153.59 ಕೋಟಿ ರೂಗೆ ಅಮೆರಿದ ಪ್ರಖ್ಯಾತ ಟ್ರೈಬೆಕಾ ಮಾನ್ಶನ್ ಬಿಲ್ಡಿಂಗ್ ಖರೀದಿಸಿದ ಅಂಬಾನಿ. ರಾಬರ್ಟ್ ಪೆರೆರಾರಿಂದ ಮುಕೇಶ್ ಅಂಬಾನಿ ಈ ನಾಲ್ಕು ಅಂತಸ್ತಿನ ಕಟ್ಟಡ ಖರೀದಿಸಿದ್ದಾರೆ. ಅಮೆರಿಕದಲ್ಲಿ ಗರಿಷ್ಠ ವಿಸ್ತೀರ್ಣದ ಕಡ್ಡದ ಹೊಂದಿದೆ ಭಾರತೀಯ.
ನ್ಯೂಯಾರ್ಕ್ (ಸೆ.14) ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿರುವ ಎರಡು ಬೆಡ್ ರೂಂ ಮನೆಯೊಂದನ್ನು ಮಾರಾಟ ಮಾಡಿದ್ದರು. ಮುಕೇಶ್ ಅಂಬಾನಿಗೆ ನಗದು ಹಣದ ಕೊರತೆ ಎದುರಾಯ್ತಾ ಅನ್ನೋ ಮಾತುಗಳು ಕೇಳಿಬಂದಿತ್ತು. ಬರೋಬ್ಬರಿ 9 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತಕ್ಕೆ ಮುಕೇಶ್ ಅಂಬಾನಿ ಈ ಮನೆ ಮಾರಾಟ ಮಾಡಿದ್ದರು. ಮುಕೇಶ್ ಅಂಬಾನಿ ಉದ್ಯಮ, ವ್ಯವಹಾರ ವಿಸ್ತರಣೆ ವಿಚಾರದಲ್ಲಿ ಅತೀವ ಮುತುವರ್ಜಿ ವಹಿಸುತ್ತಾರೆ. ಒಂದು ರೂಪಾಯಿ ಹೂಡಿಕೆ ಮಾಡಿದರೆ 10 ರೂಪಾಯಿ ಆದಾಯ ತೆಗೆಯುತ್ತಾರೆ. 9 ಮಿಲಿಯನ್‌ಗೆ ಮನೆ ಮಾರಾಟ ಮಾಡಿದಾಗ ಮುಕೇಶ್ ಅಂಬಾನಿ ನಿರ್ಧಾರ ಯಾರಿಗೂ ಅರ್ಥವಾಗಿರಲಿಲ್ಲ. ಇದೀಗ ಬರೋಬ್ಬರಿ 17.4 ಮಿಲಿಯನ್ ಅಮೆರಿಕನ್ ಡಾಲರ್ ನೀಡಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಜನಪ್ರಿಯ ಟ್ರೈಬೆಕಾ ಮಾನ್ಶನ್ ಬಿಲ್ಡಿಂಗ್ ಖರೀದಿಸಿದ್ದಾರೆ.
1,53,59,58,645 ರೂಪಾಯಿಗೆ ಕಟ್ಟಡ ಖರೀದಿ
17.4 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 1,53,59,58,645 ರೂಪಾಯಿ ನೀಡಿ ಈ ನಾಲ್ಕು ಅಂತಸ್ತಿನ ಕಟ್ಟಡ ಖರೀದಿಸಿದ್ದಾರೆ. ಸಂಕ್ಷಿಪ್ತವಾಗಿ 153.59 ಕೋಟಿ ರೂಪಾಯಿ ನೀಡಿ ಈ ಕಟ್ಟಡ ಖರೀದಿಸಿದ್ದಾರೆ. 11 ಹ್ಯೂಬರ್ಟ್ ಸ್ಟ್ರೀಟ್‌ನಲ್ಲಿರುವ ಈ ಕಟ್ಟಡ ಕಳೆದ ಕೆಲ ವರ್ಷಗಳಿಂದ ಖಾಲಿಯಾಗಿತ್ತು. ರಾಬರ್ಟ್ ಪೆರಾ ಈ ಕಟ್ಟಡ ಮಾಲೀಕರಾಗಿದ್ದರು. ಈ ಕಡ್ಡವನ್ನು ಮ್ಯಾನ್ಶನ್ ಹೌಸ್ ಆಗಿ ಪರಿವರ್ತಿಸಲು ರಾಬರ್ಟ್ ಪ್ರಯತ್ನಿಸಿದ್ದರು. ಬಳಿಕ ಯೋಜನೆ ಕೈಬಿಟ್ಟಿದ್ದರು. ಇದೀಗ ಮುಕೇಶ್ ಅಂಬಾನಿ ಅತೀ ದುಬಾರಿ ಬೆಲೆಗೆ ಈ ಕಟ್ಟಡ ಖರೀದಿಸಿದ್ದಾರೆ.
ನನ್ನ ಲೈಫ್ ಗುಲಾಬಿ ಹಾಸಿಗೆಯಾಗಿರಲಿಲ್ಲ, ಅನಂತ್ ಭಾವುಕ ಮಾತಿಗೆ ಕಣ್ಣೀರಾದ ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿಗೆ ಜಾಕ್‌ಪಾಟ್
ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡೆ ಯುಎಸ್ ಈ ಕಟ್ಟಡ ಖರೀದಿಸಿ ರಿಜಿಸ್ಟ್ರೇಶನ್ ಮಾಡಿಕೊಂಡಿದೆ. ಟೆಕ್ ಕೋಟ್ಯಾಧಿಪತಿ ರಾಬರ್ಟ್ ಪೆರಾಈ ಕಡ್ಡಡ ಮಾಲೀಕರಾಗಿದ್ದರು. ಯುಬಿಕ್ವಿಡಿ ಸಂಸ್ಥೆಯ ಚೇರ್ಮೆನ್ ಆಗಿರಿ ರಾಬರ್ಟ್ ಪೆರಾ ಈ ಕಟ್ಟಡವನ್ನು 2018ರಲ್ಲಿ 20 ಮಿಲಿಯನ್ ಅಮರಿಕನ್ ಡಾಲರ್‌ಗೆ ಖರೀದಿಸಿದ್ದರು. 2021ರಲ್ಲಿ ಈ ಕಟ್ಟಡ ಮಾರಾಟಕ್ಕಿಟ್ಟಿದ್ದರು. ಆದರೆ ರಾಬರ್ಟ್ ಬೆಲೆಗೆ ಯಾರೂ ಖರೀದಿಗೆ ಮುಂದಾಗಿರಲಿಲ್ಲ. ಇದೀಗ ರಾಬರ್ಟ್ ಪೆರಾ 17.4 ಮಿಲಿಯನ್ ಅಂದರೆ ತಾವು ಖರೀದಿಸಿದ ಮೊತ್ತಕ್ಕಿಂತ 2.6 ಮಿಲಿಯನ್ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ.
2 ಲಕ್ಷ ಚದರ ಅಡಿ ಕಟ್ಟಡ
ಮುಕೇಶ್ ಅಂಬಾನಿ ನ್ಯೂಯಾರ್ಕ್ ಸಿಟಿಯಲ್ಲಿ ಖರೀದಿಸಿದ ಟ್ರೈಬೆಕಾ ಮಾನ್ಶನ್ ಬರೋಬ್ಬರಿ 2 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ. ನಾಲ್ಕು ಅಂತಸಿತ್ತಿನ ಅತೀ ದೊಡ್ಡ ಕಟ್ಟಡ ಇದಾಗಿದೆ. ಜೊತೆಗೆ ಪ್ರಮುಖ ರಸ್ತೆಯಲ್ಲೇ ಈ ಕಟ್ಟಡವಿದೆ. ಅಮೆರಿಕದ ನ್ಯೂಯಾರ್ಕ ನಗರದಲ್ಲಿ ಅತೀ ಹೆಚ್ಚಿನ ವಿಸ್ತೀರ್ಣದ ಕಟ್ಟಡದ ಹೊಂದಿದ ಭಾರತೀಯ ಅನ್ನೋ ಹೆಗ್ಗಳಿಕೆಗೂ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ.
ಅಮೆರಿಕದಲ್ಲಿ ರಿಲಯನ್ಸ್ ಕಚೇರಿ
ನ್ಯೂಯಾರ್ಕ್ ಸಿಟಿಯಲ್ಲಿ ಕಟ್ಟಡ ಖರೀದಿಸಿರುವ ಮುಕೇಶ್ ಅಂಬಾನಿ ತಮ್ಮ ಕಚೇರಿಯನ್ನು ವಿಸ್ತರಿಸಲು ಸಜ್ಜಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಅತೀ ದೊಡ್ಡ ಕಚೇರಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಉದ್ಯಮ ವ್ಯವಹಾರ ವಿಸ್ತರಿಸಲು ಈ ಕಟ್ಟಡ ಖರೀದಿಸಿರುವ ಸಾಧ್ಯತೆ ಇದೆ. ಇತ್ತೀಚೆಗೆ ಮುಕೇಶ್ ಅಂಬಾನಿ ಹಾಗೂ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಬ್ಯೂಸಿನೆಸ್ ಕಾನ್ಫರೆನ್ಸ್‌ನಲ್ಲಿ ಭೇಟಿಯಾಗಿದ್ದರು.
ಟ್ಯಾಕ್ಸ್ ಫೈಲಿಂಗ್ ಮಾಡುವವರಿಗೆ ಗುಡ್ ನ್ಯೂಸ್, ಜಿಯೋಫೈನಾನ್ಸ್‌ನಲ್ಲಿ ಕೇವಲ 24 ರೂಗೆ ಟ್ಯಾಕ್ಸ್ ಫೈ
