ಇಲಿ ಹಿಡಿಯಲು ಹಾವನ್ನೇ ಬಿಟ್ಟ ವಿಡಿಯೋ ವೈರಲ್‌: ಸ್ಮಾರ್ಟ್‌ ಐಡಿಯಾ ಎಂದ ನೆಟ್ಟಿಗರು..!

Published : Jan 17, 2023, 05:01 PM IST
 ಇಲಿ ಹಿಡಿಯಲು ಹಾವನ್ನೇ ಬಿಟ್ಟ ವಿಡಿಯೋ ವೈರಲ್‌: ಸ್ಮಾರ್ಟ್‌ ಐಡಿಯಾ ಎಂದ ನೆಟ್ಟಿಗರು..!

ಸಾರಾಂಶ

ಅಂತರ್ಜಾಲದಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವನ್ನು ಬಳಸಿ ಮನೆಯಿಂದ ಇಲಿಗಳನ್ನು ತೆಗೆಯುತ್ತಿರುವ ದೃಶ್ಯ ಕಂಡು ಬಂದಿದೆ.

ಹಲವರ ಮನೆಗಳಲ್ಲಿ ಇಲಿ ಕಾಟ ಸಾಮಾನ್ಯವಾಗಿದೆ. ಇಲಿ ಹಿಡಿಯೋಕೆ ಬಲೆ ತರೋದು, ಅದರೊಳಗೆ ಆಹಾರ ಹಾಕೋದು ಮುಂತಾದುವನ್ನು ಮಾಡುವುದು ಸಾಮಾನ್ಯ. ಇನ್ನು, ಕೆಲವರಂತೂ ಇಲಿಗಳನ್ನು ಹಿಡಿಯೋಕೆ ಮನೆಯಲ್ಲಿ ಬೆಕ್ಕನ್ನು ಸಾಕುವುದನ್ನೂ ನೋಡಬಹುದು. ಹೀಗೆ ದಂಶಕಗಳ ಜಾತಿಯಾದ ಇಲಿ ಹಿಡಿಯೋಕೆ ಹಲವರು ನಾನಾ ವಿಧಾನಗಳನ್ನು ಬಳಸುತ್ತಾರೆ. ಆದರೆ, ಇದು ಯಾವಾಗಲೂ ಯಶಸ್ವಿಯಾಗೋದಿಲ್ಲ. ಮತ್ತು ಇಲಿಗಳ ಸಂಖ್ಯೆ ಹೆಚ್ಚಾದಷ್ಟು ನಿಮ್ಮ ಒತ್ತಡವೂ ಹೆಚ್ಚಾಗುತ್ತದೆ. ಆದರೆ, ಇಲ್ಲೊಬ್ಬರು ಇಲಿ ಹಿಡಿಯೋಕೆ ಹೊಸ ವಿಧಾನ ಬಳಸಿದ್ದಾರೆ. ಅದೇನಂತೀರಾ..? ಮುಂದೆ ಓದಿ..

ಅಂತರ್ಜಾಲದಲ್ಲಿ (Internet) ಇತ್ತೀಚೆಗೆ ಹರಿದಾಡುತ್ತಿರುವ ವಿಡಿಯೋದಲ್ಲಿ (Viral Video) ವ್ಯಕ್ತಿಯೊಬ್ಬ ಹಾವನ್ನು (Snake) ಬಳಸಿ ಮನೆಯಿಂದ ಇಲಿಗಳನ್ನು (Mice) ತೆಗೆಯುತ್ತಿರುವ ದೃಶ್ಯ ಕಂಡು ಬಂದಿದೆ. ಈತ ಅಳವಡಿಸಿಕೊಂಡ ತಂತ್ರ ಅಪಾಯಕಾರಿಯಾಗಿದ್ದು, ಇದಕ್ಕೆ ಅಂತರ್ಜಾಲದಲ್ಲಿ ವಿಭಿನ್ನ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವು ಬಳಕೆದಾರರನ್ನು ಇದನ್ನು ಸ್ಮಾರ್ಟ್‌ ಐಡಿಯಾ (Smart Idea), ಸಖತ್‌ ಐಡಿಯಾ ಎಂದಿದ್ದಾರೆ. ಹೀಗೆ,  ಕೆಲವು ಬಳಕೆದಾರರು ಅದನ್ನು ವಿಶಿಷ್ಟ ಎಂದು ಕಂಡುಕೊಂಡರೆ, ಇತರರು ಈ ವಿಡಿಯೋ ನಕಲಿ, ಇದನ್ನು ಮಾರ್ಫ್‌ (Morph) ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ನಿರ್ದಿಷ್ಟ ಸನ್ನಿವೇಶವನ್ನು ಪ್ರಸ್ತುತಪಡಿಸಲು ಈ ವಿಡಿಯೋವನ್ನು ಎಡಿಟ್‌ (Edit) ಮಾಡಲಾಗಿದೆ ಎಂದೂ ವಿಡಿಯೋ ರಚನೆಕಾರರ ವಿರುದ್ಧ ಆರೋಪಿಸಿದ್ದಾರೆ. 

ಇದನ್ನು ಓದಿ: ಇದು ಜೀವ ಝಲ್ ಅನ್ನಿಸುವ ಗಟ್ಟಿಗಿತ್ತಿಯ ಸರ್ಕಸ್: ಕಿಟಕಿಯಿಂದ ಬಸ್ ಒಳಗೆ ಯುವತಿ ಎಂಟ್ರಿಯಾಗಿದ್ದು ಹೇಗೆ ಗೊತ್ತಾ?

ಈಗ ವೈರಲ್ ಆಗಿರುವ ವಿಡಿಯೋ ನೋಡಿ:

ಈ ವಿಡಿಯೋದಲ್ಲಿರುವಂತೆ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ, ಇದು ಅಸಲಿಯೋ, ನಕಲಿಯೋ ಎಂಬ ಬಗ್ಗೆ ಈವರೆಗೆ ಮಾಹಿತಿ ತಿಳಿದುಬಂದಿಲ್ಲ. ಮತ್ತು ಇಂಟರ್‌ನೆಟ್‌ನಲ್ಲಿ ಸಾಮಾನ್ಯವಾಗಿ ಸಂಭವಿಸಿರುವಂತೆ ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ವಿಡಿಯೋದ ವಿಶಿಷ್ಟ ವಿಷಯವು ಬಹಳಷ್ಟು ಗಮನ ಸೆಳೆಯಿತು. ಈ ವಿಡಿಯೋವನ್ನು ಈವರೆಗೆ 7 ಮಿಲಿಯನ್‌ಗೂ ಹೆಚ್ಚು ನೆಟ್ಟಿಗರು ವೀಕ್ಷಿಸಿದ್ದು, ಮತ್ತು 1, 33,000 ಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ. 2 ನಿಮಿಷ 20 ಸೆಕೆಂಡ್‌ಗಳ ಈ ವಿಡಿಯೋವನ್ನು ಜನವರಿ 14 ರಂದು ಅಪ್‌ಲೋಡ್‌ ಮಾಡಲಾಗಿದ್ದು, ಈವರೆಗೆ 19 ಸಾವಿರ 800 ಬಾರಿ ರೀಟ್ವೀಟ್‌ ಆಗಿದೆ. 

ಈ ವಿಡಿಯೋದಿಂದ ವೀಕ್ಷಕರು ಆಶ್ಚರ್ಯಚಕಿತರಾಗಿದ್ದು ಮತ್ತು ಅವರು ಕಾಮೆಂಟ್ ವಿಭಾಗದಲ್ಲಿ ಹಲವಾರು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಹಾಗೆ, ಹಲವರು ಟೀಕೆಗಳನ್ನೂ ಮಾಡಿದ್ದಾರೆ. 

ಇದನ್ನೂ ಓದಿ: ಇವಳೇನು ಅರ್ಜುನನ ತಂಗಿಯೇ... ಬಿಲ್ಲಿನಂತೆ ಬಾಗಿ ಕಾಲಿನಲ್ಲೇ ಯುವತಿಯ ಬಿಲ್ಗಾರಿಕೆ

"ಸರಿ, ನೀವು ಇಲಿಗಳ ಸಮಸ್ಯೆಯನ್ನು ಹೋಗಲಾಡಿಸಿದ್ದೀರಿ; ಈಗ ನಿಮ್ಮ ಗೋಡೆಗಳಲ್ಲಿ ಹಾವು ಇದೆ’’ ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಮತ್ತೊಬ್ಬರು, ‘’ನನ್ನ ಮನೆಯ ಗೋಡೆಗಳಲ್ಲಿ ಇಲಿಗಳಿದ್ದರೂ ಪರವಾಗಿಲ್ಲ. ಆದರೆ ಹಾವನ್ನು ಹಿಡಿದುಕೊಳ್ಳಲು ನನಗೆ ಮನಸ್ಸಿಲ್ಲ " ಎಂದೂ ಇನ್ನೊಬ್ಬರು ಟ್ವೀಟಿಗರು ಬರೆದುಕೊಂಡಿದ್ದಾರೆ. 

ಹಾಗೆ, ಹಾವನ್ನು ಹೇಗೆ ಹಿಡಿಯುತ್ತೀರಿ ಎಂದೂ ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಅದೇ ರೀತಿ, ಇನ್ನೊಬ್ಬರು ಟಾಮ್‌ ಅಂಡ್‌ ಜೆರ್ರಿಯಲ್ಲಿ ಟಾಮ್‌ ಬದಲು ಇದೇ ಇರಬೇಕಿತ್ತು ಎಂದು ಒಬ್ಬರು ನೆಟ್ಟಿಗರು ಪ್ರಖ್ಯಾತ ಟಾಮ್‌ ಅಂಡ್‌ ಜೆರ್ರಿ ಕಾರ್ಟೂನ್‌ಗೆ ಇದನ್ನು ಹೋಲಿಸಿದ್ದಾರೆ. 

ಇದನ್ನು ಓದಿ: ಸ್ಕಿಪ್ಪಿಂಗ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ ಶ್ವಾನ: ವೈರಲ್ ವಿಡಿಯೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು