ಹಲವು ದಿನಗಳಿಂದ ಬಾಲಿವುಡ್ ನಟ ಗೋವಿಂದಾ ಹಾಗೂ ಪತ್ನಿ ಸುನೀತಾ ಅಹುಜಾ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ವದಂತಿ ಹರಡುತ್ತಿದೆ. ಇದೀಗ ಸುನೀತಾ ಅಹುಜಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಮುಂಬೈ (ಆ.22) ಬಾಲಿವುಡ್ ನಟ ಗೋವಿಂದ್ ಹಾಗೂ ಸುನೀತಾ ಅಹುಜಾ ದಾಂಪತ್ಯ ಜೀವನ ನೆಟ್ಟಗಿಲ್ಲ ಅನ್ನೋದು ಹಲವು ಬಾರಿ ವರದಿಯಾಗಿದೆ. ಇವರಿಬ್ಬರು ಬೇರೆಯಾಗಲು ನಿರ್ಧರಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಬೆಳವಣಿಗೆ ಬಳಿಕ ಗೋವಿಂದ್ ಹಾಗೂ ಅಹುಜಾ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ರೂಮರ್‌ಗೆ ಬ್ರೇಕ್ ಹಾಕಿದ್ದರು. ಆದರೆ ಇದೀಗ ಕೆಲ ಸ್ಫೋಟಕ ವರದಿ ಬಹಿರಂಗವಾಗಿದೆ. ಗೋವಿಂದಾ ತನೆಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲ ವ್ಯಭಿಚಾರದ ಆರೋಪ ಮಾಡಿ ಪತಿ ಗೋವಿಂದರಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
2 ಬಾರಿ ಕೋರ್ಟ್‌ಗೆ ಹಾಜರಾದ ಸುನೀತಾ ಅಹುಜಾ
ಆಂಗ್ಲ ಮಾಧ್ಯಮಗಳ ವರದಿ ಪ್ರಕರಾ, ಗೋವಿಂದಾ ಪತ್ನಿ ಸುನೀತಾ ಅಹುಜಾ ಹಿಂದೂ ವಿವಾಹ ಕಾಯ್ದೆ 1995ರ ಅಜಿಯಲ್ಲಿ ಸಕ್ಷೆನ್ 13 (1) (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಮೇ 25ರಂದು ಗೋವಿಂದಾಗೆ ಕೋರ್ಟ್ ಸಮನ್ಸ್ ನೀಡಿತ್ತು. ಜೂನ್ ತಿಂಗಳಿಂದ ಎರಡು ಬಾರಿ ಕೋರ್ಟ್ ವಿಚಾರಣೆ ನಡೆಸಿದೆ. ಆದರೆ ಗೋವಿಂದಾ ಎರಡೂ ಬಾರಿ ಗೈರಾಗಿದ್ದರೆ, ಸುನೀತಾ ಎರಡು ಬಾರಿ ಕೋರ್ಟ್‌ಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಸುನೀತಾ ಅಹುಜಾ ಹೇಳಿದ್ದೇನು?
ಇತ್ತೀಚೆಗಿನ ವ್ಲಾಗ್ ಒಂದರಲ್ಲಿ ಸುನೀತಾ ಅಹುಜಾ, ಗೋವಿಂದಾ ಜೊತೆಗಿನ ಡಿವೋರ್ಸ್ ರೂಮರ್ಸ್ ಕುರಿತು ಮೌನ ಮುರಿದಿದ್ದರು. ಮಹಾಲಕ್ಷ್ಮಿ ಮಂದಿರ ಮಂದಿರಕ್ಕೆ ತೆರಳಿರುವ ಈ ವ್ಲಾಗ್ ವಿಡಿಯೋದಲ್ಲಿ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಬಾಲ್ಯದಿಂದ ನಾನು ಮಹಾಲಕ್ಷ್ಮಿ ಮಂದಿರಕ್ಕೆ ಭೇಟಿ ನೀಡುತ್ತಿದ್ದೇನೆ, ದರ್ಶನ ಪಡೆಯುತ್ತಿದ್ದೇನೆ. ನನ್ನ ಎಲ್ಲಾ ಸುಖ ದುಖಗಳನ್ನು ಹಂಚಿಕೊಂಡಿದ್ದೇನೆ. ನನಗೆ ಪ್ರತಿ ಬಾರಿ ಮಹಾಲಕ್ಷ್ಮಿ ಮಂದಿರ ಮಾತೆ ಬೆನ್ನೆಲುಬಾಗಿ ನಿಂತಿದೆ. ನಾನು ಮೊದಲ ಬಾರಿಗೆ ಗೋವಿಂದಾ ಭೇಟಿಯಾದ ಬಳಿಕ ದೇವರಲ್ಲಿ ಬೇಡಿಕೊಂಡಿದ್ದೆ. ನಾನು ಗೋವಿಂದಾ ಅವರನ್ನೇ ಮದುವೆಯಾಗುತ್ತೇನೆ. ಉತ್ತಮ ದಾಂಪತ್ಯ ಜೀವನ ಕರುಣಿಸು ಎಂದು ಬೇಡಿಕೊಂಡಿದ್ದೆ. ದೇವರು ನನಗೆ ಉತ್ತಮ ಜೀವನ ಮಾತ್ರವಲ್ಲ ಇಬ್ಬರು ಮಕ್ಕಳನ್ನು ನೀಡಿದರೂ, ನನ್ನ ಎಲ್ಲಾ ಬೇಡಿಕೆಯನ್ನೂ ಪೂರೈಸಿದ್ದರು. ಸತ್ಯ ಜೀವನದಲ್ಲಿ ಒಳ್ಳೆಯದು. ಸೋಲು ಗೆಲುವು ಜೀವನದ ಭಾಗವಾಗಿದೆ. ಈಗಲೂ ನನಗೆ ದೇವರಲ್ಲಿ ನಂಬಿಕೆ ಇದೆ. ಎಲ್ಲೂ ಒಳ್ಳೆಯದಾಗಲಿದೆ ಎಂದು ಸುನೀತಾ ಅಹುಜಾ ಹೇಳಿದ್ದಾರೆ. ನನ್ನ ಕುಟುಂಬವನ್ನು ಒಢೆಯಲು ಪ್ರಯತ್ನಿಸುವವರಿಗೆ ಕಾಳಿ ಮಾತೆ ಪಾಠ ಕಲಿಸಲಿದೆ ಎಂದು ಸುನೀತಾ ಅಹುಜಾ ವ್ಲಾಗ್‌ನಲ್ಲಿ ಹೇಳಿದ್ದಾರೆ.
ಫೆಬ್ರವರಿ ತಿಂಗಳಿನಿಂದ ಗೋವಿಂದಾ ಹಾಗೂ ಸುನೀತಾ ಅಹುಜಾ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ, ಡಿವೋರ್ಸ್ ಮಾತುಗಲು ಕೇಳಿಬಂದಿತ್ತು. ನಟ ಗೋವಿಂದ 30 ವರ್ಷದ ಮರಾಠಿ ನಟಿ ಜೊತೆ ಹೆಚ್ಚು ಆತ್ಮೀಯರಾಗಿದ್ದಾರೆ. ಇದೇ ಕಾರಣದಿಂದ ಸುನೀತಾ ಅಹುಜಾ ಹಾಗೂ ಗೋವಿಂದಾ ನಡುವೆ ಕಿತ್ತಾಟಗಳು ನಡೆದಿತ್ತು ಎಂದು ಹಲವು ಮಾಧ್ಯಮಗಳ ವರದಿ ಮಾಡಿತ್ತು. ಇದರ ನಡುವೆ ಗೋವಿಂದಾ ಹಾಗೂ ಸುನೀತಾ ಅಹುಜಾ ಕುಟುಂಬದ ಆತ್ಮೀಯ ಲಲಿತ್ ಬಿಂಡಾಲ್ ಊಹಾಪೋಹಕ್ಕೆ ತೆರೆ ಎಳೆದಿದ್ದರು. ಇಬ್ಬರು ಜೊತೆಯಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ಮಾಧ್ಯಮಗಳು ಇಲ್ಲ ಸಲ್ಲದ ವರದಿ ಮಾಡುತ್ತಿದೆ. ಅವರ ಖಾಸಗಿ ಬದುಕಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು.
