- Home
- Entertainment
- TV Talk
- 7 ವರ್ಷಗಳ ಹಿಂದೆ ಬಿದಿರಿನ ಮನೆ; ಇಂದು ಡುಪ್ಲೆಕ್ಸ್ ಹೌಸ್, ಅತಿ ದುಬಾರಿ ಕಾರ್! ಇಷ್ಟು ಹಣ ಮಾಡಿದ್ದು ಹೇಗೆ?
7 ವರ್ಷಗಳ ಹಿಂದೆ ಬಿದಿರಿನ ಮನೆ; ಇಂದು ಡುಪ್ಲೆಕ್ಸ್ ಹೌಸ್, ಅತಿ ದುಬಾರಿ ಕಾರ್! ಇಷ್ಟು ಹಣ ಮಾಡಿದ್ದು ಹೇಗೆ?
ಭಾರತದ ಅತಿದೊಡ್ಡ ಯೂಟ್ಯೂಬರ್‌ಗಳಲ್ಲಿ ಮನೋಜ್ ಡೇ ಕೂಡ ಒಬ್ಬರು. ಏಳು ವರ್ಷಗಳ ಹಿಂದೆ ಬಿದಿರಿನ ಮನೆಯಲ್ಲಿ ವಾಸ ಮಾಡುತ್ತಿದ್ದ ಮನೋಜ್ ಡೇ, ಇಂದು ಡುಪ್ಲೆಕ್ಸ್ ಹೌಸ್ ಮಾಲೀಕರಾಗಿದ್ದಾರೆ.

2023 ಮಾರ್ಚ್ 16 ಮನೋಜ್ ಡೇ, ಜ್ಯೋತಿ ಶ್ರೀ ಮದುವೆಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಇಂದು ಬೆಂಜ್ ಕಾರ್, ಡುಪ್ಲೆಕ್ಸ್ ಮನೆ ಕೂಡ ಖರೀದಿಸಿದ್ದಾರೆ. ಇವರ ಯಶಸ್ಸು ನೋಡಿ ಎಂಥವರು ಕೂಡ ಮೆಚ್ಚುಗೆ ಸೂಚಿಸುತ್ತಾರೆ.
ಇಂದು ಮನೋಜ್ ಹಾಗೂ ಜ್ಯೋತಿ ಮನೆಯವರು ಇವರನ್ನು ಒಪ್ಪಿಕೊಂಡಿದ್ದಾರೆ. ತಂದೆ-ತಾಯಿಯನ್ನು ಇವರು ಒಂದು ದಿನ ವಿಮಾನದಲ್ಲಿ ಹಾರಾಟ ಮಾಡಿಸಿದ್ದುಂಟು. ಈಗ ಇಡೀ ಕುಟುಂಬ ಚೆನ್ನಾಗಿ ಬದುಕುತ್ತಿದೆ.
ಮನೋಜ್ ಡೇ ಜುಲೈ 12, 1996 ರಂದು ಜಾರ್ಖಂಡ್‌ನ ಜೈರಾದಲ್ಲಿ ಜನಿಸಿದ್ದಾರೆ. ಇವರ ತಂದೆ ಧನ್‌ಬಾದ್‌ನಲ್ಲಿ ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಧ್ಯಮ ವರ್ಗದವರು, ಆರ್ಥಿಕವಾಹಿ ಹಿಂದುಳಿದಿದ್ದರು.
ಜ್ಯೋತಿಶ್ರೀ ಕೂಡ ಯುಟ್ಯೂಬರ್. ಇವರಿಬ್ಬರು ಪರಿಚಯ ಆಗಿ ಮದುವೆ ಆಗುತ್ತೇವೆ ಎಂದಾಗ ಎರಡೂ ಕುಟುಂಬ ಒಪ್ಪಲಿಲ್ಲ. ಎಷ್ಟೇ ಬಾರಿ ಹೇಳಿದರೂ ಕೂಡ ಎರಡು ಕುಟುಂಬಗಳು ಒಪ್ಪಲಿಲ್ಲ. ಆದರೂ ಇವರು ಮದುವೆ ಆಗಿದ್ದರು.
ನೀವು ಯೂಟ್ಯೂಬ್ ಚಾನೆಲ್‌ಗೆ ವೀಡಿಯೊ ಅಪ್‌ಲೋಡ್ ಮಾಡುವ ಸರಿಯಾದ ಕ್ರಮ ಯಾವುದು? ಯೂಟ್ಯೂಬ್‌ನಲ್ಲಿ ಹೇಗೆ ವಿಡಿಯೋವನ್ನು ಅಪ್‌ಲೋಡ್ ಮಾಡುವುದು? ಜೊತೆಗೆ ಟ್ರೆಂಡಿಂಗ್ ವಿಷಯಗಳು, ವೈಯಕ್ತಿಕ ವಿಷಯಗಳ ಕುರಿತು ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ.