ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ BMTC ಫೀಡರ್ ಬಸ್ ಸೇವೆ ಆರಂಭವಾಗಿದೆ. 12 ಬಸ್‌ಗಳು 96 ಟ್ರಿಪ್‌ಗಳನ್ನು ನಡೆಸಲಿದ್ದು, ಎಲೆಕ್ಟ್ರಾನಿಕ್ ಸಿಟಿ ಮತ್ತು ಕೊಡತಿ ವಿಪ್ರೋ ನಡುವೆ ಸಂಚರಿಸಲಿವೆ.

ಬೆಂಗಳೂರು: ಆಗಸ್ಟ್ 11ರಿಂದ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿರುವ ಹಳದಿ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿಯೊಂದನ್ನು ನೀಡಿದೆ. BMTC ಹಳದಿ ಮೆಟ್ರೋ ನಿಲ್ದಾಣಗಳಿಂದ ಫೀಡರ್ ಬಸ್ ಸರ್ವಿಸ್ ಆರಂಭಿಸಿದೆ. ಪ್ರತಿದಿನ 12 BMTC ಬಸ್‌ಗಳು, 96 daily trip ಮಾಡಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿದಿನ ಬಿಎಂಟಿಸಿ 6,217 ಬಸ್‌ಗಳು ಚಲಿಸುತ್ತವೆ. ಈ ಬಸ್‌ಗಳಲ್ಲಿ ದಿನಕ್ಕೆ ಸುಮಾರು 44 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಬಸ್‌ಗಳು 65,206 ಟ್ರಿಪ್ ಮೂಲಕ 12.85 ಲಕ್ಷ ಕಿ.ಮೀ. ಕವರ್ ಮಾಡುತ್ತವೆ. ಈಗ ಹಳದಿ ಮೆಟ್ರೋ ಪ್ರಯಾಣಿಕರಿಗಾಗಿ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಹಿಂದೆ ಕೆ.ಆರ್. ಪುರಂ ರೈಲು ನಿಲ್ದಾಣ ಮತ್ತು ಬಿಟಿಎಂ ಲೇಔಟ್ ಬಸ್ ನಿಲ್ದಾಣದ ನಡುವೆ ಫೀಡರ್ ಬಸ್ ಸೇವೆ ಆರಂಭಿಸಲಾಗಿತ್ತು. ಹೊಸ ಫೀಡರ್ ಬಸ್ ಸೇವೆಯ ಮಾಹಿತಿ ಈ ಕೆಳಗಿನಂತಿದೆ.

Route MF-22

ಆರಂಭ: ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್

ಎಲ್ಲಿಗೆ: ಕೊಡತಿ ವಿಫ್ರೋ

ಮಾರ್ಗ: ಕೋನಪ್ಪನ ಅಗ್ರಹಾರ, ಹೊಸರೋಡ್, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ದೊಡ್ಡಕನಹಳ್ಳಿ

ಬಸ್ ಸಂಖ್ಯೆ: 4

ಟ್ರಿಪ್: 32

Route MF-22A

ಆರಂಭ: ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್

ಎಲ್ಲಿಗೆ: ಕೊಡತಿ ವಿಫ್ರೋ

ಮಾರ್ಗ: ಹೊಸ್ಕೂರು ಗೇಟ್, ಚಿಂತಲಾ ಮಡಿವಾಳ, ಮುತ್ತನಲ್ಲೂರು ಕ್ರಾಸ್, ತಿಮ್ಮಸಂದ್ರ ಕ್ರಾಸ್, ಚಂದಾಪುರ ಕ್ರಾಸ್

ಬಸ್ ಸಂಖ್ಯೆ: 4

ಟ್ರಪ್: 24

Route MF-22B (Chakra Route)

ಇದು ದೀರ್ಘ ಪ್ರಯಾಣ ಹೊಂದಿರುತ್ತದೆ. ಬೊಮ್ಮಸಂದ್ರ, ತಿರುಪಾಳ್ಯ ಕ್ರಾಸ್, S-Mando-3, ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, ಕೋನಪ್ಪನ ಅಗ್ರಾಹರ, ಹೆಬ್ಬಗೋಡಿ

ಬಸ್ ಸಂಖ್ಯೆ: 2

ಟ್ರಿಪ್: 20

Route MF-22C (Chakra Route)

ದೀರ್ಘ ಪ್ರಯಾಣ: ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ ವಿಪ್ರೋ ಗೇಟ್, S-Mando-3,ತಿರುಪಾಳ್ಯ ಕ್ರಾಸ್, ಹೆಬ್ಬಗೋಡಿ, ಬೊಮ್ಮಸಂದ್ರ

ಬಸ್ ಸಂಖ್ಯೆ: 2

ಟ್ರಿಪ್: 20

ರಾಮಲಿಂಗಾ ರೆಡ್ಡಿ ಎಕ್ಸ್ ಪೋಸ್ಟ್

ಬೆಂಗಳೂರು ಮೆಟ್ರೊ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ಬಿಎಂಟಿಸಿಯ ಹೊಸ ಮೆಟ್ರೊ ಫೀಡರ್ ಬಸ್ ಮಾರ್ಗಗಳನ್ನು ಹಳದಿ ಮಾರ್ಗದಲ್ಲಿ ಇಂದು ಉದ್ಘಾಟಿಸಿದೆ. ನಂತರ, ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಪ್ರಯಾಣ ಮಾಡಿದೆ— ಮೆಟ್ರೋ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಹಾಗೂ ವಿಶೇಷವಾಗಿ ಐಟಿ ವಲಯದ ಸಾವಿರಾರು ಪ್ರಯಾಣಿಕರಿಗೆ ಸಹಾಯ ಮಾಡಲಿದೆ. ಹಳದಿ ಮಾರ್ಗಕ್ಕೆ ಇನ್ನಷ್ಟು ಬೋಗಿಗಳನ್ನು ಸೇರ್ಪಡೆ ಮಾಡುವುದು ಮತ್ತು ಪೀಕ್ ಅವಧಿಯಲ್ಲಿ ರೈಲುಗಳ ಅವಧಿಯನ್ನು 5–10 ನಿಮಿಷಗಳಿಗೆ ಇಳಿಸುವುದು ಪ್ರಯಾಣವನ್ನು ಇನ್ನಷ್ಟು ಸುಗಮ, ವೇಗವಾದ ಹಾಗೂ ಸೌಕರ್ಯಯುತವಾಗಿಸುತ್ತದೆ.

ನಮ್ಮ ಮೆಟ್ರೊ ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚಿನ ಪಾಲನ್ನು ರಾಜ್ಯ ಸರ್ಕಾರ ನೀಡಿದೆ. ಶಾಸಕರಾದ ಶ್ರೀ ಎಂ. ಕೃಷ್ಣಪ್ಪ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ರಾಮಚಂದ್ರನ್. ಆರ್., ಐಎಎಸ್; ಶ್ರೀಮತಿ ಶಿಲ್ಪಾ ಎಂ., ಐಎಎಸ್; ಶ್ರೀ ಅಬ್ದುಲ್ ಅಹಾದ್, ಐಪಿಎಸ್ ಹಾಗೂ ಇಲೆಕ್ಟ್ರಾನಿಕ್ ಸಿಟಿ ಅಸೋಸಿಯೇಷನ್ ಪ್ರತಿನಿಧಿಗಳು ಹಾಜರಿದ್ದರು.

Scroll to load tweet…