ಪ್ಯಾರ್ ಕಿಯಾ ತೋ ಡರ್ನಾ ಕ್ಯಾ', 'ಬಜರಂಗಿ ಭಾಯಿಜಾನ್', 'ಸುಲ್ತಾನ್', ಮತ್ತು 'ಏಕ್ ಥಾ ಟೈಗರ್' ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತ ಸಂಜಯ್ ದತ್ 'ಖಳನಾಯಕ್', 'ನಾಮ್', 'ಕಳಂಕ್', 'ಮುಷ್ಕಿಲ್' ನಂತಹ ಚಿತ್ರಗಳಿಂದ ಹೆಸರು ಮಾಡಿದ್ದಾರೆ. ಇಬ್ಬರ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿವೆ. ಈ ಜೋಡಿ 'ಸಾಜನ್' ನಂತಹ ಬ್ಲಾಕ್‌ಬಸ್ಟರ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದೆ.