ಆನ್‌ಲೈನ್ ಶಾಪಿಂಗ್‌ಗೆ ಕ್ರೆಡಿಟ್ ಕಾರ್ಡ್ ಬಳಸಲು, SBI ಮತ್ತು ICICI ಕಾರ್ಡ್‌ಗಳನ್ನು ಆಕ್ಟಿವೇಟ್ ಮಾಡುವುದು ಅಗತ್ಯ. ಕಾರ್ಡ್ ಆಕ್ಟಿವೇಟ್ ಮಾಡುವ ಬಗ್ಗೆ ಇಲ್ಲಿ ಹಂತ-ಹಂತದ ಮಾರ್ಗದರ್ಶನ ಇದೆ.

ಇದು ಆನ್‌ಲೈನ್‌ನಲ್ಲೇ ಎಲ್ಲವನ್ನೂ ಖರೀದಿಸುವ ಕಾಲ ಸೂಜಿದಾರದಿಂದ ಹಿಡಿದು ವಾಶಿಂಗ್ ಮೆಷಿನ್, ಗ್ರೈಂಡರ್ ಪ್ರಿಡ್ಜ್‌ವರೆಗೆ ಪ್ರತಿಯೊಂದನ್ನು ಜನ ಆನ್‌ಲೈನ್‌ನಲ್ಲೇ ಖರೀದಿಸುತ್ತಾರೆ. ಹೀಗಿರುವಾಗ ಕೆಲವು ದುಬಾರಿ ವಸ್ತುಗಳನ್ನು ಖರೀದಿಸುವ ಸಮಯದಲ್ಲಿ ಆನ್‌ಲೈನ್ ಹಣ ವರ್ಗಾವಣೆ ಮಾಡಬೇಕಾಗುತ್ತದೆ. ಕೆಲವು ಆನ್‌ಲೈನ್ ವೆಬ್‌ಸೈಟ್‌ಗಳು ಹಬ್ಬ, ಸ್ವಾತಂತ್ರ ದಿನಾಚರಣೆ ಮುಂತಾದ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್‌ದಾರರಿಗೆ ಒಳ್ಳೆಯ ಆಫರ್‌ಗಳನ್ನು ನೀಡುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡಿಕೊಳ್ಳದಿದ್ದರೆ ಈ ಆಫರ್ ನಿಮಗೆ ಸಿಗುವುದಿಲ್ಲ. ಕೆಲವರಿಗೆ ಅದನ್ನು ಹೇಗೆ ಮಾಡುವುದು ಎಂಬುದು ಗೊತ್ತಿರುವುದಿಲ್ಲ, ಅವರಿಗಾಗಿ ಕೆಲ ಮಾಹಿತಿ ಇಲ್ಲಿದೆ.

ಇಲ್ಲಿ ಆನ್‌ಲೈನ್ ಬ್ಯಾಂಕಿಂಗ್‌ಗಾಗಿ ಎಸ್‌ಬಿಐ ಕಾರ್ಡನ್ನು ಹೇಗೆ ಬಳಸುವುದು ಎಂಬ ಬಗ್ಗೆ ಮಾಹಿತಿ ಇದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆನ್‌ಲೈನ್ ಶಾಪಿಂಗ್‌ಗಾಗಿ ಮೊದಲಿಗೆ ಎಸ್‌ಬಿಐನ ಆನ್‌ಲೈನ್ ಶಾಪಿಂಗ್ ಪ್ರಕ್ರಿಯೆಯನ್ನು ಆಕ್ಟಿವ್ ಮಾಡಬೇಕು.

ಮೊದಲಿಗೆ SBI ಕಾರ್ಡ್ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ 'Manage Card Usage' ಮೇಲೆ ಕ್ಲಿಕ್ ಮಾಡಿ ನಂತರ 'Card Transactions'ಗೆ ಹೋಗಿ 'Domestic Online Transactions' ಎಂಬ ಆಯ್ಕೆಯನ್ನು ಸಕ್ರಿಯಗೊಳಿಸಿ.

ನಿಮ್ಮ ಕಾರ್ಡ್‌ಗಳನ್ನು ಏಕೆ ಸಕ್ರಿಯಗೊಳಿಸಬೇಕು?

ಅಮೆಜಾನ್ ಪ್ರೈಮ್ ಡೇ ಸೇರಿದಂತೆ ಹಲವು ಆನ್‌ಲೈನ್‌ ಶಾಪಿಂಗ್ ವೆಬ್‌ಸೈಟ್‌ಗಳು ಸಾಕಷ್ಟು ಆಫರ್‌ಗಳನ್ನು ನಿಡುತ್ತವೆ. ಆ ಸಮಯದಲ್ಲಿ ಸುರಕ್ಷಿತವಾಗಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಲು ICICI ಮತ್ತು SBI ಕಾರ್ಡ್‌ಗಳಲ್ಲಿ ವಿಶೇಷ ಬ್ಯಾಂಕ್ ಕೊಡುಗೆಗಳನ್ನು ನೀಡುತ್ತವೆ. ಈ ರಿಯಾಯಿತಿಗಳು ಮತ್ತು ಕ್ಯಾಶ್‌ಬ್ಯಾಕ್ ಅನ್ನು ಅನ್‌ಲಾಕ್ ಮಾಡಲು ವಹಿವಾಟು ತೊಂದರೆಗಳಿಲ್ಲದೇ ಅಥವಾ ಯಾವುದೇ ನಿರಾಕರಣೆ ಇಲ್ಲದೇ ತಡೆರಹಿತ ಪಾವತಿಗಳನ್ನು ಮಾಡಲು ನಿಮ್ಮ ಕಾರ್ಡ್‌ಗಳನ್ನು ಆಕ್ಟಿವ್ ಮಾಡಬೇಕು.

ಹಾಗೆಯೇ ಐಸಿಐಸಿಐ ಕಾರ್ಡ್‌ ಹೊಂದಿರುವವರು ನೀವಾಗಿದ್ದರೆ, iMobile ಅಪ್ಲಿಕೇಶನ್ ಬಳಸಿ ಕ್ರೆಡಿಟ್ ಕಾರ್ಡ್‌ಗಳಿಗಾಗಿ ಆನ್‌ಲೈನ್ ಟ್ರಾನ್ಸ್ಷನ್ ಸಕ್ರಿಯಗೊಳಿಸಿ iMobile ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ 'Cards & Forex' ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿ 'Manage Card' ಮೇಲೆ ಟ್ಯಾಪ್ ಮಾಡಿ ಬಳಿಕ ನೆಟ್ ಬ್ಯಾಂಕಿಂಗ್ ಬಳಸಿ 'Limit for Online Transactions' ಸಕ್ರಿಯಗೊಳಿಸಿ ICICI ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಮಾಡಿ 'Cards & Loans' ಮೇಲೆ ಕ್ಲಿಕ್ ಮಾಡಿ ನಂತರ Credit Cards'ಗೆ ಹೋಗಿ