ಇದು ಎಐ ಯುಗ ಒಂದಲ್ಲ, ಒಂದು ಹೊಸ ಹೊಸ ಪ್ಯೂಚರ್‌ಗಳನ್ನು ಎಐ ಹೊರತರುತ್ತಿದ್ದು, ಕಲ್ಪನೆಗೊಂದು ಕಲೆಯ ರೂಪ ನೀಡುತ್ತಿದೆ. ಅದೇ ರೀತಿ ಈಗ ಗೂಗಲ್ ಜೆಮಿನಿಯ 'ನ್ಯಾನೋ ಬನಾನಾ ಟ್ರೆಂಡ್' ಬಳಸಿ ನೀವು ನಿಮ್ಮ ಫೋಟೋವನ್ನು ತ್ರಿಡಿ ರೂಪದಲ್ಲಿ ನೊಡಬಹುದಾಗಿದೆ.
ವೈರಲ್ ಆಗ್ತಿದೆ ಗೂಗಲ್ ಜೆಮಿನಿಯ ಹೊಸ ಟ್ರೆಂಡ್
ಇದು ಎಐ ಯುಗ ಒಂದಲ್ಲ, ಒಂದು ಹೊಸ ಹೊಸ ಪ್ಯೂಚರ್‌ಗಳನ್ನು ಎಐ ಹೊರತರುತ್ತಿದ್ದು, ಕಲ್ಪನೆಗೊಂದು ಕಲೆಯ ರೂಪ ನೀಡುತ್ತಿದೆ. ಫೋಟೋ ವೀಡಿಯೋ ಗ್ರಾಫಿಕ್ ಮೊದಲದ ಮಲ್ಟಿ ಮೀಡಿಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ದಿನ ದಿನವೂ ಹೊಸದಾದ ಅವಕಾಶಗಳನ್ನು ಈ ಎಐ ತೆರೆದಿಡುತ್ತಿದೆ. ಈಗ ಗೂಗಲ್‌ನ ಎಐ ಆಗಿರುವ ಗೂಗಲ್ ಜೆಮಿನಿ ಹೊಸದೊಂದು ಟ್ರೆಂಡ್ ಸೃಷ್ಟಿ ಮಾಡಿದ್ದು, ಈ ಟ್ರೆಂಡ್ ಸಾಮಾಜಿಕ ಜಾಲತಾಣಗಳು ಸೇರಿದಂತೆ ಇಂಟರ್‌ನೆಟ್‌ನಲ್ಲಿ ಸುಂಟರಗಾಳಿ ಎಬ್ಬಿಸಿದೆ. ಇದನ್ನು ಬಳಿಸಿಕೊಂಡು ಜನ ಉಚಿತವಾಗಿ ನೈಜವಾದ ತಮ್ಮದೇ ತ್ರಿಡಿ ಪ್ರತಿಮೆಗಳನ್ನು ಫೋಟೋಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಏನಿದು ನ್ಯಾನೋ ಬನಾನಾ ಟ್ರೆಂಡ್?
ಪ್ರಪಂಚದೆಲ್ಲೆಡೆಯ ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿರುವ ಇತ್ತೀಚಿನ ಎಐ ಟ್ರೆಂಡ್ ಎಂದರೆ ಅದು 'ನ್ಯಾನೋ ಬನಾನಾ ಟ್ರೆಂಡ್'(Nano Banana trend) ಇದನ್ನು ಗೂಗಲ್ ಕೃತಕ ಬುದ್ಧಿಮತ್ತೆಯಾಗಿರುವ ಗೂಗಲ್ ಜೆಮಿನಿ(Googles Gemini) ಸೃಷ್ಟಿ ಮಾಡಿದೆ. ಈ ವೈರಲ್ ಟ್ರೆಂಡ್ ಬಳಕೆದಾರರಿಗೆ ಹೈಪರ್ ರಿಯಲಿಸ್ಟಿಕ್ ಅಂದರೆ ಅತ್ಯಂತ ನೈಜವಾದ ತ್ರಿಡಿ ಫೋಟೋಗಳನ್ನು ಅವರೇ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ತಮ್ಮ ಇಷ್ಟದ ಸೆಲೆಬ್ರಿಟಿಗಳು ಸಾಕುಪ್ರಾಣಿಗಳ ನೈಜವಾದ ತ್ರಿಡಿ ಫೋಟೋಗಳನ್ನು ಇವುಗಳಿಂದ ಮಾಡಿಕೊಳ್ಳಬಹುದು.
ಇದನ್ನು ಮಾಡುವುದಕ್ಕೆ ಸುಲಭ ಹಾಗೂ ಇದರ ಪ್ರಕ್ರಿಯೆಯೂ ಸುಲಭವಾಗಿರುವುದರ ಜೊತೆಗೆ ಅದರ ಫಲಿತಾಂಶವೂ ತುಂಬಾ ಸೂಪರ್ ಎನಿಸಿದ್ದರಿಂದಾಗಿ ಈ ಟ್ರೆಂಡ್ ಕೆಲ ಗಂಟೆಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತು. ಇದಕ್ಕೆ ಯಾವುದೇ ತಾಂತ್ರಿಕ ಕ್ಷಮತೆ ಬೇಕಿಲ್ಲ ಹಾಗೂ ಹಣಪಾವತಿ ಮಾಡಬೇಕಾದ ಅಗತ್ಯವೂ ಇಲ್ಲ, ಬಳಕೆದಾರರು ಇದರಲ್ಲಿರುವವ ಆಯ್ಕೆಗಳನ್ನು ಬಳಸಿಕೊಂಡು ಮಿನಿಯೇಚರ್‌ಗಳನ್ನು ಅಥವಾ ತಮ್ಮದೇ ಆಕೃತಿಯಷ್ಟು ದೊಡ್ಡದಾದ ಪ್ರತಿಮೆಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ.
ಈ ಟ್ರೆಂಡ್‌ನ್ನು ಬಳಸಿಕೊಳ್ಳಲು ಅಥವಾ ಈ ಟ್ರೆಂಡ್‌ನ ಭಾಗವಾಗಲು ಬಳಕೆದಾರರು ಕೇವಲ ಒಂದು ಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಜೆಮಿನಿ ಪ್ಲಾಟ್‌ಫಾರ್ಮ್‌ನಲ್ಲಿ ಒದಗಿಸಲಾದ ಪ್ರಾಂಪ್ಟ್ ಅನ್ನು ಬಳಸಬೇಕು. ಇದು 3D ಫಿಗರ್ ಅನ್ನು ವರ್ಚುವಲ್ ಡೆಸ್ಕ್‌ಟಾಪ್‌ನಲ್ಲಿ ರೆಂಡರ್ ಮಾಡುತ್ತದೆ ಮತ್ತು ಹತ್ತಿರದ ಪರದೆಯಲ್ಲಿ ಮಾಡೆಲ್ ಹೇಗಿದೆ ಎಂಬುದನ್ನು ಮೊದಲೇ ನೋಡುವುದಕ್ಕೆ ಪೂರ್ವ ವೀಕ್ಷಣೆಯ ಅವಕಾಶವನ್ನು ನೀಡುತ್ತದೆ.
ಭಾರತದ ಸೋಶಿಯಲ್ ಮೀಡಿಯಾ ಈ ಟ್ರೆಂಡ್‌ನ್ನು ಬಹಳ ಉತ್ಸಾಹದಿಂದ ಕೈ ಬೀಸಿ ಸ್ವಾಗತಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಸರ್ಮಾ ಅವರು ಕೂಡ ಇದನ್ನು ಬಳಸಿ ತಮ್ಮ ಪ್ರತಿಮೆಯನ್ನು ನಿರ್ಮಿಸಿಕೊಂಡಿದ್ದು, ತಮ್ಮ ಯುವ ಗೆಳೆಯನೋರ್ವ ಇದನ್ನು ಮಾಡುವುದಕ್ಕೆ ನನಗೆ ಪ್ರೋತ್ಸಾಹ ನೀಡಿದ ಎಂದು ಬರೆದುಕೊಂಡಿದ್ದಾರೆ.
ಗೂಗಲ್ ನೀಡಿದ ಮಾಹಿತಿ ಪ್ರಕಾರ ಈ ಸೌಲಭ್ಯವೂ ಸಂಪೂರ್ಣ ಉಚಿತವಾಗಿದ್ದು, ಗೂಗಲ್‌ನ ಜೆಮಿನಿ ಆಪ್ ಮೂಲಕ ಎಲ್ಲರೂ ಇದನ್ನು ಉಚಿತವಾಗಿ ಬಳಸಿಕೊಳ್ಳಬಹುದು.
ಫೋಟೋವನ್ನು ಮಾಡಿಕೊಳ್ಳುವುದು ಹಾಗೂ ಎಡಿಟಿಂಗ್ ಜೆಮಿನಿ ಆಪ್‌ನಲ್ಲಿ ಎಲ್ಲರಿಗೂ ಉಚಿತ ಎಂದು ಮಾಹಿತಿ ನೀಡಲಾಗಿದೆ.
ನ್ಯಾನೋ ಬನಾನಾ ಟ್ರೆಂಡ್‌ನಲ್ಲಿ ಭಾಗಿಯಾಗೋದು ಹೇಗೆ?
ನೀವು ಈ ಟ್ರೆಂಡ್‌ನಲ್ಲಿ ಭಾಗವಹಿಸಲು ಇಷ್ಟಪಡ್ತಿರಾ ಹಾಗಿದ್ರೆ ನೀವು ಮಾಡಬೇಕಾಗಿದ್ದು, ಇಷ್ಟೇ ಇಲ್ಲಿ ನ್ಯಾನೋ ಬನಾನಾ ತ್ರಿಡಿ ಫಿಗರ್ ನಿರ್ಮಿಸಿಕೊಳ್ಳುವುದಕ್ಕೆ ಹಂತ ಹಂತವಾದ ಮಾಹಿತಿ ಇದೆ.
1. ಮೊದಲನೇಯದಾಗಿ ಗೂಗಲ್ ಜೆಮಿನಿಯನ್ನು ಒಪನ್ ಮಾಡಿ(ಗೂಗಲ್ ಎಐ ಸ್ಟುಡಿಯೋ)
2. ನೀವು ಬದಲಾವಣೆ ಮಾಡಲು ಬಯಸುವ ಯಾವುದೇ ಒಂದು ಫೋಟೋವನ್ನು ಈ ಆಪ್‌ಗೆ ಅಪ್‌ಲೋಡ್ ಮಾಡಿ.
3. ನಂತರ ಆ ಪ್ರಾಂಪ್ಟ್‌ನ್ನು ಹೇಗಿದೆಯೋ ಹಾಗೆ ಕಾಪಿ ಪೇಸ್ಟ್ ಮಾಡಿ.
4. ನಂತರ ಜನರೇಟ್ ಕ್ಲಿಕ್ ಮಾಡಿ ಮತ್ತು ನಿಮ್ಮ 3D ಪ್ರತಿಮೆಯ ಚಿತ್ರ ಕಾಣಿಸಿಕೊಳ್ಳಲು ಕೆಲವು ಸೆಕೆಂಡುಗಳು ಕಾಯಿರಿ.
5. ಬಂದ ಫಲಿತಾಂಶವನ್ನು ಪರಿಶೀಲಿಸಿ, ಮತ್ತು ಅಗತ್ಯವಿದ್ದರೆ, ನಿಮ್ಮ ಪ್ರಾಂಪ್ಟ್ ಅನ್ನು ಬದಲಿಸಿಕೊಳ್ಳಬಹುದು ಅಥವಾ ಹೊಸ ರಚನೆಗಾಗಿ ಬೇರೆ ಫೋಟೋ ಬಳಸಬಹುದು.
ಇದನ್ನೂ ಓದಿ: ಚಲಿಸುವ ರೈಲಿನಿಂದ ಹಾರಿ ಆಸ್ಪತ್ರೆಗೆ ದಾಖಲಾದ ರಾಗಿಣಿ ಎಂಎಂಎಸ್ ನಟಿ ಕರಿಷ್ಮಾ ಶರ್ಮಾ
ಇದನ್ನೂ ಓದಿ: ಅಮೆರಿಕಾದಲ್ಲಿ ಕರ್ನಾಟಕ ಮೂಲದ ಮ್ಯಾನೇಜರ್ ತಲೆಕಡಿದು ಚೆಂಡಾಡಿದ ಕೆಲಸದವ
