ಮಾತು ಬಲ್ಲವನಿಗೆ ಜಗಳವಿಲ್ಲ ಅನ್ನೋ ಗಾದೆನೇ ಇದೆ. ಅನೇಕ ಕೆಲ್ಸಕ್ಕೆ ಮಾತೇ ಬಂಡವಾಳ. ಒಳ್ಳೆ ಮಾತುಗಾರರಾಗ್ಬೇಕು ಅಂದ್ರೆ ಹಾಲಿವುಡ್ ಸಿನಿಮಾ ನೋಡಿ 

ಸೋಶಿಯಲ್ ಮೀಡಿಯಾ (Social media) ಬಳಕೆ ಹೆಚ್ಚಾಗಿರು ಕಾರಣ ಮಕ್ಕಳಿಂದ ಹಿಡಿದು ಯುವಕರವರೆಗೆ ಬಹುತೇಕರು ಮಾತು ಮರೆತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಷನ್ ಮಾತ್ರ ಇರುತ್ತೆ. ನಾವದಕ್ಕೆ ರಿಯಾಕ್ಷನ್ ನೀಡುವ ಅಗತ್ಯ ಇರೋದಿಲ್ಲ. ರೀಲ್ಸ್, ಶಾರ್ಟ್ಸ್, ಮೆಸ್ಸೇಜ್ ನಲ್ಲಿ ಮುಳುಗಿ ಹೋಗಿರುವ ಯುವಕರಿಗೆ ಮಾತು ಅಂದಾಗ ಬೆವರು ಬರೋಕೆ ಶುರುವಾಗುತ್ತೆ. ಅನೇಕ ಬಾರಿ ಮುಂದಿದ್ದವನು ಮಾತನಾಡ್ತಿರ್ತಾನೆ, ಈತ ಬೆಪ್ಪನಂತೆ ನೋಡ್ತಿರ್ತಾನೆಯೇ ವಿನಃ ಮಾತನಾಡೋದಿಲ್ಲ. ಈಗಿನ ದಿನಗಳಲ್ಲಿ ಕಮ್ಯೂನಿಕೇಷನ್ ಸ್ಕಿಲ್ ಬಹಳ ಮುಖ್ಯ. ನಮ್ಮ ಭಾವನೆಗಳನ್ನು ಮಾತಿನ ಮೂಲಕ ಹೊರ ಹಾಕುವ ಟೈಂನಲ್ಲಿ ನಾವು ಪದಗಳಿಗೆ ತಡಕಾಡ್ತೇವೆ. ನಾವು ಹೇಳೋಕೆ ಹೊರಟಿರೋದೇ ಒಂದು ಹೇಳ್ತಿರೋದೇ ಒಂದು ಎನ್ನುವ ಸ್ಥಿತಿ ಅನೇಕ ಬಾರಿ ಒದಗಿ ಬರುತ್ತೆ. ಇದ್ರಿಂದ ನಮ್ಮ ಮಾತು ಕೇಳ್ತಿರುವ ವ್ಯಕ್ತಿ ನಮ್ಮನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈಗನ ಇಂಟರ್ವ್ಯೂಗಳಲ್ಲಿ ನಿಮ್ಮ ಮಾರ್ಕ್ಸ್ ಗಿಂತ ನಿಮ್ಮ ಕಮ್ಯೂನಿಕೇಷನ್ ಸ್ಕಿಲ್ ಹೇಗಿದೆ ಅನ್ನೋದನ್ನು ನೋಡ್ತಾರೆ. ನೀವು ಉದಾಹರಣೆ ಮೂಲಕ ಹಾಗೂ ಸ್ಪಷ್ಟವಾಗಿ ನಿಮ್ಮ ಅಭಿಪ್ರಾಯ ಮುಂದಿಟ್ಟಾಗ ನಿಮಗೆ ಸಿಗುವ ಮನ್ನಣೆ ಹೆಚ್ಚು.

ಹಾಲಿವುಡ್ (Hollywood) ಸಿನಿಮಾಗಳ ಮೂಲಕ ನೀವು ನಿಮ್ಮ ಕಮ್ಯೂನಿಕೇಷನ್ ಸ್ಕಿಲ್ ಹೆಚ್ಚು ಮಾಡ್ಕೊಳ್ಬಹುದು. ಬಾಯ್ಲರ್ ರೂಮ್ (Boiler Room) ಮತ್ತು ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ (The Wolf of Wall Street) ನಂತಹ ಸಿನಿಮಾ ಬಹುತೇಕರಿಗೆ ತಿಳಿದಿದೆ. ಕಮ್ಯೂನಿಕೇಷನ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಇದು ಉತ್ತಮ ಆಯ್ಕೆಯಾಗಿದೆ. ಇದಲ್ದೆ ಕೆಲ ಸಿನಿಮಾಗಳ ಪಟ್ಟಿ ಇಲ್ಲಿದೆ.

ಥ್ಯಾಂಕ್ಯೂ ಫಾರ್ ಸ್ಮೋಕಿಂಗ್ (Thank You for Smoking) : ವಿಡಂಬನಾತ್ಮಕ ಹಾಸ್ಯ ಸಿನಿಮಾ ತಂಬಾಕು ಉದ್ಯಮದ ಪ್ರತಿಭಾನ್ವಿತ ಲಾಬಿಸ್ಟ್ ನಿಕ್ ನೇಲರ್ ಅವ್ರ ಕಥೆ ಹೇಳ್ತದೆ. ಮಾತಿನಿಂದಲೇ ಜನರನ್ನು ಹೇಗೆ ಮರುಳು ಮಾಡೋದು ಎಂಬುದನ್ನು ಈ ಸಿನಿಮಾದಿಂದ ಕಲಿಯಬಹುದು. ಈ ಸಿನಿಮಾ ಪದಗಳ ಶಕ್ತಿಯನ್ನು ಹೇಳುತ್ತದೆ. ವಾದವನ್ನು ಹೇಗೆ ಮಂಡಿಸಬೇಕು, ನಿಮ್ಮ ಆತ್ಮವಿಶ್ವಾಸವನ್ನು ಹೇಗೆ ಹೆಚ್ಚಿಸಿಕೊಳ್ಬೇಕು ದೇಹ ಭಾಷೆ ಮತ್ತು ಸ್ವರದ ಏರಿಳಿತ ಹೇಗಿರಬೇಕು ಎಂಬುದನ್ನು ಇದು ಕಲಿಸುತ್ತದೆ.

ಯಸ್ ಮೆನ್ (Yes Man) : ಜಿಮ್ ಕ್ಯಾರಿ ನಟಿಸಿರುವ ಪ್ರಸಿದ್ಧ ಹಾಸ್ಯ ಸಿನಿಮಾ, ಪಾಸಿಟಿವ್ ವರ್ತನೆ ಹೇಗೆ ನಿಮ್ಮನ್ನು ಹೊಸ ಅವಕಾಶಕ್ಕೆ ತೆರೆದುಕೊಳ್ತದೆ ಎಂಬುದನ್ನು ತಿಳಿಸುತ್ತದೆ. ಬೇರೆಯವರ ಮಾತನ್ನು ಗಮನವಿಟ್ಟು ಕೇಳೋದು ಏಕೆ ಮುಖ್ಯ, ಕಂಫರ್ಟ್ ಝೂನ್ ನಿಂದ ಹೊರಬರುವುದು ಏಕೆ ಮುಖ್ಯ ಎಂಬುದನ್ನು ಹೇಳುತ್ತದೆ.

ಎ ಥೌಸಂಡ್ ವಲ್ಡ್ (A Thousand Words) : ಎಡ್ಡಿ ಮರ್ಫಿ ನಟಿಸಿರುವ ಈ ಸಿನಿಮಾ, ಒಂದೇ ಪದ, ಸಂಪೂರ್ಣ ವಾಕ್ಯಕ್ಕಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಈ ಸಿನಿಮಾ ಕೂಡ ದೇಹ ಭಾಷೆ ಮತ್ತು ಸನ್ನೆಗಳ ಪ್ರಾಮುಖ್ಯತೆ ಹೇಳುತ್ತದೆ. ಕ್ವಾಂಟಿಟಿ ಮಾತಿಗಿಂತ ಕ್ವಾಲಿಟಿ ಮಾತು ಮುಖ್ಯ ಎಂಬುದನ್ನು ಇದು ತಿಳಿಸುತ್ತದೆ.

ಸಕ್ಕರ್ಸ್ (Suckers): ಈ ಸಿನಿಮಾ ಕಾರು ಮಾರಾಟಕ್ಕೆ ಸಂಬಂಧಿಸಿದ ಕಥೆ ಹೇಳುತ್ತದೆ. ನಿಮ್ಮ ಮಾತು ಹೇಗೆ ಗ್ರಾಹಕರ ಮೇಲೆ ಪ್ರಭಾವ ಬೀರುತ್ತೆ ಎಂಬುದನ್ನು ಸಿನಿಮಾದಲ್ತಿಲಿ ಸ್ಪಷ್ಟವಾಗಿ ಹೇಳಲಾಗಿದೆ. ವಿಭಿನ್ನ ವ್ಯಕ್ತಿತ್ವಗಳಿಗೆ ಹೇಗೆ ಹೊಂದಿಕೊಳ್ಬೇಕು, ಜನರ ಅಗತ್ಯಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಈ ಸಿನಿಮಾ ಮೂಲಕ ಣೀವು ತಿಳಿಯಬಹುದು.