ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ವಿಡಿಯೋ ವೈರಲ್ ಆಗಿದೆ. ದೀಪಿಗೆ ರಣಬೀರ್ ಹಗ್ ಮಾಡಿದ್ದೇ ಮಾಡಿದ್ದು, ಬಳಕೆದಾರರ ಚರ್ಚೆ ತಾರಕಕ್ಕೇರಿದೆ. 

ಪ್ರೀತಿ ಮಾಡಿ ದೂರವಾದ ಜೋಡಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡ್ರೆ ನೋಡೋಕೆ ಅದೇನೋ ಇಂಟರೆಸ್ಟ್. ಅದ್ರಲ್ಲೂ ಸೆಲೆಬ್ರಿಟಿ ಮಾಜಿಗಳು ಒಟ್ಟಿಗೆ ಕಾಣಿಸಿಕೊಂಡಾಗ ಜನರ ಕಣ್ಣು ದೊಡ್ಡದಾಗುತ್ತೆ. ಅನೇಕ ದಿನಗಳ ನಂತ್ರ ಬಾಲಿವುಡ್ ಫೇಮಸ್ ಜೋಡಿ ರಣಬೀರ್ ಕಪೂರ್ (Ranbir Kapoor) ಹಾಗೂ ದೀಪಿಕಾ ಪಡುಕೋಣೆ (Deepika Padukone) ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಇಬ್ಬರು ಹಗ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏರ್ ಪೋರ್ಟ್ ನಲ್ಲಿ ದೀಪಿಗೆ ಹಗ್ ಮಾಡಿದ ರಣಬೀರ್ ಕಪೂರ್ : 

ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮಾಡಿದ ರಣಬೀರ್ ಕಪೂರ್, ಎಲೆಕ್ಟ್ರಿಕ್ ಕಾರ್ಟ್ ಹತ್ತೋದನ್ನು ನೀವು ಕಾಣ್ಬಹುದು. ಮೊದಲೇ ಎಲೆಕ್ಟ್ರಿಕ್ ಕಾರ್ಟ್ ನಲ್ಲಿದ್ದ ದೀಪಿಕಾ ಪಡುಕೋಣೆಗೆ ಹಗ್ ಮಾಡುವ ರಣಬೀರ್, ದೀಪಿಕಾ ಜೊತೆ ಮಾತನಾಡ್ತಾ ಮುಂದೆ ಸಾಗಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಟರ್ಮಿನಲ್ ಹೊರಗೆ ಬರ್ತಾ, ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಹಿಂದೆ ದೀಪಿಕಾ ಪಡುಕೋಣೆ ಸೇಫ್ ಆಗಿ ಬರ್ತಿದ್ದಾರಾ ಅನ್ನೋದನ್ನು ನಿಂತು ಚೆಕ್ ಮಾಡಿದ ರಣಬೀರ್ ಕಪೂರ್ ನಂತ್ರ ದೀಪಿಕಾರನ್ನು ಮುಂದೆ ಹೋಗಲು ಬಿಟ್ಟಿದ್ದಾರೆ. ದೀಪಿಕಾ ಇನ್ನೇನು ಕಾರ್ ಹತ್ತಬೇಕು, ಆಗ ದೀಪಿಕಾರನ್ನು ಕರೆದು ಅಪ್ಪಿಕೊಂಡ ರಣಬೀರ್ ಕಪೂರ್ ಅವ್ರ ಹಿಂದೆಯೇ ಹೊರಟಿದ್ರು. ದೀಪಿಕಾ ಹಿಂದೆಯೇ ಅವರ ಕಾರ್ ಬಳಿ ಹೋಗಿದ್ದ ರಣಬೀರ್ ಕಪೂರ್ ನಂತ್ರ ಹಿಂದಿದ್ದ ತಮ್ಮ ಕಾರ್ ಬಳಿ ವಾಪಸ್ ಆಗ್ತಾರೆ.

ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಸುರಿಮಳೆ : 

ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಬ್ರೇಕ್ ಅಪ್ ಆಗಿ ಎಷ್ಟೋ ವರ್ಷ ಕಳೆದಿದೆ. ಬ್ರೇಕ್ ಅಪ್ ಬಗ್ಗೆ ಈ ಹಿಂದೆ ಇಬ್ಬರೂ ಅನೇಕ ಬಾರಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ದೀಪಿಕಾ ಹಾಗೂ ರಣಬೀರ್ ಮದುವೆಯಾಗಿ ಮಕ್ಕಳಿದ್ದು, ತಮ್ಮ ಕೆಲ್ಸದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಮಧ್ಯೆ ಬ್ರೇಕ್ ಅಪ್ ಆದ್ರೂ ಫ್ರೆಂಡ್ ಶಿಪ್ ಹಾಗೇ ಇದೆ. ಅನೇಕ ಬಾರಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಆದ್ರೆ ಅನೇಕ ದಿನಗಳ ನಂತ್ರ ಈಗ ಮತ್ತೆ ಒಟ್ಟಿಗೆ ಈ ಜೋಡಿಯನ್ನು ನೋಡಿದ ಫ್ಯಾನ್ಸ್ ಕಮೆಂಟ್ ಶುರು ಮಾಡಿದ್ದಾರೆ. ದೀಪಿ ಹಾಗೂ ರಣಬೀರ್ ಕಪೂರ್ ಫ್ಯಾನ್ಸ್, ಈ ಜೋಡಿಯನ್ನು ಮಿಸ್ ಮಾಡಿಕೊಳ್ತಿದ್ದಾರೆ. ಇಬ್ಬರೂ ಮದುವೆ ಆಗ್ಬೇಕಿತ್ತು ಎನ್ನುವ ತಮ್ಮ ಆಸೆಯನ್ನು ಮತ್ತೆ ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲ ಇಬ್ಬರು ಮತ್ತೆ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳೋದು ಯಾವಾಗ ಅಂತ ಪ್ರಶ್ನೆ ಕೇಳಿದ್ದಾರೆ. ದೀಪಿಕಾ ಹಾಗೂ ರಣಬೀರ್ ಕಪೂರ್, ಯೇ ಜವಾನಿ ಹೈ ದಿವಾನಿ 2 ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿ ಬಂದಿವೆ. ರಣಬೀರ್ ಹಾಗೂ ದೀಪಿ ವಿಡಿಯೋ ಟ್ರೋಲರ್ ಗೆ ಆಹಾರವಾಗಿದೆ. ರಣಬೀರ್ ನೋಡಿ ದೀಪಿಕಾ ನಾಚಿಕೊಳ್ತಿದ್ದಾರೆ, ಇಬ್ಬರು ಹಗ್ ಮಾಡಿರೋದನ್ನು ಆಲಿಯಾ ಸಹಿಸಲ್ಲ ಎನ್ನುವ ಕಮೆಂಟ್ ಬಂದಿದೆ.

ಶೂಟಿಂಗ್ ನಲ್ಲಿ ದೀಪಿ – ರಣಬೀರ್ ಬ್ಯುಸಿ : 

ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆ ಕಿಂಗ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ಅವರೊಂದಿಗೆ ಅಟ್ಲೀ ಅವರ ಆಕ್ಷನ್ ಚಿತ್ರ "AA22xA6" ನಲ್ಲಿಯೂ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಣಬೀರ್ ಕಪೂರ್ ಕೈನಲ್ಲಿ ಸಾಕಷ್ಟು ಸಿನಿಮಾ ಇದೆ. ಲವ್ ಅಂಡ್ ವಾರ್, ರಾಮಾಯಣದ ಶೂಟಿಂಗ್ ನಡೆಯುತ್ತಿದೆ.

ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಲವ್ : ಇಬ್ಬರು 2008 ರಲ್ಲಿ ಬಚ್ನಾ ಏ ಹಸೀನೋ ಚಿತ್ರದ ಸೆಟ್ ನಲ್ಲಿ ಹತ್ತಿರವಾಗಿದ್ರು. ಒಂದು ವರ್ಷ ಪ್ರೀತಿಯಲ್ಲಿದ್ದ ಇಬ್ಬರು 2009 ರಲ್ಲಿ ದೂರವಾಗಿದ್ರು.

View post on Instagram