ವೃತ್ತಿಜೀವನದ ಆರಂಭದಲ್ಲಿ ₹20 ಲಕ್ಷ ಗಳಿಸಲು ಬೇಕಾದ ಕೌಶಲ್ಯ, ಲಾಭದಾಯಕ ಹುದ್ದೆಗಳು ಮತ್ತು ತಂತ್ರಗಳನ್ನು ತಿಳಿಯಿರಿ. AI/ML, ಸೈಬರ್‌ಸೆಕ್ಯುರಿಟಿ, ವೆಬ್ ಅಭಿವೃದ್ಧಿಯಂತಹ ಬೇಡಿಕೆಯ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಿ .

How to earn 20 lakhs Rupees: ವೃತ್ತಿ ಜೀವನದ ಮೊದಲ ವರ್ಷದಲ್ಲಿ 20 ಲಕ್ಷ ರೂಪಾಯಿ ಹಣ ಸಂಪಾದಿಸುವ ಗುರಿ ನಿಮ್ಮದಾಗಿದೆಯಾ? ಕೆಲವರು ಇದನ್ನು ಕಷ್ಟ ಅಂತಾರೆ. ಮಹತ್ವಾಕಾಂಕ್ಷಿಗಳು ಕಷ್ಟವಾದ್ರೂ ಅಸಾಧ್ಯವೇನು ಅಲ್ಲ ಎಂಬ ಮಾತುಗಳನ್ನು ಹೇಳುತ್ತಾರೆ. ವೃತ್ತಿಜೀವನ ಆರಂಭದ ಮೊದಲ ವರ್ಷದಲ್ಲಿ 20 ಲಕ್ಷ ನಿಮ್ಮದಾಗಬೇಕಾದ್ರೆ ಪ್ಲಾನ್, ಕೌಶಲ್ಯ ಅಭಿವೃದ್ಧಿ ಮತ್ತು ಸಾಧಿಸುವ ಛಲ (Quires Strategic Planning, Skill Development, and Dedication) ನಿಮ್ಮದಾಗಿರಬೇಕಾಗುತ್ತದೆ. ಈ ಗುರಿಯನ್ನು ಸಾಧಿಸಲು ಯಾವೆಲ್ಲಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅವುಗಳನ್ನು ಹೇಗೆ ಕಾರ್ಯಗತ ಮಾಡಬೇಕೆಂಬ ಜಾಣ್ಮೆ ಹೊಂದಿರಬೇಕು.

ಈ ಕೌಶಲ್ಯಗಳನ್ನು ನಿಮ್ಮದಾಗಿಸಿಕೊಳ್ಳಿ (In-Demand Skills)

AI/ML: ಹೆಚ್ಚು ಸಂಬಳದ ಉದ್ಯೋಗ ಬೇಕಾದ್ರೆ ಕೆಲವು ಕೌಶಲ್ಯಗಳು ನಿಮ್ಮದಾಗಿಸಿಕೊಳ್ಳಬೇಕು. ಹಾಗಾಗಿ ಸದ್ಯ ಟ್ರೆಂಡಿಂಗ್‌ನಲ್ಲಿರೋ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕೋರ್ಸ್ (Artificial Intelligence and Machine Learning) ಮಾಡಿರಬೇಕು.

Cybersecurity: ಇದು ಡಿಜಿಟಲ್ ಯುಗವಾಗಿದ್ದು, ಅದಕ್ಕೆ ಸಂಬಂಧಿಸಿದ Security analysis, Penetration testing, Incident response ಕೋರ್ಸ್ ಹೊಂದಿರಬೇಕು.

Product Strategy:ಉತ್ಪನ್ನ ಅಭಿವೃದ್ಧಿ, ನಿರ್ವಹಣೆ ಮತ್ತು ಮಾರ್ಕೆಟಿಂಗ್ ಕಲಿತುಕೊಳ್ಳಬೇಕು.

Web Development: ಜಾವಾಸ್ಕ್ರಿಪ್ಟ್, ಪೈಥಾನ್ ಅಥವಾ ರೂಬಿಯಂತಹ ಮಾಸ್ಟರ್ ವೆಬ್ ವಿನ್ಯಾಸ, ಅಭಿವೃದ್ಧಿ ಮತ್ತು ಪ್ರೋಗ್ರಾಮಿಂಗ್ ಭಾಷೆಗಳನ್ನು ತಿಳಿದುಕೊಂಡಿರಬೇಕಾಗುತ್ತದೆ.

Content Creation: ಬರವಣಿಗೆ, ವಿಡಿಯೋ ಪ್ರೊಡಕ್ಷನ್ ಅಥವಾ ಗ್ರಾಫಿಕ್ ವಿನ್ಯಾಸ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ.

ಲಾಭದಾಯಕ ಹುದ್ದೆಗಳು (Lucrative Career Paths)

Software Development: ಅಪ್‌ವರ್ಕ್ ಅಥವಾ ಫೈವರ್‌ನಂತಹ ವಿವಿಧ ಪ್ಲಾಟ್‌ಫಾರಂಗಳಲ್ಲಿ ಕೆಲಸ ಮಾಡಿದ್ರೆ ಸಂಬಳ ಅಧಿಕವಾಗಿರುತ್ತದೆ. ಈ ಹುದ್ದೆಗಳಲ್ಲಿ ಸಂಭಾವ್ಯ ಗಳಿಕೆ ವರ್ಷಕ್ಕೆ ₹1.1 ಲಕ್ಷದಿಂದ ₹9.0 ಲಕ್ಷ ರೂಪಾಯಿ ಆಗಿರುತ್ತದೆ.

Content Writing: ವ್ಯವಹಾರ, ಸಿನಿಮಾ ಸೇರಿದಂತೆ ಇತರೆ ವೆಬ್‌ಸೈಟ್‌ಗಳಿಗೆ ಉತ್ತಮ ಗುಣಮಟ್ಟದ ವಿಷಯ ಬರವಣಿಗೆ ನೀಡಬಹುದು. ಈ ಉದ್ಯೋಗಕ್ಕೆ ವಾರ್ಷಿಕ ₹2.59 ಲಕ್ಷ ಸಂಬಳ ಸಿಗುತ್ತದೆ.

Online Tutoring: ಆನ್‌ಲೈನ್ ಕ್ಲಾಸ್ ನೀಡುವ ಮೂಲಕ ಒಳ್ಳೆಯ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಆನ್‌ಲೈನ್ ಕ್ಲಾಸ್ ಗಂಟೆಗೆ 200 ರೂ.ಗಳಿಂದ 300 ರೂ.ವರೆಗೆ ಸಂಪಾದಿಸಬಹುದು.

Digital Marketing: SEO, ಸಾಮಾಜಿಕ ಮಾಧ್ಯಮ ನಿರ್ವಹಣೆ ಮತ್ತು ಅಂಗಸಂಸ್ಥೆ ಮಾರ್ಕೆಟಿಂಗ್‌ ಉದ್ಯೋಗವನ್ನು ಪಾರ್ಟ್‌ ಟೈಮ್ ರೀತಿಯಲ್ಲಿ ಮಾಡಿ ತಿಂಗಳಿಗೆ ₹30,000 ರಿಂದ ₹2,00,000 ಸಂಪಾದನೆ ಮಾಡಬಹುದು.

ಹೆಚ್ಚು ಸಂಬಳದ ಹುದ್ದೆಗಾಗಿ ಪ್ರಮುಖ ಸಲಹೆಗಳು

ಕ್ಲೈಂಟ್‌ ಅಥವಾ ಉದ್ಯೋಗದಾತರನ್ನು ಆಕರ್ಷಿಸಲು ನಿಮ್ಮ ಕೌಶಲ್ಯ ಮತ್ತು ಯೋಜನೆಯ ಮಾಹಿತಿಯನ್ನು ಒಳಗೊಂಡಿರುವ ಪೋರ್ಟ್‌ಫೋಲಿಯೊ ಕ್ರಿಯೇಟ್ (Build a strong portfolio) ಮಾಡಿಕೊಳ್ಳಬೇಕು. ಉತ್ತಮ ಉದ್ಯೋಗಾವಕಾಶ ಸೃಷ್ಟಿಸಿಕೊಳ್ಳಲು ನಿಮ್ಮ ವೃತ್ತಿಪರ ನೆಟ್‌ವರ್ಕ್ (professional network) ವಿಸ್ತರಿಸಿಕೊಳ್ಳಬೇಕಾಗುತ್ತದೆ. ನಿರಂತರವಾಗಿ ಕಲಿಕೆ, ಉದ್ಯಮದ ಪ್ರವೃತ್ತಿ, ಬದಲಾವಣೆಯನ್ನು ಒಪ್ಪಿಕೊಂಡು ರೂಢಿಸಿಕೊಳ್ಳಬೇಕು. ಮುಖ್ಯ ಉದ್ಯೋಗದ ಜೊತೆ ಕೆಲಸದ ಅನುಭವ (income and gain experience) ನಿಮ್ಮದಾಗಿಸಿಕೊಳ್ಳಿ. ಆನ್‌ಲೈನ್ ಕೋರ್ಸ್ ಸೇರಿಕೊಂಡು ನಿಮ್ಮ ಸಾಮರ್ಥ್ಯವನ್ನು (Share your expertise) ಹೆಚ್ಚಿಸಿಕೊಳ್ಳಿ.

ಅತ್ಯುತ್ತಮ ಕೋರ್ಸ್‌ಗಳು Best Courses

  • ಅಪ್‌ಗ್ರಾಡ್ upGrad: AI, ಡೇಟಾ ಸೈನ್ಸ್ ಮತ್ತು ಸೈಬರ್ ಭದ್ರತೆಯಲ್ಲಿ ಹೊಂದಿಕೊಳ್ಳುವ ಮತ್ತು ಉದ್ಯಮ-ಸಂಬಂಧಿತ ಕೋರ್ಸ್‌ಗಳನ್ನು ನೀಡುತ್ತದೆ.
  • ಉಡೆಮಿ Udemy: ವೆಬ್ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಹಣಕಾಸು ಸೇರಿದಂತೆ ವಿವಿಧ ವಿಷಯಗಳ ಕುರಿತು ಕೋರ್ಸ್‌ಗಳನ್ನು ಒದಗಿಸುತ್ತದೆ.
  • ಕೋರ್ಸೆರಾ Coursera: ಉನ್ನತ ವಿಶ್ವವಿದ್ಯಾಲಯ ನೀಡುವ AI, ಯಂತ್ರ ಕಲಿಕೆ ಮತ್ತು ಹೆಚ್ಚಿನವುಗಳ ಕುರಿತು ಕೋರ್ಸ್‌ ಆಯ್ಕೆ ಮಾಡಿಕೊಂಡು ನಿಮ್ಮ ಪರಮಿತಿಯನ್ನು ವಿಸ್ತರಿಸಿಕೊಳ್ಳಿ.

ಹೆಚ್ಚುವರಿ ತಂತ್ರಗಳು-Additional Strategies

ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ (Affiliate marketing) ಪ್ರಚಾರ ಮಾಡುವ ತಿಂಗಳಿಗೆ ₹25,000 ರಿಂದ ₹2,00,000 ಸಂಪಾದಿಸಬಹುದು. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳನ್ನು (Selling online products) ಬಳಸಿಕೊಂಡು ನಿಮ್ಮದೇ ಸ್ವಂತ ವಸ್ತುಗಳನ್ನು ಮಾರಾಟ ಮಾಡಿ ತಿಂಗಳಿಗೆ ₹50,000 ರಿಂದ ₹3,00,000 ಸಂಪಾದಿಸಬಹುದು. YouTube ಅಥವಾ ಬ್ಲಾಗಿಂಗ್ (YouTube or blogging) ಇಂದು ಜನರು ತಿಂಗಳಿಗೆ ₹50,000 ರಿಂದ ₹5,00,000 ಹಣ ಗಳಿಸುತ್ತಾರೆ.

ಬೇಡಿಕೆಯಲ್ಲಿರುವ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವ ಮೂಲಕ, ಸ್ಟ್ರಾಂಗ್ ಪೋರ್ಟ್‌ಫೋಲಿಯೊವನ್ನು ಕ್ರಿಯೇಟ್ ಮಾಡಿಕೊಂಡು, ಉದ್ಯಮಶೀಲತಾ ಅವಕಾಶಗಳನ್ನು ಬಳಸಿಕೊಂಡ್ರೆ ನಿಮ್ಮ ವೃತ್ತಿಜೀವನದ ಮೊದಲ ವರ್ಷದಲ್ಲಿ ₹20 ಲಕ್ಷ ಗಳಿಸುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.