6 Indian petroleum companies banned by the US: ಭಾರತದ ಆರು ಪೆಟ್ರೋಲಿಯಂ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.  ಭಾರತದ ಜೊತೆ ಒಟ್ಟು 20 ಕಂಪನಿಗಳ ಮೇಲೆ ಅಮೆರಿಕ ನಿಷೇಧಿಸಿದೆ.

DID YOU
KNOW
?
ಅಮೆರಿಕ ನಿರ್ಧಾರ ಪ್ರಕಟ
ಭಾರತದ ಜೊತೆ ಒಟ್ಟು 20 ಕಂಪನಿಗಳ ಮೇಲೆ ಅಮೆರಿಕ ನಿಷೇಧಿಸಿದೆ.

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ದೊಡ್ಡ ಹೊಡೆತವನ್ನು ನೀಡಿದ್ದಾರೆ. ಭಾರತದ 6 ಪೆಟ್ರೋಲಿಯಂ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ. ನಿಷೇಧಕ್ಕೊಳಗಾಗಿರುವ ಭಾರತದ 6 ಕಂಪನಿಗಳು ಇರಾನ್ ಜೊತೆ ವ್ಯವಹಾರ ನಡೆಸುತ್ತಿದ್ದವು ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳುತ್ತಿದೆ. NDTV ವರದಿಯ ಪ್ರಕಾರ, ಇರಾನ್ ದೇಶ ತನ್ನ ಆದಾಯ ಬಹುದೊಡ್ಡ ಭಾಗವನ್ನು ಪ್ರಾದೇಶಿಕ ಸಂಘರ್ಷ ಉತ್ತೇಜಿಸಲು ಖರ್ಚು ಮಾಡುತ್ತಿದೆ. ಇರಾನ್ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಉತ್ತೇಜಿಸುವ ಕೆಲಸವನ್ನು ಇರಾನ್ ಸರ್ಕಾರ ಮಾಡುತ್ತಿದ್ದು, ದೇಶಗಳಲ್ಲಿ ಅಸ್ಥಿರತೆಯನ್ನು ಹರಡಲು ಹಣವನ್ನು ಬಳಸುವ ಮೂಲಕ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ತನ್ನ ಜನರನ್ನು ದಮನಿಸಲು ಬಳಸಲು ಇರಾನ್ ಸರ್ಕಾರ ಬಳಕೆ ಮಾಡುತ್ತಿರುವ ಆದಾಯದ ಮೂಲವನ್ನು ತಡೆಯಲು ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಹೇಳಿಕೆ ನೀಡಿದ್ದಾರೆ. ಇರಾನ್ ಜೊತೆ ವ್ಯವಹಾರ ನಡೆಸುತ್ತಿರುವ ಭಾರತದ 6 ಕಂಪನಿಗಳು ಸೇರಿದಂತೆ ಒಟ್ಟು 20 ಕಂಪನಿಗಳನ್ನು ಅಮೆರಿಕ ನಿಷೇಧಿಸಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬುಧವಾರ ಹೇಳಿದೆ.

ಅಮೆರಿಕ ನಿಷೇಧಿಸಿರುವ ಭಾರತದ 6 ಪೆಟ್ರೋಲಿಯಂ ಕಂಪನಿಗಳು

  1. ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್
  2. ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್
  3. ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್
  4. ರಾಮ್ನಿಕ್ಲಾಲ್ ಎಸ್ ಗೋಸಾಲಿಯಾ & ಕಂಪನಿ
  5. ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್
  6. ಕಾಂಚನ್ ಪಾಲಿಮರ್ಸ್ ಕಂಪನಿ

1. ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್

ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಜನವರಿಯಿಂದ ಡಿಸೆಂಬರ್ 2024 ರ ನಡುವೆ ಇರಾನ್‌ನಿಂದ $84 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.

2. ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್

ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ ಜುಲೈ 2024 ರಿಂದ ಜನವರಿ 2025 ರ ನಡುವೆ ಇರಾನ್‌ನಿಂದ ಮೆಥನಾಲ್ ಸೇರಿದಂತೆ $51 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.

3. ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್

ಈ ಕಂಪನಿಯು ಜನವರಿ 2024 ರಿಂದ ಜನವರಿ 2025 ರ ನಡುವೆ ಇರಾನ್‌ನಿಂದ $49 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿದೆ ಎಂಬ ಆರೋಪ ಮಾಡಲಾಗಿದೆ.

4. ರಾಮ್ನಿಕ್ಲಾಲ್ ಎಸ್ ಗೋಸಾಲಿಯಾ & ಕಂಪನಿ

ಈ ಕಂಪನಿಯು ಜನವರಿ 2024 ರಿಂದ ಜನವರಿ 2025 ರ ನಡುವೆ ಇರಾನ್‌ನಿಂದ $22 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.

5. ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್

ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅಕ್ಟೋಬರ್ 2024 ರಿಂದ ಡಿಸೆಂಬರ್ 2024 ರ ನಡುವೆ ಇರಾನ್‌ನಿಂದ ಸುಮಾರು $14 ಮಿಲಿಯನ್ ಮೌಲ್ಯದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ( ಮೆಥನಾಲ್) ಖರೀದಿಸಿದೆ ಎಂದು ಅಮೆರಿಕ ಹೇಳಿದೆ.

6. ಕಾಂಚನ್ ಪಾಲಿಮರ್ಸ್: ಈ ಕಂಪನಿಯು ಇರಾನ್‌ನಿಂದ $1.3 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸಿ ಎಂದು ಆರೋಪಿಸಲಾಗಿದೆ.

ಭಾರತದ ಜೊತೆಯಲ್ಲಿ ನಿಷೇಧಕ್ಕೊಳಾಗದ ಇನ್ನುಳಿದ ಕಂಪನಿಗಳು

ಅಮೆರಿಕ ಸರ್ಕಾರ ಭಾರತದ ಜೊತೆಗೆ ಟರ್ಕಿ, ಯುಎಇ, ಚೀನಾ ಮತ್ತು ಇಂಡೋನೇಷ್ಯಾ ಸೇರಿದಂತೆ ಇತರ ದೇಶಗಳ ಕಂಪನಿಗಳನ್ನು ಸಹ ನಿಷೇಧಿಸಿದೆ. ಈ ದೇಶಗಳ ಕಂಪನಿಗಳು ಇರಾನ್‌ನೊಂದಿಗೆ ವ್ಯವಹಾರ ನಡೆಸುತ್ತಿವೆ ಎಂದು ಅಮೆರಿಕ ಹೇಳಿದೆ. ಇರಾನ್ ಆದಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿಕೊಂಡಿದೆ.