Income Tax ಫೈಲ್ ಮಾಡಲು ಇಂದೇ ಕೊನೆಯ ದಿನ. ಗಡುವು ವಿಸ್ತರಣೆಯಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ತಪ್ಪಿದರೆ ದಂಡ ತೆರಬೇಕಾಗುತ್ತದೆ.
ನಿಮ್ಮ ಆದಾಯ ತೆರಿಗೆ ರಿಟರ್ನ್ (ITR Retrun) ಸಲ್ಲಿಸುವ ಗಡುವು ಇಂದಿಗೆ ಅರ್ಥಾತ್ ಸೆಪ್ಟೆಂಬರ್ 15ಕ್ಕೆ ಮುಗಿಯಲಿದೆ. ಆದಾಯ ತೆರಿಗೆ ಇಲಾಖೆ X ರಂದು ಪೋಸ್ಟ್‌ನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ಯಾವುದೇ ಕಾರಣಕ್ಕೂ ಐಟಿಆರ್ ಸಲ್ಲಿಕೆ ಅಂತಿಮ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಇಲಾಖೆಯು ದೃಢಪಡಿಸಿದೆ. ಹಲವರು ಕೊನೆಯ ಕ್ಷಣದ ರಶ್ನಿಂದಾಗಿ ಒಂದೇ ಸಲಕ್ಕೆ ITR ಫೈಲ್ ಮಾಡಲು ಹೊರಟಿದ್ದರಿಂದ ವೀಕೆಂಡ್ಗಳಲ್ಲಿ ಹಲವರಿಗೆ ಇದನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ ದೂರುಗಳೂ ಬಂದಿದ್ದವು. ಇದರ ಹೊರತಾಗಿಯೂ, ಇದಾಗಲೇ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ ( There will be no extension to the ITR Filing deadline Sept 15th is last date) ಎಂದು ಇಲಾಖೆ ಹೇಳಿದೆ. ಗಡುವು ವಿಸ್ತರಿಸಲಾಗಿದೆ ಎಂದು ಸುಳ್ಳು ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನು ನಂಬದಂತೆ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: Deceased Tax Return: ಮೃತರ ಆದಾಯ ತೆರಿಗೆ ಪಾವತಿ ಮಾಡುವುದು ಹೇಗೆ? ಹಂತ ಹಂತದ ಮಾಹಿತಿ ಇಲ್ಲಿದೆ...
ಸೆಪ್ಟೆಂಬರ್ 15 ರ ಗಡುವನ್ನು ತಪ್ಪಿಸಿಕೊಂಡರೆ ಏನಾಗುತ್ತದೆ?
ನೀವು ಇನ್ನೂ ನಿಮ್ಮ ITR ಸಲ್ಲಿಸದಿದ್ದರೆ, ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು ಅದನ್ನು ಸಲ್ಲಿಸಿ. ಒಂದು ವೇಳೆ ಇವತ್ತು ಅರ್ಥಾತ್ ಸೆಪ್ಟೆಂಬರ್ 15 ರ ಗಡುವನ್ನು ತಪ್ಪಿಸಿಕೊಂಡರೆ ನಿಮಗೆ ಭಾರಿ ನಷ್ಟ ಆಗಲಿದೆ. ಏಕೆಂದರೆ ನಿಮಗೆ ದಂಡ ಬೀಳಲಿದೆ. ಇದಾಗಲೇ ಇನ್ಕಮ್ ಟ್ಯಾಕ್ಸ್ನಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದ್ದು, ಯಾವಾಗ ಬೇಕಾದರೂ ITR ಸಲ್ಲಿಕೆಗೆ ಅವಕಾಶವಿದೆ. ಆದರೆ ಅದು ಮುಂದಿನ ವರ್ಷದಿಂದ ಜಾರಿಯಾಗುತ್ತದೆಯೇ ವಿನಾ ಈ ವರ್ಷ ಅಲ್ಲ.
ಆದ್ದರಿಂದ ಸೆಪ್ಟೆಂಬರ್ 15 ರೊಳಗೆ ಅಂದರೆ ಇಂದು ತಮ್ಮ ಐಟಿಆರ್ ಸಲ್ಲಿಸಲು ವಿಫಲವಾದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ತೆರಿಗೆದಾರರಿಗೆ ದಂಡ ವಿಧಿಸಲಾಗುತ್ತದೆ. ಗಡುವಿನೊಳಗೆ ನಿಮ್ಮ ಐಟಿಆರ್ ಸಲ್ಲಿಸಲು ತಪ್ಪಿದರೆ, ನಿಮ್ಮ ಆದಾಯವು ಒಂದು ವೇಳೆ 5 ಲಕ್ಷ ಮೀರಿದರೆ ನೀವು ಪಾವತಿಸಬೇಕಾದ ದಂಡವು 5,000 ವರೆಗೆ ಇರಬಹುದು, ಕಡಿಮೆ ಆದಾಯ ಹೊಂದಿರುವವರಿಗೆ, ಸೆಕ್ಷನ್ 234F ಅಡಿಯಲ್ಲಿ 1,000 ದಂಡ ವಿಧಿಸಲಾಗುತ್ತದೆ.
ದಂಡ ಸಹಿತ ಪಾವತಿಗೆ ಗಡುವು
ದಂಡ ಸಹಿತಿ ಐಟಿಆರ್ ಫೈಲ್ ಮಾಡಲು ಡಿಸೆಂಬರ್ 31, 2025 ರವರೆಗೆ ಅವಧಿ ಇದೆ. ಆದರೆ ನವೀಕರಿಸಿದ ರಿಟರ್ನ್ಸ್ (ITR-U) ಅನ್ನು ಮಾರ್ಚ್ 31, 2030 ರವರೆಗೆ ಸಲ್ಲಿಸಬಹುದು. ನೀವು ಗಡುವಿನೊಳಗೆ ITR ಅನ್ನು ಸಲ್ಲಿಸಲು ವಿಫಲವಾದರೆ ಮತ್ತು ಇನ್ನೂ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿದ್ದರೆ, I-T ಕಾಯ್ದೆಯ ಸೆಕ್ಷನ್ 234A ಅಡಿಯಲ್ಲಿ ಪಾವತಿಸದ ತೆರಿಗೆ ಮೊತ್ತದ ಮೇಲೆ ನಿಮಗೆ ಬಡ್ಡಿ ವಿಧಿಸಲಾಗುತ್ತದೆ. ಇದು ರಿಟರ್ನ್ ಫೈಲಿಂಗ್ ಅಂತಿಮ ದಿನಾಂಕದಿಂದ ನಿಜವಾದ ಫೈಲಿಂಗ್ ದಿನಾಂಕದವರೆಗೆ ಲೆಕ್ಕಹಾಕಿ ಪಾವತಿಸದ ತೆರಿಗೆಯ ಮೇಲೆ ಪ್ರತಿ ತಿಂಗಳು 1 ಪ್ರತಿಶತದಷ್ಟು ಸರಳ ಬಡ್ಡಿಯನ್ನು ಪಾವತಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
ITR ಅನ್ನು ಹೇಗೆ ಸಲ್ಲಿಸುವುದು?
-ಅಧಿಕೃತ ಆದಾಯ ತೆರಿಗೆ ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಗೆ ಹೋಗಿ
-ನಿಮ್ಮ ಬಳಕೆದಾರ ID (PAN/Aadhaar) ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ
-ITR ಫೈಲಿಂಗ್ ವಿಭಾಗಕ್ಕೆ ಹೋಗಿ
-ಅನ್ವಯವಾಗುವ ಮೌಲ್ಯಮಾಪನ ವರ್ಷ ಮತ್ತು ರಿಟರ್ನ್ಸ್ ಸಲ್ಲಿಸುವ ವಿಧಾನವನ್ನು ಆರಿಸಿ.
-ಫೈಲಿಂಗ್ ಸ್ಥಿತಿಯನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಆಯ್ಕೆಮಾಡಿ ಮತ್ತು ಹೊಸ ಫೈಲಿಂಗ್ ಅನ್ನು ಪ್ರಾರಂಭಿಸಿ
-ನಿಮ್ಮ ಆದಾಯ ಮತ್ತು ಆದಾಯ ವಿಧಾನದ ಪ್ರಕಾರ ಸರಿಯಾದ ಐಟಿಆರ್ ಫಾರ್ಮ್ ಅನ್ನು ಆರಿಸಿ
-ಮಾಹಿತಿಯನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ
-ಬಾಕಿ ಇರುವ ತೆರಿಗೆಗಳನ್ನು ಪಾವತಿಸಿ
-ಸಲ್ಲಿಸಿ ಮತ್ತು ನಂತರ ಇ-ಪರಿಶೀಲಿಸಿ.
ಇದನ್ನೂ ಓದಿ: ಖಾಸಗಿ ಸ್ಥಳದಲ್ಲಿ ವಾಹನ ಬಳಸ್ತಿದ್ರೆ ತೆರಿಗೆ ವಿಧಿಸುವಂತಿಲ್ಲ! ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು
