ಸೆಪ್ಟಂಬರ್​ ತಿಂಗಳಿನಲ್ಲಿ ಬ್ಯಾಂಕ್​ಗೆ ಹೋಗುವ ಕೆಲ್ಸ ಇದ್ಯಾ? ಹಾಗಿದ್ದರೆ ರಜಾ ದಿನಗಳ ಬಗ್ಗೆ ಮೊದಲು ಚೆಕ್​ ಮಾಡಿಕೊಳ್ಳಿ. ಇಲ್ಲಿದೆ ಡಿಟೇಲ್ಸ್​... 

ಈಗ ಎಷ್ಟೇ ಡಿಜಿಟಲ್​ ಪೇಮೆಂಟ್​ ಆಗಿದ್ದರೂ, ವಹಿವಾಟುಗಳೆಲ್ಲವೂ ಮೊಬೈಲ್​ ಮೂಲಕವೇ ನಡೆಯುತ್ತಿದ್ದರೂ ಬ್ಯಾಂಕ್​ಗಳಿಗೆ ಹೋಗುವ ಕೆಲಸ ಇದ್ದೇ ಇರುತ್ತದೆ. ಹಿಂದಿನಷ್ಟು ಕೆಲಸ ಇಲ್ಲದಿದ್ದರೂ ಕೆಲವು ಕೆಲಸಗಳಿಗೆ ಬ್ಯಾಂಕ್​ಗೆ ಖುದ್ದು ಹೋಗುವ ಕೆಲಸ ಇರುತ್ತದೆ. ಹೇಳಿ ಕೇಳಿ ಈಗ ಹಬ್ಬಗಳ ತಿಂಗಳುಗಳು. ಆದ್ದರಿಂದ ಬ್ಯಾಂಕ್​ಗೆ ಹೋಗುವ ಪ್ಲ್ಯಾನ್​ ಇದ್ದರೆ ಸೆಪ್ಟೆಂಬರ್​ನಲ್ಲಿ ಎಷ್ಟು ದಿನ ರಜೆ ಇವೆ ಎನ್ನುವುದನ್ನು ಒಮ್ಮೆ ನೋಡಿಬಿಡಿ. ಇದರಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ಬ್ಯಾಂಕ್​ಗಳ ರಜೆಗಳ ಲಿಸ್ಟ್​ ಕೂಡ ನೀಡಲಾಗಿದೆ. ನಿಮ್ಮದು ಯಾವ ಬ್ಯಾಂಕ್​ ಎನ್ನುವುದನ್ನು ಗಮನಿಸಿ, ರಜೆಗಳ ಬಗ್ಗೆ ಮಾಹಿತಿ ಪಡೆಯಿರಿ.

ದೇಶದ ವಿವಿಧ ಬ್ಯಾಂಕ್​ಗಳ ಕುರಿತು ಹೇಳುವುದಾದರೆ, ಈದ್ ಮಿಲಾದ್, ಓಣಂ ಹಬ್ಬ ಸೇರಿ ಒಟ್ಟು 15 ದಿನಗಳ ರಜೆ ಬ್ಯಾಂಕ್​ಗೆ ಇದೆ. ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಸೇರಿ 15 ದಿನಗಳ ರಜೆ ಇದೆ. ಕೆಲವು ರಾಜ್ಯಗಳಲ್ಲಿ ಕೆಲವು ದಿನ ವಿಶೇಷವಾಗಿರುವ ಕಾರಣ, ಆಯಾ ರಾಜ್ಯಗಳಲ್ಲಿ ದುರ್ಗಾ ಪೂಜೆ, ಮಹಾ ಅಷ್ಟಮಿ, ದುರ್ಗಾಷ್ಟಮಿ ಇತ್ಯಾದಿ ಹಬ್ಬಗಳಿಗೆ ರಾಜ್ಯಗಳನ್ನು ಅನುಸರಿಸಿ ರಜೆ ನೀಡಲಾಗುತ್ತದೆ. ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ, ರಾಜ್ಯದಲ್ಲಿ ಶನಿವಾರ ಮತ್ತು ಭಾನುವಾರದ ರಜೆ ಬಿಟ್ಟರೆ ಸೆ. 5ಕ್ಕೆ ಈದ್ ಮಿಲಾದ್ ಪ್ರಯುಕ್ತ ರಜೆ ಇರುತ್ತದೆ. ಇದರ ಅರ್ಥ 2-4ನೇ ಶನಿವಾರ ಮತ್ತು ಎಲ್ಲಾ ಭಾನುವಾರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಸೆಪ್ಟೆಂಬರ್​ 5ಕ್ಕೆ ಮಾತ್ರ ಬ್ಯಾಂಕ್​ ರಜೆಗಳು ಇವೆ.

ಬ್ಯಾಂಕುಗಳ ಕಚೇರಿಗಳಿಗೆ ರಜೆ ಇದ್ದರೂ ಆನ್​ಲೈನ್​ ವಹಿವಾಟಿನಲ್ಲಿ ವ್ಯತ್ಯಯ ಇಲ್ಲ. ಅವು ಚಾಲ್ತಿಯಲ್ಲಿರುತ್ತವೆ. ಕ್ಯಾಷ್ ವಿತ್​ಡ್ರಾಯಲ್​ಗೆ ಎಟಿಎಂಗಳು 24 ಗಂಟೆಯೂ ತೆರೆದಿರುತ್ತವೆ. ನೆಟ್​ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್​ಗಳ ಸೇವೆ ನಿರಂತರವಾಗಿ ಲಭ್ಯ ಇರುತ್ತವೆ. ಆದರೆ, ಡಿಮ್ಯಾಂಡ್ ಡ್ರಾಫ್ಟ್, ಕ್ಯಾಷ್ ಡೆಪಾಸಿಟ್, ಆರ್​ಟಿಜಿಎಸ್, ಅರ್ಜಿ ಸಲ್ಲಿಕೆ ಇತ್ಯಾದಿ ಕಾರ್ಯಗಳಿಗೆ ಬ್ಯಾಂಕ್​ಗೆ ಹೋಗುವವರು ಸೆಪ್ಟೆಂಬರ್​ 5 ಅನ್ನು ಗಮನದಲ್ಲಿ ಇಟ್ಟುಕೊಂಡರೆ ಸಾಕು.

ಸೆಪ್ಟೆಂಬರ್​ನಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು

ಸೆ. 5, ಶುಕ್ರವಾರ: ಈದ್ ಮಿಲಾದ್

ಸೆ. 7: ಭಾನುವಾರ

ಸೆ. 13: ಎರಡನೇ ಶನಿವಾರ

ಸೆ. 14: ಭಾನುವಾರ

ಸೆ. 21: ಭಾನುವಾರ

ಸೆ. 27: ನಾಲ್ಕನೇ ಶನಿವಾರ

ಸೆ. 28: ಭಾನುವಾರ

ಇನ್ನು ಬೇರೆ ಬೇರೆ ರಾಜ್ಯಗಳ ಬಗ್ಗೆ ಹೇಳುವುದಾದರೆ...

- ಸೆಪ್ಟೆಂಬರ್ 3, 2025 ರಂದು (ಬುಧವಾರ):ಜಾರ್ಖಂಡ್‌ನಲ್ಲಿ ಸೆಪ್ಟೆಂಬರ್ 3, 2025 ರಂದು ಕರ್ಮ ಪೂಜೆಯ ನಿಮಿತ್ತ ಬ್ಯಾಂಕ್‌ಗಳಿಗೆ ರಜೆ.

- ಸೆಪ್ಟೆಂಬರ್ 4, 2025 ರಂದು (ಗುರುವಾರ): ಮೊದಲ ಓಣಂ ಹಬ್ಬಕ್ಕಾಗಿ ಕೇರಳದಲ್ಲಿ ಸೆಪ್ಟೆಂಬರ್ 4, 2025 ರಂದು ಬ್ಯಾಂಕ್‌ಗಳಿಗೆ ರಜೆ.

- ಸೆಪ್ಟೆಂಬರ್ 5, 2025 ರಂದು (ಶುಕ್ರವಾರ): ಈದ್-ಇ-ಮಿಲಾದ್ ಮತ್ತು ತಿರುವೋಣಂ ಸಂದರ್ಭದಲ್ಲಿ ಗುಜರಾತ್, ಮಿಜೋರಾಂ, ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು, ಉತ್ತರಾಖಂಡ, ಹೈದರಾಬಾದ್, ವಿಜಯವಾಡ, ಮಣಿಪುರ, ಜಮ್ಮು, ಉತ್ತರ ಪ್ರದೇಶ, ಕೇರಳ, ನವದೆಹಲಿ, ಜಾರ್ಖಂಡ್, ಜಮ್ಮು ಮತ್ತು ಶ್ರೀನಗರ.

- ಸೆಪ್ಟೆಂಬರ್ 6, 2025 ರಂದು (ಶನಿವಾರ): ಈದ್-ಇ-ಮಿಲಾದ್ (ಮಿಲಾದ್-ಉನ್-ನಬಿ)/ಇಂದ್ರಜತ್ರದಂದು ಸಿಕ್ಕಿಂ ಮತ್ತು ಛತ್ತೀಸ್‌ಗಢ

- ಸೆಪ್ಟೆಂಬರ್ 12, 2025 ರಂದು (ಶುಕ್ರವಾರ): ಈದ್-ಇ-ಮಿಲಾದ್-ಉಲ್-ನಬಿ ನಂತರದ ಶುಕ್ರವಾರದಂದು ಜಮ್ಮು ಮತ್ತು ಶ್ರೀನಗರ.

- ಸೆಪ್ಟೆಂಬರ್ 22, 2025 ರಂದು (ಸೋಮವಾರ): ನವರಾತ್ರಿ ಸ್ಥಾಪನೆಯ ಸಂದರ್ಭದಲ್ಲಿ ರಾಜಸ್ಥಾನದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

- ಸೆಪ್ಟೆಂಬರ್ 23, 2025 ರಂದು (ಶನಿವಾರ): ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮದಿನದ ಸ್ಮರಣಾರ್ಥ ಜಮ್ಮು ಮತ್ತು ಶ್ರೀನಗರದಲ್ಲಿ ರಜೆ.

- ಸೆಪ್ಟೆಂಬರ್‌ 29, 2025 (ಸೋಮವಾರ): ಮಹಾ ಸಪ್ತಮಿ, ದುರ್ಗಾ ಪೂಜೆಯನ್ನು ಆಚರಿಸಲು ತ್ರಿಪುರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ.

- ಸೆಪ್ಟೆಂಬರ್ 30, 2025 ರಂದು (ಮಂಗಳವಾರ): ತ್ರಿಪುರ, ಒಡಿಶಾ, ಅಸ್ಸಾಂ, ಮಣಿಪುರ, ರಾಜಸ್ಥಾನ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಸೆಪ್ಟೆಂಬರ್ 30, 2025 ರಂದು ಮಹಾ ಅಷ್ಟಮಿ/ದುರ್ಗಾ ಅಷ್ಟಮಿ/ದುರ್ಗಾ ಪೂಜೆಯಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ.