ಬೆಂಗಳೂರಿಗೆ ಬಂತು ಎಐ ಬಿಲ್‌ಬೋರ್ಡ್, ನಿಮ್ಮ ವಾಹನ ಸ್ಕ್ಯಾನ್ ಮಾಡಿ ಬಾಕಿ ದಂಡ ಡಿಸ್‌ಪ್ಲೆ ಆಗಲಿದೆ. ನೀವು ಎಷ್ಟು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದೀರಿ ಅನ್ನೋದನ್ನು ಇಡಿ ಊರಿಗೆ ಹೇಳಲಿದೆ ಈ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಿಲ್‌ಬೋರ್ಡ್.

ಬೆಂಗಳೂರು (ಸೆ.24) ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹಲವರು ಬೇಸತ್ತಿದ್ದಾರೆ. ಇದಕ್ಕೆ ತಕ್ಕಮಟ್ಟಿನ ಪರಿಹಾರ ಸೂಚಿಸಲು ಪೊಲೀಸರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮೆರಾ, ಎಐ ಸಪೋರ್ಟೆಡ್ ಕಂಟ್ರೋಲ್ ರೂಂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ ಇ ಟ್ರಾಫಿಕ್ ಚಲನ್ ಕಳುಹಿಸಲಾಗುತ್ತಿದೆ. ಇದೀಗ ಬೆಂಗಳೂರಲ್ಲಿ ನೀವು ಟ್ರಾಫಿಕ್ ನಿಯಮ ಉಲ್ಲಂಘಿಸಿ, ದಂಡ ಬಾಕಿ ಉಳಿಸಿಕೊಂಡು ಓಡಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಿಲ್‍ಬೋರ್ಡ್ ಬಂದಿದೆ. ಈ ಬಿಲ್‌ಬೋಲ್ಡ್ ನೀವು ಪ್ರಯಾಣ ಮಾಡುತ್ತಿದ್ದಂತೆ ರಿಯಲ್ ಟೈಮ್‌ನಲ್ಲಿ ನಿಮ್ಮ ವಾಹನದ ನಿಯಮ ಉಲ್ಲಂಘಟನೆ, ಬಾಕಿ ದಂಡದ ಮಾಹಿತಿಯನ್ನು ಡಿಸ್‌ಪ್ಲೇ ಮಾಡಲಿದೆ.

100 ಮೀಟರ್ ದೂರದಿಂದಲೇ ವಾಹನ ಸ್ಕ್ಯಾನ್ ಮಾಡಲಿದೆ ಎಐ ಬೋರ್ಡ್

ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಈ ಎಐ ಬಿಲ್‌ಬೋರ್ಡ್ ಹಾಕಲಾಗಿದೆ. ಈ ಮಾರ್ಗದಲ್ಲಿ ಎಐ ಸ್ಕ್ಯಾನರ್ ಅಳವಡಿಸಲಾಗಿದೆ. ಸಿಗ್ನಲ್ ಬಳಿ ಅಳವಡಿಸಿರುವ ಕ್ಯಾಮೆರಾಗಳು 100 ಮೀಟರ್ ದೂರದಿಂದಲೇ ವಾಹನಗಳನ್ನು ಸ್ಕ್ಯಾನ್ ಮಾಡಲಿದೆ. ರಿಯಲ್ ಟೈಮ್‌ನಲ್ಲೇ ವಾಹನದ ಬಾಕಿ ದಂಡದ ಮಾಹಿತಿ, ನಿಯಮ ಉಲ್ಲಂಘನೆ ಮಾಹಿತಿಯನ್ನು ಈ ಎಐ ಬಿಲ್‌ಬೋರ್ಡ್ ಡಿಸ್‌ಪ್ಲೇ ಮಾಡಲಿದೆ.

ನಿಮ್ಮ ವಾಹನದ ಮೇಲಿರುವ ದಂಡದ ಮಾಹಿತಿಗಳನ್ನು ದೊಡ್ಡ ಬಿಲ್‌ಬೋರ್ಡ್ ಮೂಲಕ ಜಗಜ್ಜಾಹೀರಾಗಲಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ಹಾಗೂ ಕಾರ್ಸ್ 24 ಸಹಯೋಗದಲ್ಲಿ ಈ ಬಿಲ್‌ಬೋರ್ಡ್ ಅಳವಡಿಸಲಾಗಿದೆ. ಈ ಮೂಲಕ ವಾಹನ ಸವಾರರಿಗೆ ತಮ್ಮ ಚಾಲನೆಯಲ್ಲಿ ಎಷ್ಟು ಟ್ರಾಫಿಕ್ ನಿಯಮ ಉಲ್ಲಂಘನೆಯಾಗಿದೆ,ಸರಿಯಾಗಿ ಚಾಲನೆ ಮಾಡುತ್ತಿದ್ದೀರಾ ಅನ್ನೋ ಮಾಹಿತಿಯೂ ಸಿಗಲಿದೆ. ಹಲವು ಬಾರಿ ನಿಯಮ ಉಲ್ಲಂಘಿಸಿ ಕೊನೆಗೆ ಪೊಲೀಸರು ನಿಲ್ಲಿಸಿದಾಗ ಲಕ್ಷ ಲಕ್ಷ ರೂಪಾಯಿ ದಂಡವಿರುವ ಮಾಹಿತಿ ಮಾಲೀಕರಿಗೆ ಗೊತ್ತಾದ ಉದಾಹರಣೆಗಳಿದೆ. ಈ ರೀತಿಯ ಬಿಲ್‌ಬೋರ್ಡ್‌ನಿಂದ ರಿಯಲ್ ಟೈಮ್‌ನಲ್ಲೇ ವಾಹನದ ಬಾಕಿ ದಂಡದ ಮಾಹಿಕಿಗಳು ಲಭ್ಯವಾಗಲಿದೆ.

Scroll to load tweet…

ಸಾರ್ವಜನಿಕರ ಅಭಿಪ್ರಾಯವೇನು?

ಪ್ರತಿ ರಸ್ತೆಗಳಲ್ಲಿ ಈ ರೀತಿಯ ಬಿಲ್‌ಬೋರ್ಡ್ ಇರಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ವಾಹನದ ದಂಡದ ಮಾಹಿತಿ, ನಿಯಮ ಉಲ್ಲಂಘನೆ ಮಾಹಿತಿಗಳು ಲಭ್ಯವಾಗುತ್ತದೆ. ಇಷ್ಟೇ ಅಲ್ಲ ವಾಹನ ಚಾಲಕರು, ಸವಾರರಿಗೆ ತಮ್ಮ ಡ್ರೈವಿಂಗ್, ರೈಡ್ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ. ಇತ್ತ ಈ ರೀತಿ ಬಿಲ್‌ಬೋರ್ಡ್‌ನಿಂದ ತಮ್ಮ ತಮ್ಮ ವಾಹನದಲ್ಲಿ ಎಷ್ಟು ಬಾಕಿ ದಂಡವಿದೆ ಎಂದು ನೋಡಲು ನಿಧಾನವಾಗಿ ಚಲಿಸುವ, ಅಥವಾ ನಿಲ್ಲಿಸುವ ಸಾಧ್ಯತೆ ಇದೆ. ಹೀಗಾಗಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.